ನವದೆಹಲಿ: 2001FO32 Asteroid - ಅತ್ಯಂತ ದೊಡ್ಡ ಗಾತ್ರದ ಅಸ್ಟ್ರಾಯಿಡ್ ವೊಂದು ಭೂಮಿಯತ್ತ ಅತಿ ವೇಗದಿಂದ ಧಾವಿಸುತ್ತಿದೆ. ವಿಜ್ಞಾನಿಗಳು ಹೇಳುವ ಹಾಗೆ ಈ ಅಸ್ಟ್ರಾಯಿಡ್ ಭೂಮಿಯ ಹತ್ತಿರದಿಂದ ಹಾಯ್ದುಹೋದ ಎಲ್ಲ ಅಷ್ಟ್ರಾಯಿಡ್ ಗಳಲ್ಲಿ ಇದುವರೆಗಇನ ಅತ್ಯಂತ ದೊಡ್ಡ ಅಸ್ಟ್ರಾಯಿಡ್ ಇದಾಗಿದೆ. ಮಾರ್ಚ್ 21ರಂದು ಈ ಅಸ್ಟ್ರಾಯಿಡ್ ಭೂಮಿಯ ಅತ್ಯಂತ ಸಮೀಪದಿಂದ ಹಾದುಹೋಗಲಿದೆ. 2001FO32ಹೆಸರಿನ ಈ ಉಲ್ಕಾಶಿಲೆ ಸುಮಾರು 3000 ಅಡಿ ಉದ್ದವಾಗಿದೆ ಹಾಗೂ ಇದನ್ನು 20 ವರ್ಷಗಳ ಹಿಂದೆ ಪತ್ತೆಹಚ್ಚಲಾಗಿದೆ. ಮಾರ್ಚ್21ರಂದು ಈ ಖಗೋಳೀಯ ಘಟನೆ ವಿಕ್ಷೀಸಲು ವಿಶ್ವಾದ್ಯಂತದ ವಿಜ್ಞಾನಿಗಳು ತುಂಬಾ ಕಾತರರಗಿದ್ದಾರೆ ಎಂದು NASA ಹೇಳಿದೆ. ಆದರೆ, ಭೂಮಿಯ ಹತ್ತಿರದಿಂದ ಇದು ಹಾದುಹೋಗುವುದರಿಂದ ಭೂಮಿಗೆ ಇದರಿಂದ ಯಾವುದೇ ಅಪಾಯ ಇಲ್ಲ ಎಂದು ಅವರು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Parker Solar Probe : ಶುಕ್ರ ಗ್ರಹದ ಬಹು ಅಪರೂಪದ ಫೋಟೋ ಕ್ಲಿಕ್ಕಿಸಿದ ನಾಸಾ..!


ಸಂಶೋಧನಾ ಕೇಂದ್ರದ ನಿರ್ದೇಶಕರ ಹೇಳಿಕೆ
ಈ ಕುರಿತು ಹೇಳಿಕೆ ನೀಡಿರುವ ಭೂಮಿಯ ಸಂಶೋಧನಾ ಕೇಂದ್ರದ ನಿರ್ದೇಶಕ ಪಾಲ್ ಚೋದಾಸ್, 2001ರಲ್ಲಿ ಸೂರ್ಣನ ನಾಲ್ಕು ದಿಕ್ಕುಗಳಲ್ಲಿ FO32 ಕಕ್ಷೆಯ ಮಾರ್ಗ ಗುರುತಿಸಲಾಗಿದ್ದ, ಭೂಮಿಯ ಹತ್ತಿರಕ್ಕೆ ಇದು ಸಮೀಪಿಸಿದಾಗ ಇದರ ದೂರ ಭೂಮಿಯಿಂದ ಸುಮಾರು 1. 25 ಮಿಲಿಯನ್ ಕಿಮೀ ಇರಲಿದೆ. ಆದರೆ ಇದಕ್ಕಿಂತ ಹತ್ತಿರದಿಂದ ಯಾವುದೇ ಅಸ್ಟ್ರಾಯಿಡ್ ಇದುವರೆಗೆ ಬಂದಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ- Kalpana Chawla’s Death Anniversary : ಗಗನಯಾತ್ರಿ ಕಲ್ಪನಾ ಚಾವ್ಲಾ ಕುರಿತ ಆಸಕ್ತಿಕರ ಸಂಗತಿಗಳು


NASA ಹೇಳಿದ್ದೇನು?
NASA ನೀಡಿರುವ ಹೇಳಿಕೆಯ ಪ್ರಕಾರ 2001 FO32 ಉಲ್ಕಾಶಿಲೆ ವೇಗ ಗಂಟೆಗೆ ಸುಮಾರು 77 ಸಾವಿರ ಮೈಲಿನಷ್ಟಿದೆ ಮತ್ತು ಭೂಮಿಯ ಹತ್ತಿರದಲ್ಲಿ ಅಸ್ತಿತ್ವಗಲ್ಲಿರುವ ಇತರೆ ಉಳ್ಕಾಶಿಲೆಗಳ ವೇಗಕ್ಕಿಂತ ಇದು ತುಂಬಾ ಜಾಸ್ತಿಯಾಗಿದೆ. NASA ಜೆಟ್ ಪ್ರೋಪೆಲ್ಶೇನ್ ಲ್ಯಾಬೋರೇಟರಿ ಮುಖ್ಯ ವಿಜ್ಞಾನಿ ಲಾನ್ಸ್ ಬ್ಯಾನರ್ ಹೇಳುವ ಪ್ರಕಾರ, ಇದುವರೆಗೆ ಈ ಅಸ್ಟ್ರಾಯಿಡ್ ಬಗ್ಗೆ ಇದುವರೆಗೆ ಬಹುತಕೆರಿಗೆ ಮಾಹಿತಿ ಇಲ್ಲ . ಆದರೆ, ಇದೀಗ ಎಲ್ಲರು ಈ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಈ ಅಸ್ಟ್ರಾಯಿಡ್ ಆಗಸದ ದಕ್ಷಿಣಭಾಗದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಜೋದಾಸ್ ಹೇಳಿದ್ದು, ಇದು ತುಂಬಾ ಹೊಳಪುಳ್ಳದ್ದಾಗಿದೆ. ಇದನ್ನು ಪತ್ತೆಹಚ್ಚಲು ಒಂದು ಸ್ಟಾರ್ ಚಾರ್ಟ್ ಅವಶ್ಯಕತೆ ಬೀಳಲಿದೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Antarctica ಶ್ವೇತ ಹಿಮಚಾದರದ ಮೇಲೆ ದಿಗ್ಭ್ರಮೆಗೊಳಿಸುವ ವಿಚಿತ್ರ ಆಕೃತಿ.! NASA ಪಂಡಿತರಿಗೂ ಸಿಗುತ್ತಿಲ್ಲ ಉತ್ತರ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.