Astronomical Journal Report: ಈ ಗ್ರಹದ ಸಂಪೂರ್ಣ ಒಂದು ವರ್ಷದ ಅವಧಿ ಭೂಮಿಯ 16ಗಂಟೆಗೆ ಸಮ, ವಿಜ್ಞಾನಿಗಳು ಹೇಳಿದ್ದೇನು?
Astronomical Journal Report - ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ನೇತೃತ್ವದ ಮಿಷನ್ TOI-2109b ಹೆಸರಿನ ಗ್ರಹವನ್ನು NASAದ ಟ್ರಾನ್ಸಿಟಿಂಗ್ ಎಕ್ಸೋಪ್ಲಾನೆಟ್ ಸರ್ವೆ ಸ್ಯಾಟಲೈಟ್ (TESS) ಮೂಲಕ ಕಂಡುಹಿಡಿದಿದೆ. ಈ ಕುರಿತು ಹಲವು ನಂಬಲಾಗದ ಹಕ್ಕುಗಳನ್ನು ಮಂಡಿಸಲಾಗಿದೆ. ಕಳೆದ ಕೆಲ ವರ್ಷಗಳಲ್ಲಿ, ನಮ್ಮ ಸೌರವ್ಯೂಹದಲ್ಲಿ ಇರುವ ಗುರು ಗ್ರಹವನ್ನು ಹೋಲುವ ಇಂತಹ ಬಿಸಿಯಾದ ಗುರುಗ್ರಹಗಳನ್ನು ಖಗೋಳಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ. ಆದರೆ, ಅವು ತಮ್ಮ ನಕ್ಷತ್ರವನ್ನು 10 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಸುತ್ತುತ್ತವೆ ಎಂದು ಹೇಳಲಾಗಿದೆ.
ನವದೆಹಲಿ: Astronomical Journal Report - ಖಗೋಳಶಾಸ್ತ್ರಜ್ಞರು (Astronomers) ನಮ್ಮ ಸೌರವ್ಯೂಹದ ಹೊರಗೆ ಹೊಸ ಗ್ರಹವನ್ನು ಪತ್ತೆಹಚ್ಚಿದ್ದು, ಅದು ಕೇವಲ 16 ಗಂಟೆಗಳಲ್ಲಿ ತನ್ನ ನಕ್ಷತ್ರವನ್ನು ಸುತ್ತುತ್ತದೆ. ಆಸ್ಟ್ರೋನಾಮಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ, ಇದು ವಿಶ್ವದಲ್ಲಿ ಕಂಡುಬರುವ ಎರಡನೇ ಅತ್ಯಂತ ಬಿಸಿಯಾದ ಗ್ರಹವಾಗಿದೆ. ಈ ಅಲ್ಟ್ರಾಹಾಟ್ ಗುರುಗ್ರಹದಲ್ಲಿ ಅನೇಕ ಅನಿಲಗಳಿವೆ ಎನ್ನಲಾಗಿದೆ.
ವರ್ಷದಲ್ಲಿ ಕೇವಲ 16 ಗಂಟೆಗಳು!
ಸಂಶೋಧಕರ ಪ್ರಕಾರ, ನಮ್ಮ ಸೌರವ್ಯೂಹದ ಹೊರಗೆ ಇರುವಂತಹ 4000 ಕ್ಕೂ ಹೆಚ್ಚು ಗ್ರಹಗಳನ್ನು ಇಲ್ಲಿಯವರೆಗೆ ಕಂಡುಹಿಡಿಯಲಾಗಿದೆ. ನಮ್ಮ ಭೂಮಿಯಿಂದ ಸಾವಿರಾರು ಪ್ರಕಾಶ ವರ್ಷಗಳಷ್ಟು ದೂರದಲ್ಲಿ ನಕ್ಷತ್ರಗಳನ್ನು ಸುತ್ತುವ ಇಂತಹ ಹಲವು ಗ್ರಹಗಳಿವೆ ಎನ್ನಲಾಗಿದೆ.
ಬಾಹ್ಯಾಕಾಶ ವೆಬ್‌ಸೈಟ್ bgr.com ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಇದುವರೆಗೆ ಪತ್ತೆಯಾದ ಗ್ರಹಗಳು ನೆಪ್ಚೂನ್‌ನಂತಹ ಗ್ರಹಗಳನ್ನು ಹೊಂದಿವೆ. ಇದಲ್ಲದೇ ಗುರುಗ್ರಹದಂತಹ ದೈತ್ಯ ಅನಿಲ ಗ್ರಹಗಳನ್ನು ಕೂಡ ಹೊಂದಿವೆ. ಇದರ ಜೊತೆಗೆ ನೋಡಲು ಭೂಮಿಯಂತೆಯೇ ಇರುವ ಕೆಲ ಗ್ರಹಗಳನ್ನೂ ಕೂಡ ವಿಜ್ಞಾನಿಗಳು(Astronomers) ಗುರುತಿಸಿದ್ದಾರೆ.
ಇದನ್ನೂ ಓದಿ-Study: ತುಂಡುಡುಗೆಯಲ್ಲಿ ಯುವತಿಯರಿಗೆ ಚಳಿ ಯಾಕೆ ಹತ್ತಲ್ಲ? ಸಿಕ್ತು ಈ ಪ್ರಶ್ನೆಗೆ ಉತ್ತರ
ಹೊಸದಾಗಿ ಪತ್ತೆಯಾದ ಒಂದು ಗ್ರಹಕ್ಕೆ ವಿಜ್ಞಾನಿಗಳು TOI-2109b ಎಂದು ನಾಮಕರಣ ಮಾಡಿದ್ದರೆ. ಇದು ಇದುವರೆಗೆ ಕಂಡುಹಿಡಿಯಲಾದ ಎರಡನೇ ಅತ್ಯಂತ ಬಿಸಿಯಾದ ಗ್ರಹವಾಗಿದೆ. ಈ ಗ್ರಹವು ತುಂಬಾ ಆಸಕ್ತಿದಾಯಕವಾಗಿದೆ, ಏಕೆಂದರೆ ಇದು ತನ್ನ ನಕ್ಷತ್ರದ ಸುತ್ತ ತನ್ನ ಕಕ್ಷೆಯನ್ನು 16 ಗಂಟೆಗಳಲ್ಲಿ ಪೂರ್ಣಗೊಳಿಸುತ್ತದೆ. ಇದರರ್ಥ ಈ ಗ್ರಹದ ಒಂದು ಸಂಪೂರ್ಣ ವರ್ಷ ಭೂಮಿಯ ಒಂದು ಸಾಮಾನ್ಯ ದಿನದ ಅವಧಿಗಿಂತ ಕಡಿಮೆಯಾಗಿದೆ.
ಇದನ್ನೂ ಓದಿ-ಹೆಚ್ಚಿನ ವಿನಾಶಕ್ಕೆ ಕಾರಣವಾಗಲಿದೆಯೇ ಕರೋನಾಕ್ಕಿಂತ ಅಪಾಯಕಾರಿ Fungus
ವಿಜ್ಞಾನಿಗಳ ಹೇಳಿದ್ದೇನು?
ಈ ಕುರಿತು ಹೇಳುವ ಈ ಆವಿಷ್ಕಾರದ ಪ್ರಮುಖ ಲೇಖಕ ಇಯಾನ್ ವಾಂಗ್ ಈ ಗ್ರಹವು ತನ್ನ ನಕ್ಷತ್ರದ ಹತ್ತಿರ ಹೇಗೆ ಹೋಗುತ್ತಿದೆ ಎಂಬುದರ ಕುರಿತು ನಾವು ಒಂದು ಅಥವಾ ಎರಡು ವರ್ಷಗಳಲ್ಲಿ ಮಾಹಿತಿಯನ್ನು ನೀಡಲು ಸಾಧ್ಯವಾಗಲಿದೆ ಆದರೆ, ನಮ್ಮ ಜೀವಿತಾವಧಿಯಲ್ಲಿ ಅದು ತನ್ನ ನಕ್ಷತ್ರದೊಂದಿಗೆ ಡಿಕ್ಕಿ ಹೊಡೆಯುವುದನ್ನು ನೋಡಲು ಸಾಧ್ಯವಿಲ್ಲ ಎಂದು ವಾಂಗ್ ಹೇಳುತ್ತಾರೆ.
ಇದನ್ನೂ ಓದಿ-Holocaust On Earth-ಆಗಸದಿಂದ ಭೂಮಿಗಪ್ಪಳಿಸಲಿವೆ ಬೆಂಕಿ ಚೆಂಡುಗಳು, ಇದು ಭೂ- ವಿನಾಶದ ಸಂಕೇತವೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.