What should be the temperature level of Refrigerator in summer: ಪ್ರತಿ ಮನೆಯಲ್ಲೂ ಪ್ರಸ್ತುತ ಫ್ರಿಡ್ಜ್ ಸಹ ಒಂದು ಅತ್ಯಗತ್ಯ ವಸ್ತುವಾಗಿದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಫ್ರಿಡ್ಜ್‌ಗಳು ಸಹ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವುದರಿಂದ ಎಲ್ಲರಿಗೂ ಕೂಡ ಇದನ್ನು ಖರೀದಿಸಲು ಸುಲಭ ಸಾಧ್ಯವಾಗುತ್ತದೆ. ಹಾಗಾಗಿಯೇ, ಬಹುತೇಕ ಎಲ್ಲರ ಮನೆಯಲ್ಲೂ ಕೂಡ ಫ್ರೀಡ್ಜ್ ಬಳಸಲಾಗುತ್ತದೆ. ಬೇರೆ ಋತುಗಳಿಗೆ ಹೋಲಿಸಿದರೆ  ಬೇಸಿಗೆಯಲ್ಲಿ ರೆಫ್ರಿಜರೇಟರ್‌ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. 


COMMERCIAL BREAK
SCROLL TO CONTINUE READING

ಫ್ರಿಡ್ಜ್‌  ಅಗತ್ಯ ವಸ್ತುವೇನೋ ಹೌದು. ಆದರೆ, ಅದನ್ನು ಸರಿಯಾಗಿ ಬಳಸದಿದ್ದರೆ ಅದು ಹಾಳಾಗಬಹುದು. ಇಲ್ಲವೇ, ಕೆಲವೊಮ್ಮೆ ಸ್ಫೋಟಗೊಳ್ಳುವ ಅಪಾಯವೂ ಇರುತ್ತದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಇಂತಹ ದುರ್ಘಟನೆಗಳು ನಡೆಯುವ ಅಪಾಯ ಹೆಚ್ಚಿರುವುದರಿಂದ, ಇದನ್ನು ತಪ್ಪಿಸಲು ಫ್ರಿಡ್ಜ್ ಬಳಸುವಾಗ ಆ ಬಗ್ಗೆ ವಿಶೇಷ ಕಾಳಜಿವಹಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ, ಬೇಸಿಗೆ ಕಾಲದಲ್ಲಿ ಫ್ರಿಡ್ಜ್‌ನ ತಾಪಮಾನದ ಮಟ್ಟ ಎಷ್ಟಿರಬೇಕು ಎಂಬುದನ್ನು ತಿಳಿಯುವುದು ಬಹಳ ಮುಖ್ಯ. 


ಇದನ್ನೂ ಓದಿ- IPL ಪ್ರಿಯರಿಗಾಗಿ ಅಗ್ಗದ ಬೆಲೆಯಲ್ಲಿ ಅನ್ಲಿಮಿಟೆಡ್ ಇಂಟರ್ನೆಟ್ ಪ್ಲಾನ್ ಪರಿಚಯಿಸಿದ ರಿಲಯನ್ಸ್ ಜಿಯೋ


ಬೇಸಿಗೆ ಕಾಲದಲ್ಲಿ ಕರೆಂಟ್ ಬಿಲ್ ಹೆಚ್ಚಾಗಿ ಬರುವುದು ಸಾಮಾನ್ಯ. ಹಾಗಾಗಿ, ಕೆಲವರು ರೆಫ್ರಿಜರೇಟರ್ ಅನ್ನು ಕಡಿಮೆ ತಾಪಮಾನಕ್ಕೆ ಸರಿಹೊಂದಿಸಿದರೆ ವಿದ್ಯುತ್ ಬಿಲ್ ಕಡಿತವಾಗುತ್ತದೆ ಎಂದು ಭಾವಿಸುತ್ತಾರೆ. ಇನ್ನೂ ಕೆಲವರು ಚಳಿಗಾಲದಲ್ಲಿ ಫ್ರಿಡ್ಜ್ ಬಳಸುವ ಅಗತ್ಯವಿಲ್ಲವೆಂದು ಅದನ್ನು ಆಫ್ ಮಾಡಿ ಇಡುತ್ತಾರೆ. ಆದರೆ, ಇಂತಹ ತಪ್ಪುಗಳಿಂದ ನಿಮ್ಮ ಫ್ರಿಡ್ಜ್ ಹಾಳಾಗುವುದು ಮಾತ್ರವಲ್ಲ, ಸ್ಫೋಟಕ್ಕೂ ಕಾರಣವಾಗಬಹುದು.  


ಫ್ರೀಡ್ಜ್ ಸ್ಫೋಟಗೊಳ್ಳಲು ಪ್ರಮುಖ ಕಾರಣ?
ವಾಸ್ತವವಾಗಿ, ದೀರ್ಘಕಾಲದವರೆಗೆ ಫ್ರೀಡ್ಜ್ ಅನ್ನು ಆಫ್ ಮಾಡಿ ಇಡುವುದರಿಂದ ಅದರ ಸಂಕೋಚಕವು ಜಾಮ್ ಆಗುತ್ತದೆ. ನಂತರ ಆನ್ ಮಾಡುವುದರಿಂದ ಸಂಕೋಚಕವು ಹೆಚ್ಚು ಬಿಸಿಯಾಗುತ್ತದೆ. ರೆಫ್ರಿಜರೇಟರ್‌ನಲ್ಲಿ, ವಿಶೇಷವಾಗಿ ಸಂಕೋಚಕ ಭಾಗದಲ್ಲಿ ಯಾವುದೇ ದೋಷವಿದ್ದರೆ, ನೀವು ಅದನ್ನು ಕಂಪನಿಯ ಸೇವಾ ಕೇಂದ್ರಕ್ಕೆ ಮಾಹಿತಿ ನೀಡಿ ಸರಿಪಡಿಸಬೇಕು. ಏಕೆಂದರೆ ಕಂಪನಿಯಲ್ಲಿ ಮೂಲ ಭಾಗಗಳು ಖಾತರಿಪಡಿಸುತ್ತವೆ. ನೀವು ಸ್ಥಳೀಯವಾಗಿ ಅದನ್ನು ಸರಿಪಡಿಸಿದರೆ ಅದು ಸಂಕೋಚಕದಲ್ಲಿ ಸ್ಫೋಟಕ್ಕೆ ಕಾರಣವಾಗಬಹುದು.


ಇದನ್ನೂ ಓದಿ- ನಿಮ್ಮ ಮೊಬೈಲ್ ಫೋನ್‌ಗಳಲ್ಲಿವೆ ಆರು ವಿಧದ ಖನಿಜ ಮತ್ತು ಲೋಹಗಳು!


ಯಾವ ಋತುವಿನಲ್ಲಿ ರೆಫ್ರಿಜರೇಟರ್ ತಾಪಮಾನ ಎಷ್ಟಿರಬೇಕು?
ವಾಸ್ತವವಾಗಿ,  ಹೆಚ್ಚಿನ ಫ್ರಿಜ್‌ಗಳು 1 ರಿಂದ 5 ಸಂಖ್ಯೆಗಳ ತಾಪಮಾನವನ್ನು ಹೊಂದಿರುತ್ತವೆ. ಚಳಿಗಾಲ ಅಥವಾ ಶೀತ ಸಮಯದಲ್ಲಿ ಫ್ರೀಡ್ಜ್ ಅನ್ನು ನಂಬರ್ 1ನಲ್ಲಿ ಚಲಾಯಿಸಬೇಕು. ಆದರೆ, ಬೇಸಿಗೆಯಲ್ಲಿ ಫ್ರೀಡ್ಜ್ ಅನ್ನು ಕಡಿಮೆ ಸಂಖ್ಯೆಯ ತಾಪಮಾನದಲ್ಲಿ ಚಲಾಯಿಸುವುದರಿಂದ ಅದರಲ್ಲಿಟ್ಟ ಆಹಾರ ಪದಾರ್ತ್ಘಗಳು ಹಾಳಾಗುತ್ತವೆ. ಹಾಗಾಗಿ, ಬೇಸಿಗೆ ಕಾಲದಲ್ಲಿ ಫ್ರೀಡ್ಜ್ ಅನ್ನು ಮಾಧ್ಯಮ ಎಂದರೆ 3 ರಿಂದ 4 ಸಂಖ್ಯೆಯಲ್ಲಿ ಚಲಾಯಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.