Baba Vanga Predictions: 111 ವರ್ಷಗಳ ಹಿಂದೆ ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವೆಂಗಾ ಇದುವರೆಗೆ ಹಲವು ಭವಿಷ್ಯಗಳನ್ನು ನುಡಿದಿದ್ದಾರೆ. ಬಾಬಾ ವೆಂಗಾ ನುಡಿದಿರುವ ಅನೇಕ ಭವಿಷ್ಯವಾಣಿಗಳು ಇದುವರೆಗೆ ನಿಜ ಎಂದು ಸಾಬೀತಾಗಿವೆ. ತನ್ನ 12 ನೇ ವಯಸ್ಸಿನಲ್ಲಿ ಚಂಡಮಾರುತದಲ್ಲಿ ದೃಷ್ಟಿ ಕಳೆದುಕೊಂಡ ಬಾಬಾ ವೇಂಗಾ, ವಿಶ್ವಾದ್ಯಂತ ತನ್ನ ಭವಿಷ್ಯವಾಣಿಗಾಗಿ ಖ್ಯಾತಿಯನ್ನು ಹೊಂದಿದ್ದಾರೆ. ತಮ್ಮ ಮರಣಕ್ಕೂ ಮುನ್ನ, ಬಾಬಾ ವೆಂಗಾ 2022 ಮತ್ತು ಅದರಾಚೆಗೆ ಅನೇಕ ಪ್ರಮುಖ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಅವರು ಹೇಳಿರುವ ಆ ಭವಿಷ್ಯಗಳು ಯಾವುವು ನೋಡೋಣ ಬನ್ನಿ


COMMERCIAL BREAK
SCROLL TO CONTINUE READING

>> ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಭೂಮಿಯ ಕಕ್ಷೆಯು 2023 ರಲ್ಲಿ ಬದಲಾಗಲಿದೆ ಮತ್ತು ಇದನ್ನು ಹೊರತುಪಡಿಸಿ ಗಗನಯಾತ್ರಿಗಳು 2028 ರಲ್ಲಿ ಶುಕ್ರಗ್ರಹಕ್ಕೆ ಪ್ರಯಾಣ ಬೆಳೆಸಲಿದ್ದಾರೆ.


>> ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2046 ರಲ್ಲಿ ಜನರು ಅಂಗಾಂಗ ಕಸಿ ಸಹಾಯದಿಂದ 100 ವರ್ಷಗಳಿಗಿಂತ ಹೆಚ್ಚು ಬದುಕಲು ಸಾಧ್ಯವಾಗಲಿದೆ.


>> ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2100 ರಲ್ಲಿ ಭೂಮಿಯ ಮೇಲೆ ರಾತ್ರಿ ಇರುವುದಿಲ್ಲ. ಕೃತಕ ಸೂರ್ಯನ ಬೆಳಕಿನಿಂದ ಭೂಮಿಯ ಮೇಲೆ ಬೆಳಕು ಇರಲಿದೆ.


>> ಅಷ್ಟೇ ಅಲ್ಲ, ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, 5079 ರಲ್ಲಿ ಇಡೀ ಜಗತ್ತೇ ಸರ್ವನಾಶವಾಗಲಿದೆ.


>> ಬಾಬಾ ವೆಂಗಾ 2022 ರ ವರ್ಷಕ್ಕೆ ಎರಡು ಭವಿಷ್ಯಗಳನ್ನು ನುಡಿದಿದ್ದಾರೆ. ಏಷ್ಯಾ ಮತ್ತು ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಪ್ರವಾಹ ಉಂಟಾಗಲಿದೆ ಎಂದು ಹೇಳಿದ್ದರು. ಈ ಭವಿಷ್ಯ ನಿಜವಾಗಿದೆ, ಏಕೆಂದರೆ ಈ ವರ್ಷ ಈ ದೇಶದಲ್ಲಿ ಭಾರೀ ಮಳೆಯಾಗಿತ್ತು ಮತ್ತು ಪ್ರವಾಹ ಪರಿಸ್ಥಿತಿಗಳು ಇದ್ದವು. ಏಷ್ಯಾ, ಬಾಂಗ್ಲಾದೇಶ, ಈಶಾನ್ಯ ಭಾರತ ಮತ್ತು ಥೈಲ್ಯಾಂಡ್ ಪ್ರವಾಹಕ್ಕೆ ತುತ್ತಾಗಿವೆ.


ಇದನ್ನೂ ಓದಿ-Polygamy: 8 ಮಡದಿಯರಿಗಾಗಿ ಅರಮನೆ ನಿರ್ಮಿಸಲು ಮುಂದಾದ ಮಾಡೆಲ್, ವೇಳಾಪಟ್ಟಿ ರಚಿಸಿ ಪ್ರೀತಿ ಮಾಡುತ್ತಾನಂತೆ !


>> ಎರಡನೆಯದಾಗಿ ಬಾಬಾ ವೆಂಗಾ ವಿಶ್ವದ ಕೆಲವು ನಗರಗಳು ಬರದಿಂದಾಗಿ ನೀರಿನ ಕೊರತೆಯನ್ನು ಎದುರಿಸಲಿವೆ ಎಂದು ಹೇಳಿದ್ದರು. ಪೋರ್ಚುಗಲ್ ತನ್ನ ನಾಗರಿಕರನ್ನು ತಮ್ಮ ನೀರಿನ ಬಳಕೆಯನ್ನು ಮಿತಿಗೊಳಿಸಲು ಕೇಳಿಕೊಂಡ ಕಾರಣ ಅವರ ಈ ಭವಿಷ್ಯವೂ ಕೂಡ ನಿಜ ಸಾಬೀತಾಗಿದೆ. 1950 ರ ದಶಕದ ನಂತರ ಇಟಲಿಯು ಪ್ರಸ್ತುತ ಭೀಕರ ಬರಗಾಲವನ್ನು ಎದುರಿಸುತ್ತಿದೆ.


ಇದನ್ನೂ ಓದಿ-Miss Universe: ಇನ್ಮುಂದೆ ಭುವನ ಸುಂದರಿ ಸ್ಪರ್ಧೆಯಲ್ಲಿ ವಿವಾಹಿತ ಮಹಿಳೆಯರು ಭಾಗವಹಿಸಬಹುದು...!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ  ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.