ನವದೆಹಲಿ: ಜಿಯೋ ಮತ್ತು ಏರ್‌ಟೆಲ್ ಭಾರತೀಯ ಟೆಲಿಕಾಂನ ಎರಡು ದೈತ್ಯ ಕಂಪನಿಗಳಾಗಿವೆ. ಜಿಯೋ ಮತ್ತು ಏರ್‌ಟೆಲ್ ಮೊದಲು ಭಾರತದಲ್ಲಿ 5G ಅನ್ನು ಹೊರತರಲು ಆರಂಭಿಸಿದ ಕಂಪನಿಗಳಾಗಿವೆ. ಪ್ರಸ್ತುತ, ಈ ಎರಡೂ ಕಂಪನಿಗಳು ತಮ್ಮ 4G ಯೋಜನೆಗಳಲ್ಲಿ ಉಚಿತ 5G ಸೌಲಭ್ಯವನ್ನು ಒದಗಿಸುತ್ತಿವೆ. ಆದಾಗ್ಯೂ, ಇದು ಶೀಘ್ರದಲ್ಲೇ ಅದು ನಿಲ್ಲುವ ಸಾಧ್ಯತೆ ಇದೆ. ಹೌದು, ಇತ್ತೀಚಿನ ವರದಿಯನ್ನು ನಂಬುವುದಾದರೆ, ಶೀಘ್ರದಲ್ಲೇ ಈ ಎರಡೂ ಟೆಲಿಕಾಂ ಕಂಪನಿಗಳು ತಮ್ಮ ಹೊಸ 5G ಯೋಜನೆಗಳನ್ನು ಜಾರಿಗೆ ತರಲಿವೆ ಎನ್ನಲಾಗುತ್ತಿದೆ. ಕಂಪನಿಗಳ ಈ ಹೊಸ 5G ಯೋಜನೆಗಳು 4G ಗಿಂತ 5 ರಿಂದ 10 ಪ್ರತಿಶತದಷ್ಟು ದುಬಾರಿಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಏನು ತಿಳಿಯೋನ ಬನ್ನಿ, 


COMMERCIAL BREAK
SCROLL TO CONTINUE READING

ಆಂಗ್ಲ ಮಾಧ್ಯಮದ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಇತ್ತೀಚಿನ ವರದಿಯಲ್ಲಿ, ಜಿಯೋ ಮತ್ತು ಏರ್‌ಟೆಲ್ ಬಳಕೆದಾರರಿಗೆ ಶೀಘ್ರದಲ್ಲೇ ದೊಡ್ಡ ಶಾಕ್ ನೀಡಲಿವೆ ಎನ್ನಲಾಗಿದೆ. ಇದುವರೆಗೆ, ಜಿಯೋ ಮತ್ತು ಏರ್‌ಟೆಲ್ ಗ್ರಾಹಕರು 4G ದರದಲ್ಲಿ 5G ಸೇವೆಯನ್ನು ಪಡೆಯುತ್ತಿದ್ದರು, ಆದರೆ ಇದನ್ನು ಶೀಘ್ರದಲ್ಲೇ ನಿಲ್ಲಿಸಲಾಗುವುದು ಎನ್ನಲಾಗಿದೆ. ಈ ಎರಡೂ ಕಂಪನಿಗಳು 4G ಯೋಜನೆಗಳಲ್ಲಿ ಉಚಿತ ಅನಿಯಮಿತ 5G ಸೌಲಭ್ಯವನ್ನು ನಿಲ್ಲಿಸಬಹುದು. ವರದಿಯ ಪ್ರಕಾರ, ಜಿಯೋ ಮತ್ತು ಏರ್‌ಟೆಲ್ ಎರಡೂ 5G ಗಾಗಿ ಪ್ರತ್ಯೇಕ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿವೆ. ಈ ಯೋಜನೆಗಳನ್ನು 2024 ರ ದ್ವಿತೀಯಾರ್ಧದಲ್ಲಿ ಜಾರಿಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.


ಹೊಸ ಯೋಜನೆಗಳ ಬೆಲೆ 4G ಗಿಂತ 5 ರಿಂದ 10 ಪ್ರತಿಶತ ಹೆಚ್ಚು ದುಬಾರಿಯಾಗಿರಲಿವೆ ಎಂದೂ ಕೂಡ ಹೇಳಲಾಗುತ್ತಿದೆ. ಏರ್‌ಟೆಲ್ ಮತ್ತು ಜಿಯೋದ ಹೊಸ 5G ಯೋಜನೆಗಳು ಅಸ್ತಿತ್ವದಲ್ಲಿರುವ 4G ಯೋಜನೆಗಳಿಗಿಂತ 30 ಪ್ರತಿಶತ ಹೆಚ್ಚಿನ ಡೇಟಾವನ್ನು ನೀಡುತ್ತವೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ-Good News: ನಿಮ್ಮ ಬಳಿಯೂ ಎಲ್ಐಸಿ ಪಾಲಸಿ ಅಥವಾ ಷೇರುಗಳಿವೆಯಾ? ಶೀಘ್ರದಲ್ಲೇ ಸಿಗಲಿದೆ ಭಾರಿ ಧನಲಾಭ!


ಜಿಯೋ ಮತ್ತು ಏರ್‌ಟೆಲ್ ಭಾರತದಲ್ಲಿ 5G ಅನ್ನು ಪ್ರಾರಂಭಿಸಿದ ಮೊದಲ ಎರಡು ಟೆಲಿಕಾಂ ಕಂಪನಿಗಳಾಗಿವೆ. ಇಂದು, ಈ ಎರಡು ಕಂಪನಿಗಳ 5G ಸೇವೆಯು ಭಾರತದ ಹೆಚ್ಚಿನ ಪ್ರದೇಶಗಳನ್ನು ತಲುಪಿದೆ. ಸುಮಾರು ಒಂದು ವರ್ಷದಿಂದ, ಈ ಎರಡೂ ಕಂಪನಿಗಳು ತಮ್ಮ ಗ್ರಾಹಕರಿಗೆ 4G ಪ್ಲಾನ್‌ಗಳ ಬೆಲೆಯಲ್ಲಿ 5G ವೇಗವನ್ನು ಒದಗಿಸುತ್ತಿವೆ. ಇದೆ ವೇಳೆ, ಈಗ ಕಂಪನಿಗಳು ಈ ಉಚಿತ ಸೇವೆಯನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಸದ್ಯಕ್ಕೆ ಏರ್‌ಟೆಲ್ ಮತ್ತು ಜಿಯೋ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.


ಇದನ್ನೂ ಓದಿ-Union Budget 2024: ನಿಮ್ಮ ಕೈಯಲ್ಲಿ ಅಧಿಕ ಹಣ ಉಳಿಸಲು, ವಿತ್ತ ಸಚಿವೆ ಸೀತಾರಾಮನ್ ಅವರಿಂದ ಈ ಘೋಷಣೆ ಸಾಧ್ಯತೆ!


ಜಿಯೋ ರೋಮಿಂಗ್ ಪ್ಯಾಕ್
ಜಿಯೋ ಕಂಪನಿಯು ಇತ್ತೀಚೆಗೆ ತನ್ನ ಅಂತಾರಾಷ್ಟ್ರೀಯ ರೋಮಿಂಗ್ ಪ್ಯಾಕ್ ಪೋರ್ಟ್‌ಫೋಲಿಯೊದಲ್ಲಿ ಹಲವು ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಗಳನ್ನು UAE, USA, MEXICO ಮತ್ತು U.S.V.I ಗಾಗಿ ಪರಿಚಯಿಸಲಾಗಿದೆ. ಬೆಲೆಯ ಕುರಿತು ಮಾತನಾಡುವುದಾದರೆ, ಈ ಯೋಜನೆಗಳ ಬೆಲೆಗಳು ರೂ 898, ರೂ 1555, ರೂ 1598, ರೂ 2555, ರೂ 2799, ರೂ 2,998 ಮತ್ತು ರೂ 3455. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI