ಬೆಂಗಳೂರು ಟೆಕ್ ಸಮ್ಮಿಟ್‌ಗೆ ಇಂದು ತೆರಳಿದ ಸಂದರ್ಭದಲ್ಲಿ ನನಗೆ ಎದುರಾಗಿದ್ದು ನಿರಾಶೆ ಮತ್ತು ಬೇಸರ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು (ಇಸ್ರೋ) ಈ ಪ್ರತಿಷ್ಠಿತ, ವ್ಯಾಪಕವಾಗಿ ಗಮನ ಸೆಳೆದಿದ್ದ ಸಮ್ಮೇಳನದಲ್ಲಿ ತಮ್ಮ ಸ್ಟಾಲ್‌ಗಳನ್ನು ಹೊಂದಿದ್ದವು. ಆದರೆ, ಇಲ್ಲಿಗೆ ಆಗಮಿಸಿದ್ದ ಆಸಕ್ತ ನಾಗರಿಕರು ಅಲ್ಲಿ ಇಡಲಾಗಿದ್ದ ಮಾದರಿಗಳನ್ನು ಕೇವಲ ನೋಡಿ, ಮುಂದೆ ಸಾಗುವ ದೃಷ್ಯ ನನಗೆ ನಿರಾಶೆ ಮೂಡಿಸಿತು. ಅವರಿಗೆ ಈ ಮಾದರಿಗಳ ಕುರಿತು ಮಾಹಿತಿ ನೀಡುವವರು, ಪ್ರಶ್ನೆಗಳಿಗೆ ಉತ್ತರಿಸುವವರು, ಅವುಗಳ ಕುರಿತು ಜ್ಞಾನ ನೀಡುವ ಭಿತ್ತಿಪತ್ರಗಳನ್ನು ಒದಗಿಸುವವರು ಯಾರೂ ಅಲ್ಲಿರಲೇ ಇಲ್ಲ. ಈ ವೈಜ್ಞಾನಿಕ ಅನ್ವೇಷಣೆಗಳ ಕುರಿತು ಸೂಕ್ತ ಮಾಹಿತಿ ಒದಗಿಸುವ ವ್ಯವಸ್ಥೆ ಕೈಗೊಂಡಿದ್ದರೆ, ವೀಕ್ಷಕರಲ್ಲಿ ಕುತೂಹಲ ಮೂಡಿಸಿ, ಇನ್ನಷ್ಟು ಮಾಹಿತಿ ಪಡೆದುಕೊಳ್ಳಬೇಕೆಂಬ ಹಂಬಲ ಅವರಲ್ಲಿ ಮೂಡಿಸಬಹುದಾಗಿತ್ತು.


COMMERCIAL BREAK
SCROLL TO CONTINUE READING

ಆದರೆ, ದುರದೃಷ್ಟವಶಾತ್ ಈ ದೊಡ್ಡ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಸಾರ್ವಜನಿಕರ ಹಣವನ್ನು ಬಳಸಿಕೊಂಡು, ಕೇವಲ ತೋರಿಕೆಗಷ್ಟೇ, ಕಾನೂನಿನ ಬಾಧ್ಯತೆ ಪೂರೈಸಲು ಭಾಗವಹಿಸಿದಂತೆ ಕಂಡುಬಂತು. ಅದಲ್ಲದೆ, ಈ ಸ್ಟಾಲ್‌ಗಳ ಜವಾಬ್ದಾರಿ ಹೊಂದಿರುವಂತೆ ಕಂಡವರು ಅವಶ್ಯಕ ಜ್ಞಾನ, ಪ್ರಾವೀಣ್ಯತೆ ಹೊಂದಿರಲಿಲ್ಲ, ವೀಕ್ಷಕರಲ್ಲಿ ಆಸಕ್ತಿ ಮೂಡಿಸಲು ಸಮರ್ಥರೂ ಆಗಿರಲಿಲ್ಲ. ಇದು ಕೇವಲ ತೋರಿಕೆಗೋಸ್ಕರ ಅಲ್ಲಿ ಸ್ಟಾಲ್ ಹೊಂದಿದ್ದಂತೆ ಕಂಡಿತ್ತು. ಮಹತ್ವದ ತಾಂತ್ರಿಕ ಅಭಿವೃದ್ಧಿಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯಾಗಬೇಕಿದ್ದ ಬೆಂಗಳೂರು ಟೆಕ್ ಸಮ್ಮಿಟ್ ರಾಜಕಾರಣಿಗಳ ಛಾಯಾಚಿತ್ರಗಳ ಪ್ರದರ್ಶನಕ್ಕೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದು ನಿರಾಶಾದಾಯಕ ಬೆಳವಣಿಗೆ.


ಇಲ್ಲಿನ ಕಾರ್ಯಕ್ರಮ ನಿರ್ವಹಣಾ ತಂಡ (ಇವೆಂಟ್ ಮ್ಯಾನೇಜ್‌ಮೆಂಟ್) ವೃತ್ತಿಪರತೆಯ ಕೊರತೆಯನ್ನು ಪ್ರದರ್ಶಿಸಿದೆ. ಕಾರ್ಯಕ್ರಮದ ವಿವರಗಳನ್ನು ಒದಗಿಸುವ ಮಾಹಿತಿ ಫಲಕಗಳನ್ನೂ ಇಲ್ಲಿ ಅಳವಡಿಸಲಾಗಿಲ್ಲ. ಅದರೊಡನೆ, ವಿವಿಧ ಕಾರ್ಯಕ್ರಮಗಳು, ಮತ್ತು ಚಟುವಟಿಕೆಗಳಲ್ಲಿ ಭಾಗವಹಿಸುವವರಿಗೆ ಅಲ್ಲಿಗೆ ತೆರಳಲು ಸೂಕ್ತ ಮಾರ್ಗಸೂಚಿಗಳನ್ನು ಅಳವಡಿಸಲಾಗಿಲ್ಲ. ಒಟ್ಟಾರೆ ಇವೆಂಟ್ ಮ್ಯಾನೇಜ್ಮೆಂಟ್ ವ್ಯವಸ್ಥೆ ಅಸಮರ್ಥತೆ ಮತ್ತು ವೃತ್ತಿಪರತೆಯ ಕೊರತೆಯನ್ನು ಪ್ರದರ್ಶಿಸಿ, ಬೇಸರ ಮೂಡಿಸಿದೆ.


ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.