ಮೊಬೈಲ್‌ನಲ್ಲಿ App ಡೌನ್‌ಲೋಡ್ ಮಾಡುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ..! ಇಲ್ಲವೇ ಖಾಲಿಯಾಗುತ್ತೆ ಖಾತೆ..!

Digital Safety Tips: ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಎಷ್ಟು ಪ್ರಯೋಜನಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು. ಸ್ವಲ್ಪ ಮೈ ಮರೆತ್ರೂ ಸಹ ಕೈಯಲ್ಲಿರುವ ಮೊಬೈಲ್ನಿಂದಾಗಿ ವರ್ಷದ ದುಡಿಮೆ ಬೇರೆಯವರ ಪಾಲಾಗಬಹುದು.
Digital Safety Tips: ಪ್ರಸ್ತುತ ಕಾಲಮಾನದಲ್ಲಿ ಮೊಬೈಲ್ ಫೋನ್ ಜೀವನದ ಪ್ರಮುಖ ಭಾಗವಾಗಿಬಿಟ್ಟಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಬಿಡುವಿನ ವೇಳೆಯಲ್ಲಿ ಬಹುತೇಕ ಸಮಯವನ್ನು ಫೋನ್ನಲ್ಲಿಯೇ ಕಳೆಯುವ ಮಾತನ್ನು ಅಳ್ಳಗೆಳೆಯುವಂತೆಯೇ ಇಲ್ಲ. ಅದೇನೇ ಇರಲಿ ಫೋನ್‌ಗಳು ಜನರ ಜೀವನವನ್ನು ಎಷ್ಟು ಸುಲಭವಾಗಿಸಿದೆಯೋ ಅಷ್ಟೇ ಅಪಾಯದಲ್ಲೂ ಇರಿಸಿದೆ ಎಂಬುದನ್ನು ಒಪ್ಪಲೇಬೇಕು.
ಹೌದು, ಮೊಬೈಲ್ ಫೋನ್‌ನಲ್ಲಿ ಸಿಕ್ಕಸಿಕ್ಕ ಅಪ್ಲಿಕೇಶನ್ ಗಳನ್ನು ಡೌನ್‌ಲೋಡ್ ಮಾಡುವ ಮುನ್ನ ಈ ಸುದ್ದಿಯನ್ನು ಮಿಸ್ ಮಾಡದೆ ಓದಿ. ಮೊಬೈಲ್‌ನಲ್ಲಿ App ಡೌನ್‌ಲೋಡ್ ಮಾಡುವಾಗ ಕೆಲವು ವಿಚಾರಗಳನ್ನು ನಿರ್ಲಕ್ಷಿಸಿದರೆ ನಿಮ್ಮ ಗೌಪ್ಯತೆಗೆ ಧಕ್ಕೆ ಉಂಟಾಗಬಹುದು. ಮಾತ್ರವಲ್ಲ, ವರ್ಷಗಳ ಕಾಲ ದುಡಿದು ಸಂಪಾದಿಸಿದ ಹಣವೂ ಖಾಲಿಯಾಗಬಹುದು.
ಇದನ್ನೂ ಓದಿ- BSNL ಬಳಕೆದಾರರಿಗೆ ಜಾಕ್ ಪಾಟ್: ಜಿಯೋ, ಏರ್ಟೆಲ್‌ಗಿಂತ ಅಗ್ಗದ ಬೆಲೆಯ ರಿಚಾರ್ಜ್ ಯೋಜನೆ ಘೋಷಣೆ
ನಿಮ್ಮ ಫೋನ್‌ನಲ್ಲಿ ಯಾವುದಾದರೂ ಹೊಸ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುತ್ತಿದ್ದರೆ ಅಪ್ಲಿಕೇಶನ್‌ನ ಪ್ರಕಾಶಕರ ಬಗ್ಗೆ ದಯಮಾಡಿ ಪರಿಶೀಲಿಸಿ. ಒಂದೊಮ್ಮೆ ಅಪ್ಲಿಕೇಷನ್ ವಿಶ್ವಾಶಾರ್ಹವಲ್ಲ ಎಂದು ನೀವು ಭಾವಿಸಿದರೆ ಯಾವುದೇ ಕಾರಣಕ್ಕೂ ಅದನ್ನು ಡೌನ್‌ಲೋಡ್ ಮಾಡಲೇಬೇಡಿ. ಇಲ್ಲವೇ ನೀವು ಅಪಾಯಕ್ಕೆ ಸೀಳುಕಬೇಕಾಗುತ್ತದೆ. ಮಾತ್ರವಲ್ಲ, ನಿಮ್ಮ ಅಕೌಂಟ್ ಕೂಡ ಖಾಲಿಯಾಗುತ್ತದೆ.
ಇದನ್ನೂ ಓದಿ- ಜಬರ್ದಸ್ತ್ ಫೀಚರ್ಸ್ ಜೊತೆಗೆ ಕೇವಲ 5,000 ರೂ.ನಲ್ಲಿ ಸಿಗುತ್ತೆ ಬಜೆಟ್ ಸ್ನೇಹಿ 5G ಸ್ಮಾರ್ಟ್‌ಫೋನ್
ಇತ್ತೀಚಿನ ದಿನಗಳಲ್ಲಿ ಅಂತಹ ವಂಚನೆ ಪ್ರಕರಣಗಳು ಮುನ್ನಲೆಗೆ ಬಂದಿದ್ದು ಆಪ್ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ನ ಗೌಪ್ಯತೆ ಪರಿಶೀಲಿಸದೆ ಡೌನ್‌ಲೋಡ್ ಮಾಡಿದರೆ ನಿಮ್ಮ ವೈಯಕ್ತಿಕ ಡೇಟಾ ವಂಚಕರ ಕೈ ಸೇರಬಹುದು. ಇದನ್ನು ತಪ್ಪಿಸಲು Apple ನ ಆಪ್ ಸ್ಟೋರ್‌ನಿಂದ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು ಅಪ್ಲಿಕೇಷನ್ ಗೆ ಸಂಬಂಧಿಸಿದಂತೆ ಡೇಟಾ ಸುರಕ್ಷತೆಯನ್ನು ತಪ್ಪದೇ ಪರಿಶೀಲಿಸಿ. ನಂತರವಷ್ಟೇ ನಿಮ್ಮ ಸಾಧನದಲ್ಲಿ ಆಪ್ ಡೌನ್‌ಲೋಡ್ ಮಾಡಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.