Public Wi-Fi: ಈ ತಂತ್ರಜ್ಞಾನ ಯುಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸಾರ್ವಜನಿಕ ಸ್ಥಳಗಳಾದ ರೈಲು ನಿಲ್ದಾಣಗಳು, ಹೊಟೇಲ್‌ಗಳು, ಬಸ್ ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಹಲವು ಸ್ಥಳಗಳಲ್ಲಿ Wi-Fi ಸ್ಥಾಪಿಸಲಾಗಿರುತ್ತದೆ.   ಇಂತಹ ಸ್ಥಳಗಳಲ್ಲಿ ಸ್ಥಾಪಿಸಲಾದ ವೈ-ಫೈ ಅನ್ನು 'ಸಾರ್ವಜನಿಕ ವೈ-ಫೈ' ಎಂದು ಕರೆಯಲಾಗುತ್ತದೆ.  


COMMERCIAL BREAK
SCROLL TO CONTINUE READING

2024ರ ಆರಂಭದಲ್ಲಿ, ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ವೈ-ಫೈ ಆಕ್ಸೆಸ್ ನೆಟ್‌ವರ್ಕ್ ಇಂಟರ್ಫೇಸ್ (PM-WANI) ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ ಜನರು ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಸೌಲಭ್ಯವನ್ನು ಬಳಸಲು ಅನುಕೂಲವಾಗಿದೆ.  ಅದರಲ್ಲೂ ಕೆಲವರು ನಿಯಮಿತವಾಗಿ ಇಂತಹ ಪಬ್ಲಿಕ್ ವೈ-ಫೈ ಬಳಸುತ್ತಾರೆ. ಆದರೆ, ಇದು ಎಷ್ಟು ಸುರಕ್ಷಿತ ಎಂದು ಎಂದಾದರೂ ಯೋಚಿಸಿದ್ದೀರಾ? 


ಇದನ್ನೂ ಓದಿ- ಬಿಎಸ್‌ಎನ್‌ಎಲ್‌ನ ಬೊಂಬಾಟ್ ಪ್ಲಾನ್: ಅಗ್ಗದ ರೀಚಾರ್ಜ್ ಯೋಜನೆಯಲ್ಲಿ 200 ದಿನಗಳವರೆಗೆ ಫ್ರೀ ಕಾಲ್


ವಾಸ್ತವವಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಕೆಲವೊಮ್ಮೆ ವೈ-ಫೈ ಅನ್ನು ಉಚಿತವಾಗಿ ಸ್ಥಾಪಿಸಲಾಗಿದ್ದರೆ, ಕೆಲವೊಮ್ಮೆ ಈ ವೈ-ಫೈಗಳಿಗೆ ಪಾಸ್ವರ್ಡ್ ನಿಂದ ರಕ್ಷಿಸಲಾಗಿರುತ್ತದೆ.  ಪಾಸ್ವರ್ಡ್ ಹೊಂದಿರುವ ವೈ-ಫೈ ಅನ್ನು ಸುರಕ್ಷಿತವೆಂದು ಭಾವಿಸುತ್ತಾರೆ. ಆದರೆ, ಇದು ತಪ್ಪು ಕಲ್ಪನೆ. ಸಾರ್ವಜನಿಕ ವೈ-ಫೈ ಬಳಸುವುದರಿಂದ ಅನಾನುಕೂಲಗಳು ಕೂಡ ಇವೆ ಎಂಬುದನ್ನೂ ನಿರ್ಲಕ್ಷಿಸುವಂತಿಲ್ಲ. 


ಈ ತಂತ್ರಜ್ಞಾನ ಯುಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಲಭ್ಯವಿರುವ ಮಾಹಿತಿಯ ಪ್ರಕಾರ, 2024ರ ಮೊದಲ ಆರು ತಿಂಗಳಿಂದಲ್ಲಿ ಕೇವಲ ಬೆಂಗಳೂರು ನಗರ ಒಂದರಲ್ಲೇ ಜನರು ಸೈಬರ್ ವಂಚನೆಯಿಂದ 845 ಕೋಟಿ ರೂಪಾಯಿಯನ್ನು ಕಳೆದುಕೊಂಡಿದ್ದಾರೆ ಎಂದು ವರಡಿಯೊಂದು ತಿಳಿಸಿದೆ. ಇನ್ನೂ ಶಾಕಿಂಗ್ ಸಂಗತಿಯೆಂದರೆ, ಒಟ್ಟು 9,260 ವಂಚನೆ ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ ಹೆಚ್ಚಿನ ಸಂತ್ರಸ್ತರು ‌ಲೈನ್ ವಹಿವಾಟು ಮಾಡುವ ಮೊದಲು ಹೋಟೆಲ್‌ಗಳು, ಲಾಂಜ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ವೈ-ಫೈ ಬಳಸುತ್ತಿದ್ದರು ಎಂಬುದಾಗಿದೆ.  


ಇದನ್ನೂ ಓದಿ- iPhone ಬಳಕೆದಾರರಿಗೆ ಸರ್ಕಾರದಿಂದ ರೆಡ್ ಅಲರ್ಟ್..! ನಿರ್ಲಕ್ಷಿಸಿದ್ರೆ ಅಪಾಯ ಖಂಡಿತ...!


ಸಾರ್ವಜನಿಕ ವೈ-ಫೈ ಏಕೆ ಸುರಕ್ಷಿತವಲ್ಲ? 
ತೆರೆದ ನೆಟ್‌ವರ್ಕ್‌ಗಳು: 

ಪಬ್ಲಿಕ್ ವೈ-ಫೈ ಡೇಟಾ ಎನ್‌ಕ್ರಿಪ್ಶನ್ ಹೊಂದಿರುವುದಿಲ್ಲ. ಎಂದರೆ ಇದು ತೆರೆದ ನೆಟ್‌ವರ್ಕ್ ಆಗಿರುತ್ತದೆ. ಇದರಿಂದಾಗಿ ವಂಚಕರು ಸುಲಭವಾಗಿ ಡೇಟಾ ಮಾಹಿತಿಗಳನ್ನು ಪಡೆಯುತ್ತಾರೆ. 
 
ನಕಲಿ ಹಾಟ್‌ಸ್ಪಾಟ್: 
ಸಾರ್ವಜನಿಕ ಸ್ಥಳಗಳಲ್ಲಿ ನಕಲಿ ಹಾಟ್‌ಸ್ಪಾಟ್ ರಚಿಸುವ ಮೂಲಕ ಹ್ಯಾಕರ್‌ಗಳು ಸ್ಮಾರ್ಟ್ಫೋನ್ ಬಳಕೆದಾರರನ್ನು ವಂಚನೆಯ ಜಾಲದಲ್ಲಿ ಬೀಳಿಸುವ ಸಾಧ್ಯತೆ ಇರುತ್ತದೆ.  


ಮಾಲ್‌ವೇರ್ ಅಪಾಯ: 
ಪಬ್ಲಿಕ್ ವೈ-ಫೈ ಬಳಸುವಾಗ ಮಾಲ್‌ವೇರ್ ಅಪಾಯವೂ ಹೆಚ್ಚಾಗಿರುತ್ತದೆ. 


ಮ್ಯಾನ್-ಇನ್-ದಿ-ಮಿಡಲ್ ಅಟ್ಯಾಕ್:
ಸಾರ್ವಜನಿಕ ವೈ-ಫೈ ನೆಟ್‌ವರ್ಕ್ ಬಳಸುವಾಗ ಹ್ಯಾಕರ್‌ಗಳು ಡೆತಾವನ್ನು ಪ್ರತಿಬಂಧಿಸುವ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುವ ಅಪಾಯವಿರುತ್ತದೆ.  


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.