ನವದೆಹಲಿ : ಇಂದು, ಇಂಟರ್ನೆಟ್ ಮತ್ತು ಆನ್‌ಲೈನ್ ಕಾರಣಗಳಿಂದಾಗಿ ಬಹಳಷ್ಟು ಕೆಲಸಗಳು ಸುಲಭವಾಗಿ ನಡೆದು ಹೋಗುತ್ತವೆ. ಆದರೆ ಅದು ಜನಸಾಮಾನ್ಯರನ್ನು ತೊಂದರೆಗೆ ಸಿಲುಕಿಸಿರುವುದು ಕೂಡಾ ಸುಳ್ಳಲ್ಲ. ಇಂಟರ್ನೆಟ್ ಯುಗದಲ್ಲಿ, ಸೈಬರ್ ಕ್ರೈಮ್ (Cyber crime) ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ. ಅವುಗಳನ್ನು ತಡೆಯಲು ಎಷ್ಟು ಪ್ರಯತ್ನಿಸಿದರೂ, ವಂಚಕರು ಕೂಡಾ ಹೊಸ ಹೊಸ ದಾರಿಗಳನ್ನು ಹುಡುಕುತ್ತಲೇ ಇದ್ದಾರೆ. ಇತ್ತೀಚೆಗೆ ಸೈಬರ್ ಕ್ರಿಮಿನಲ್ ಗಳು (Cyber criminals) ಜನರ ಸ್ಮಾರ್ಟ್ ಫೋನ್ ಗಳನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ವಂಚನೆ ಮಾಡುತ್ತಿರುವ ಹಲವು ಪ್ರಕರಣಗಳು ಬೆಳೆಕಿಗೆ ಬಂದಿವೆ. ‘ಆನ್‌ಲೈನ್ ಶಾಪಿಂಗ್’ (online shopping) ಎಂಬ ನೆಪ ಹೇಳಿ ಸುಳ್ಳು ಸಂದೇಶಗಳನ್ನು ರವಾನಿಸಿ ಜನರನ್ನು ಮೂರ್ಖರನ್ನಾಗಿಸಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇಂತಹ ಸಂದೇಶಗಳ ಬಗ್ಗೆ ಎಚ್ಚರವಿರಲಿ :  
ಆನ್‌ಲೈನ್ ಶಾಪಿಂಗ್ (online shopping) ಹೆಸರಿನಲ್ಲಿ ಅನೇಕ ಬಾರಿ ಮೊಬೈಲ್ ಗೆ ಸಂದೇಶಗಳು ಮತ್ತು ಕರೆಗಳು ಬರುತ್ತವೆ. ಈ ಮೂಲಕ ಜನರ  ಬ್ಯಾಂಕ್ ವಿವರಗಳು (bank details) ಮತ್ತು ವೈಯಕ್ತಿಕ ಮಾಹಿತಿಯನ್ನು ಪಡೆಯಲು ವಂಚಕರು ಪ್ರಯತ್ನಿಸುತ್ತಾರೆ. ದುರದೃಷ್ಟವಶಾತ್ ಕೆಲವೊಮ್ಮೆ ಈ ಕಾರ್ಯದಲ್ಲಿ ಯಶಸ್ವಿ ಕೂಡಾ ಆಗುತ್ತಾರೆ. 


ಇದನ್ನೂ ಓದಿ : ಎಚ್ಚರ..! ಈ ‘Paytm’ ಆಪ್ ಬಳಸಿದರೆ ಅನುಭವಿಸಬೇಕಾದೀತು ಜೈಲು ವಾಸ, ಸುರಕ್ಷಿತವಾಗಿರಲು ಹೀಗೆ ಮಾಡಿ


ಆನ್‌ಲೈನ್ ಶಾಪಿಂಗ್ ಹೆಸರಿನಲ್ಲಿ ಗಂಭೀರ ವಂಚನೆ : 
ಯುರೋಪೋಲ್‌ನ ವಾರ್ಷಿಕ ಸೈಬರ್ ಕ್ರೈಮ್ ವರದಿಯ (cyber crime report) ಪ್ರಕಾರ, COVID-19 ಸಾಂಕ್ರಾಮಿಕ ರೋಗವು ಹರಡಿರುವುದರಿಂದ ಮತ್ತು ಲಾಕ್‌ಡೌನ್‌ಗಳು (lockdown) ಜಾರಿಯಲ್ಲಿರುವಾಗಿನಿಂದ ಆನ್‌ಲೈನ್ ಶಾಪಿಂಗ್ ಗಮನಾರ್ಹವಾಗಿ ಹೆಚ್ಚಾಗಿದೆ. ಮತ್ತು ಇದರೊಂದಿಗೆ ವಂಚನೆ ಪ್ರಕರಣಗಳಲ್ಲಿಯೂ ಹೆಚ್ಚಳ ಕಂಡುಬಂದಿದೆ. ಅನೇಕ ವಂಚನೆ ವೆಬ್‌ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಸರಕುಗಳನ್ನು ನೀಡುವುದಾಗಿ ಹೇಳಿ ಮೋಸ ಮಾಡುತ್ತಿವೆ. ಜನರಿಂದ ಹಣವನ್ನು ಪಡೆದು ಜನರನ್ನು ಮೂರ್ಖರನ್ನಾಗಿಸುತ್ತದೆ.  


ಇದು ಭಾರತದಲ್ಲಿ ಮಾತ್ರ ನಡೆಯುತ್ತಿಲ್ಲ ವಿದೇಶಗಳಲ್ಲಿಯೂ ನಡೆಯುತ್ತಿದೆ. ಯುಎಸ್‌ನಲ್ಲಿ ಕಳ್ಳರನ್ನು ಹಿಡಿಯುವವರಿಗೆ ದೊಡ್ಡ ಬಹುಮಾನವನ್ನು ಸಂಸ್ಥೆಗಳು ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಅತ್ಯಂತ ಜಾಗರೂಕರಾಗಿರಬೇಕು. ನಿಮ್ಮ ಬ್ಯಾಂಕ್ ವಿವರಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.


ಇದನ್ನೂ ಓದಿ : Xiaomi ಸ್ಮಾರ್ಟ್ ವಾಚ್‌ನ ಕ್ರೇಜ್, ನಿಮಿಷಗಳಲ್ಲಿ ದಾಖಲೆಯ ಮಾರಾಟ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ