ಕಡಿಮೆ ಬಜೆಟ್ನಲ್ಲಿ ಅತ್ಯುತ್ತಮ ಕ್ಯಾಮೆರಾ ಫೋನ್ ಖರೀದಿಸಬೇಕೆಂದಿದ್ದೀರಾ? ಹಾಗಾದ್ರೆ ಇಲ್ಲಿದೆ ನೋಡಿ ಬೆಸ್ಟ್ ಆಯ್ಕೆಗಳು
ಈ ಹಿಂದೆ ಒಂದು ಫೋಟೋ ತೆಗೆಯಬೇಕೆಂದರೆ ಸ್ಟುಡಿಯೋಗಳಿಗೆ ಹೋಗಬೇಕಿತ್ತು. ಆದರೆ ಈಗ ಸ್ಮಾರ್ಟ್‌ಫೋನ್ʼಗಳಲ್ಲೇ ಆ ಆಯ್ಕೆಗಳು ಲಭ್ಯವಿವೆ. ನಾವು ಎಲ್ಲಿಗೆ ಹೋದರೂ ಅಲ್ಲಿನ ಮಧುರ ಕ್ಷಣಗಳನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾದ ಸಹಾಯದಿಂದ ಸೆರೆಹಿಡಿಯುತ್ತೇವೆ.
Cheap and Best Smartphones: ಸಮಯ ಎಂಬುದು ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಅಮೂಲ್ಯವಾದುದು. ಎಷ್ಟೇ ಕೋಟಿ ರೂಪಾಯಿ ಖರ್ಚು ಮಾಡಿದರೂ ಕಳೆದು ಹೋದ ಒಂದು ಸೆಕೆಂಡ್ ಸಮಯವನ್ನು ಮರಳಿ ತರಲು ಸಾಧ್ಯವಿಲ್ಲ. ಆದರೆ ಒಂದೇ ಒಂದು ಫೋಟೋಗೆ ಮಾತ್ರ ಕಳೆದ ಕ್ಷಣಗಳನ್ನು ಕಣ್ಮುಂದೆ ತರುವ ಶಕ್ತಿ ಇದೆ.
ಇದನ್ನೂ ಓದಿ: ಮುನಿರತ್ನ ನೇತೃತ್ವದಲ್ಲಿ ಏಡ್ಸ್ ಸೋಂಕು ಹರಡುವ ಜಾಲ : ಸಮಗ್ರ ತನಿಖೆಗೆ ಮಾಜಿ ಸಂಸದ ಡಿ.ಕೆ.ಸುರೇಶ್
ಈ ಹಿಂದೆ ಒಂದು ಫೋಟೋ ತೆಗೆಯಬೇಕೆಂದರೆ ಸ್ಟುಡಿಯೋಗಳಿಗೆ ಹೋಗಬೇಕಿತ್ತು. ಆದರೆ ಈಗ ಸ್ಮಾರ್ಟ್‌ಫೋನ್ʼಗಳಲ್ಲೇ ಆ ಆಯ್ಕೆಗಳು ಲಭ್ಯವಿವೆ. ನಾವು ಎಲ್ಲಿಗೆ ಹೋದರೂ ಅಲ್ಲಿನ ಮಧುರ ಕ್ಷಣಗಳನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾದ ಸಹಾಯದಿಂದ ಸೆರೆಹಿಡಿಯುತ್ತೇವೆ. ಇನ್ನು ನಾವಿಂದು ಈ ವರದಿಯಲ್ಲಿ 20 ಸಾವಿರ ರೂ.ಗಳಲ್ಲಿ ಲಭ್ಯವಿರುವ ಅತ್ಯುತ್ತಮ ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್ ಫೋನ್ʼಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
Vivo T3:
Vivo T3 ಫೋನ್‌ನಲ್ಲಿರುವ OIS ಮತ್ತು EIS ತಂತ್ರಜ್ಞಾನದೊಂದಿಗೆ, ನೀವು ಯಾವುದೇ ಶೇಕ್ ಮತ್ತು ಬ್ಲರ್ ಇಲ್ಲದೆ ಚಿತ್ರಗಳನ್ನು ತೆಗೆದುಕೊಳ್ಳಬಹುದು. ಸೋನಿ ಸೆನ್ಸರ್, 6.67 ಅಲ್ಟ್ರಾ ವಿಷನ್ AMOLED ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಶನ್ 7200 4M ಪ್ರೊಸೆಸರ್, 5000 mAh ಬ್ಯಾಟರಿ ವೈಶಿಷ್ಟ್ಯತೆಗಳು ಈ ಫೋನ್ʼನಲ್ಲಿದ್ದು ಇದರ ಬೆಲೆ ರೂ.19,999.
IQ Z9:
ಈ ಮೊಬೈಲ್‌ನಲ್ಲಿರುವ ಸೂಪರ್ ನೈಟ್ ಮೋಡ್ʼನಿಂದ ಕತ್ತಲೆಯಲ್ಲಿಯೂ ಫೋಟೋಗಳನ್ನು ಸ್ಪಷ್ಟವಾಗಿ ತೆಗೆಯಬಹುದು. 50MP ಸೋನಿ OIS ಕ್ಯಾಮರಾ ಚಾಲನೆಯಲ್ಲಿರುವಾಗಲೂ ಸ್ಥಿರವಾದ ಫೋಟೋಗಳನ್ನು ಕ್ಲಿಕ್ ಮಾಡುತ್ತದೆ. ಅಷ್ಟೇ ಅಲ್ಲದೆ AI ತಂತ್ರಜ್ಞಾನವನ್ನು ಬಳಸಿಕೊಂಡು ಉತ್ತಮ ಚಿತ್ರಗಳನ್ನು ತೆಗೆದುಕೊಳ್ಳಬಹುದು. Media Tech Dimension 7200 4M ಪ್ರೊಸೆಸರ್, 5000 mAh ಬ್ಯಾಟರಿ ಮತ್ತು 6.7 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ರೂ.19,998ಕ್ಕೆ ಲಭ್ಯವಿದೆ.
Samsung Galaxy M35:
OIS ಜೊತೆಗೆ 50 MP ಟ್ರಿಪಲ್ ಕ್ಯಾಮೆರಾ ವ್ಯವಸ್ಥೆ, Exynos 1380 ಪ್ರೊಸೆಸರ್, 6000 AMH ಬ್ಯಾಟರಿ ಈ ಸ್ಮಾರ್ಟ್‌ಫೋನ್‌ನ ವಿಶೇಷತೆಗಳಾಗಿವೆ. ಇನ್ಸಿನಿಟಿ ಒ ಡಿಸ್ಪ್ಲೇಯೊಂದಿಗೆ ದೃಶ್ಯಗಳು ಸ್ಪಷ್ಟವಾಗಿ ಸೆರೆಯಾಗುತ್ತವೆ. ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ರೂ.19,275ಕ್ಕೆ ಲಭ್ಯವಿದೆ.
Moto G85:
ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಹೊಂದಿರುವ 50 MP ಕ್ಯಾಮೆರಾ ಇದರ ವಿಶಿಷ್ಟ ಫೀಚರ್. 3D ಕರ್ವ್ಡ್ ಪೋಲ್ಡ್ 6.7 ಇಂಚಿನ ಡಿಸ್ಪ್ಲೇ ಇದ್ದು, 32MP ಹೈ ರೆಸಲ್ಯೂಶನ್ ಕ್ಯಾಮೆರಾದೊಂದಿಗೆ ಸೆಲ್ಫಿಗಳು ಉತ್ತಮ ಬರುತ್ತದೆ. Snapdragon 6S Gen3 ಪ್ರೊಸೆಸರ್ ಮತ್ತು 500 mAh ಬ್ಯಾಟರಿ ಹೊಂದಿರುವ ಈ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ರೂ.17,499 ಕ್ಕೆ ಲಭ್ಯವಿದೆ.
ಇದನ್ನೂ ಓದಿ: 147 ವರ್ಷಗಳಲ್ಲಿ ಇದೇ ಮೊದಲು... ವಿಶ್ವದಾಖಲೆ ಬರೆದೇಬಿಟ್ರು ಭಾರತದ ಸ್ಪಿನ್ ಮಾಂತ್ರಿಕ ಅಶ್ವಿನ್
CMF (ನಥಿಂಗ್ 1)
ನಥಿಂಗ್ ಬ್ರ್ಯಾಂಡ್ ಬಿಡುಗಡೆ ಮಾಡಿದ CMF 1 ಫೋನ್ ಉತ್ತಮ ಕ್ಯಾಮೆರಾವನ್ನು ಹೊಂದಿದೆ. ಅದರ 50 MP ಕ್ಯಾಮೆರಾದೊಂದಿಗೆ ಫೋಟೋಗಳು ಸ್ಪಷ್ಟವಾಗಿ ಕ್ಲಿಕ್ ಆಗುತ್ತವೆ. MediaTek Dimension 7300 Octacore ಪ್ರೊಸೆಸರ್, 5000 mAh ಬ್ಯಾಟರಿ ಕಾರ್ಯಕ್ಷಮತೆಗೆ ಉತ್ತಮವಾಗಿದೆ. CMF 1 ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ರೂ.15,999 ಕ್ಕೆ ಲಭ್ಯವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ