5 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಕಾರುಗಳಿವು ! ಸೆವೆನ್ ಸೀಟರ್ ಕೂಡಾ ಈ ಲಿಸ್ಟ್ ನಲ್ಲಿದೆ
Cars Under 5 Lakhs : 5 ಲಕ್ಷದೊಳಗಿನ 4 ಕಾರುಗಳ ಬಗ್ಗಿನ ಮಾಹಿತಿ ಇಲ್ಲಿದೆ. ವಿಶೇಷವೆಂದರೆ ಈ ಕಾರುಗಳು ಸಾಕಷ್ಟು ಮೈಲೇಜ್ ಕೂಡಾ ನೀಡುತ್ತದೆ.
Cars Under 5 Lakhs : ಭಾರತೀಯ ಕಾರು ಮಾರುಕಟ್ಟೆಯು ಸೆಡಾನ್ ಮತ್ತು ಐಷಾರಾಮಿ ಕಾರುಗಳಿಂದ ಹಿಡಿದು SUV ಗಳವರೆಗೆ ಪ್ರತಿಯೊಂದು ವಿಭಾಗದಲ್ಲೂ ವಿವಿಧ ಆಯ್ಕೆಗಳೊಂದಿಗೆ ವ್ಯಾಪಕ ಶ್ರೇಣಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇವುಗಳ ಮಧ್ಯೆ ಹ್ಯಾಚ್‌ಬ್ಯಾಕ್ ಕಾರುಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಭಾರತದಲ್ಲಿ ಮಾರಾಟವಾಗುವ ಟಾಪ್ 3 ಕಾರುಗಳು ಹ್ಯಾಚ್‌ಬ್ಯಾಕ್‌ಗಳಾಗಿವೆ. ಇದಲ್ಲದೇ ದೇಶದಲ್ಲಿ ಕಾರು ಖರೀದಿದಾರರ ಅಗ್ಗದ ವಾಹನಗಳತ್ತ ಹೆಚ್ಚು ಒಲವು ತೋರುತ್ತಾರೆ. 5 ಲಕ್ಷದೊಳಗಿನ 4 ಕಾರುಗಳ ಬಗ್ಗಿನ ಮಾಹಿತಿ ಇಲ್ಲಿದೆ. ವಿಶೇಷವೆಂದರೆ ಈ ಕಾರುಗಳು ಸಾಕಷ್ಟು ಮೈಲೇಜ್ ಕೂಡಾ ನೀಡುತ್ತದೆ.
ಮಾರುತಿ ಆಲ್ಟೊ ಕೆ10 :
ಮಾರುತಿ ಆಲ್ಟೊ ಕೆ10 ಪ್ರಸ್ತುತ ದೇಶದ ಅತ್ಯಂತ ಅಗ್ಗದ ಕಾರು. ಇದರ ಬೆಲೆ 3.99 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಇದು ಒಟ್ಟು ನಾಲ್ಕು ರೂಪಾಂತರಗಳಲ್ಲಿ ಬರುತ್ತದೆ - Std, Lxi, Vxi, Vxi+. ಇದು 214 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ. ಕಾರು 1.0-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 67bhp ಪವರ್ ಮತ್ತು 89Nm ಟಾರ್ಕ್ ಅನ್ನು ಜನರೆಟ್ ಮಾಡುತ್ತದೆ.
ಇದನ್ನೂ ಓದಿ : ನಯಾ ಪೈಸೆ ಖರ್ಚಿಲ್ಲ ! ಮಳೆಗಾಲದಲ್ಲಿ ಕಾರಿನೊಳಗಿನಿಂದ ಬರುವ ದುರ್ವಾಸನೆ ತಡೆಯಲು ಇಷ್ಟು ಮಾಡಿ
ರೆನಾಲ್ಟ್ ಕ್ವಿಡ್ :
ಈ ಕಾರು ಮಾರುತಿ ಆಲ್ಟೊದೊಂದಿಗೆ ಸ್ಪರ್ಧಿಸುತ್ತದೆ. ಕ್ವಿಡ್‌ನ ಆರಂಭಿಕ ಬೆಲೆ 4.70 ಲಕ್ಷ ರೂ. ಇದಕ್ಕೆ ಸಣ್ಣ ಎಸ್‌ಯುವಿ ತರಹದ ವಿನ್ಯಾಸವನ್ನು ನೀಡಲಾಗಿದೆ. ಕ್ವಿಡ್‌ನಲ್ಲಿ ಎರಡು ಎಂಜಿನ್ ಆಯ್ಕೆಗಳಿವೆ. ಮೊದಲ ಆಯ್ಕೆಯು 0.8L 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಮತ್ತು ಎರಡನೆಯದು 1.0L 3-ಸಿಲಿಂಡರ್ ಪೆಟ್ರೋಲ್ ಎಂಜಿನ್ . ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು AMT ಟ್ರಾನ್ಸ್ಮಿಷನ್ ಅನ್ನು ಪಡೆಯುತ್ತದೆ.
ಮಾರುತಿ ಸುಜುಕಿ ಎಸ್ ಪ್ರೆಸ್ಸೊ :
ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಕೆ-ಸೀರೀಸ್ 1.0-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದೆ. ಅದು 66 ಬಿಎಚ್‌ಪಿ ಪವರ್ ಮತ್ತು 89 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ವಾಹನದ ಬೆಲೆ 4.26 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಈ ವಾಹನವು ನೋಡಲು ಚಿಕ್ಕದಾಗಿದೆ. ಆದರೆ ಇದರಲ್ಲಿ ಸಾಕಷ್ಟು ಸ್ಪೇಸ್ ನೀಡಲಾಗಿದೆ. ಇದರಲ್ಲಿ ಸಿಎನ್‌ಜಿ ಆಯ್ಕೆಗಳೂ ಲಭ್ಯವಿವೆ. CNG ಯೊಂದಿಗೆ, S-ಪ್ರೆಸ್ಸೊ 32KM ಗಿಂತ ಹೆಚ್ಚು ಮೈಲೇಜ್ ಪಡೆಯುತ್ತದೆ.
ಇದನ್ನೂ ಓದಿ : ಹೀಗೆ ಮಾಡಿದರೆ ನೀವು ಬುಕ್ ಮಾಡುವ ರೈಲು ಟಿಕೆಟ್ ಕನ್ಫರ್ಮ್ ಆಗುವುದು ಪಕ್ಕಾ !
ಮಾರುತಿ ಇಕೋ :
ಇದು ದೇಶದ ಅತ್ಯಂತ ಅಗ್ಗದ ಸೆವೆನ್ ಸೀಟರ್ ಕಾರು. ಇದರ ಬೆಲೆ 5.27 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇದು 72.4 Bhp ಪವರ್ ಮತ್ತು 98 Nm ಟಾರ್ಕ್ ಅನ್ನು ಉಜನರೇಟ್ ಮಾಡುತ್ತದೆ. ಈ ವಾಹನದಲ್ಲಿ CNG ಆಯ್ಕೆಯೂ ಇದೆ. ಇದರೊಂದಿಗೆ ಮಾರುತಿ Eeco ನೀಡುವ ಮೈಲೇಜ್ 20KM ಗಿಂತ ಹೆಚ್ಚು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.