ಬೆಂಗಳೂರು : Mosquito Killer Lamp : ಚಳಿಗಾಲದಲ್ಲಿ ಸೊಳ್ಳೆಗಳ  ಕಾಟ ಮಿತಿ ಮೀರುತ್ತದೆ. ಸೊಳ್ಳೆಗಳ ಕಾಟ ತಪ್ಪಿಸಲು ಸೊಳ್ಳೆ ಪರದೆ,   ಕಾಯಿಲ್, ಲೋಶನ್, ಕ್ರೀಂ ಹೀಗೆ ಬೇರೆ ಬೇರೆ ರೀತಿಯ ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ. ಆದರೂ ಸೊಳ್ಳೆಗಳಿಂದ ಮುಕ್ತಿ ಸಿಗುವುದಿಲ್ಲ. ಮಾತ್ರವಲ್ಲ ಈ ಎಲ್ಲಾ ರಾಸಾಯನಿಕಗಳ ಬಳಕೆಯಿಂದ ಆರೋಗ್ಯದ ಮೇಲೆ ಕೂಡಾ ಕೆಟ್ಟ ಪರಿಣಾಮ ಬೀರುತ್ತದೆ.  ಆದರೆ ಇದೀಗ ಮಾರುಕಟ್ಟೆಗೆ ಬಂದಿರುವ ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ ಸುಲಭವಾಗಿ ಸೊಳ್ಳೆಗಳನ್ನು ಕೊಂದು ಬಿಡುತ್ತವೆ. ಅಲ್ಲದೆ ಈ ಲ್ಯಾಂಪ್ ಅನ್ನು ಪರಿಸರ ಸ್ನೇಹಿ ಎಂದು ಕೂಡಾ  ಹೇಳಲಾಗುತ್ತದೆ. ಅಂದರೆ ಇದನ್ನು ಬಳಸಿದರೆ ಯಾವುದೇ ರೀತಿಯಲ್ಲಿಯೂ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ. 


COMMERCIAL BREAK
SCROLL TO CONTINUE READING

ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ :
ಈ ಸಾಧನದ ಹೆಸರು ಬಗ್ ಝಾಪರ್ ಮಾಸ್ಕಿಟೋ ಅಂಡ್ ಫ್ಲೈ ಕಿಲ್ಲರ್  ಇಂಡೋರ್ ಲೈಟ್ ವಿತ್ ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ ಪೋರ್ಟಬಲ್ ಯುಎಸ್‌ಬಿ ಎಲ್ಇಡಿ ಟ್ರ್ಯಾಪ್. ಇದನ್ನು ಎರಡು ಯೂನಿಟ್ ಗಳನ್ನು ಬಳಸಿ ಮಾಡಲಾಗಿದೆ. ಇದರಲ್ಲಿ ಒಂದು ಯೂನಿಟ್ ರೇಖೆಯಂತೆ ಕಾರ್ಯ ನಿರ್ವಹಿಸಿದರೆ ಇನ್ನೊಂದು ಸೊಳ್ಳೆಗಳನ್ನು ಆಕರ್ಷಿಸುವ ಕೆಲಸ ಮಾಡುತ್ತದೆ. ಈ ಲ್ಯಾಂಪ್ ಆನ್ ಆದ ತಕ್ಷಣ ಸೊಳ್ಳೆಗಳನ್ನು ತನ್ನ ಕಡೆಗೆ ಎಳೆದುಕೊಲ್ಲುತ್ತದೆ. ಈ ಮೂಲಕ ಕ್ಷಣಾರ್ಧದಲ್ಲಿ ಎಲ್ಲಾ ಸೊಳ್ಳೆಗಳನ್ನು ಕೊಲ್ಲುತ್ತದೆ. ಸೊಳ್ಳೆಗಳು ಮಾತ್ರವಲ್ಲ ಸಣ್ಣ ಸಣ್ಣ  ಕೀಟಗಳಿಂದಲೂ ಮುಕ್ತಿ ನೀಡುತ್ತದೆ. 


ಇದನ್ನೂ ಓದಿ : Google ಗೆ ಎದುರಾದ ದೊಡ್ಡ ಅಪಾಯ! ChatGPT ಯನ್ನು ಶಕ್ತಿಶಾಲಿ ಸಾಫ್ಟ್ ವೇರ್ ಎನ್ನುತ್ತಿದ್ದಾರೆ ಜನ, ಏನಿದು?


ಎಲೆಕ್ಟ್ರಿಕ್ ಕಿಲ್ಲಿಂಗ್ ಲ್ಯಾಂಪ್ ಬೆಲೆ :
ಈ ಲ್ಯಾಂಪ್ ನ ಸ್ವಿಚ್ ಆಂ ಮಾಡಿದ ಕೂಡಲೇ ಎಲ್ಇಡಿ ದೀಪ ಬೆಳಗುತ್ತದೆ. ಹೀಗಾಗಿ ಇದು ನೈಟ್ ಲ್ಯಾಂಪ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಇದರ ನೀಲಿ ಬೆಳಕಿನಿಂದ ಆಕರ್ಷಿತವಾಗಿ ಸೊಳ್ಳೆಗಳು ಹತ್ತಿರ ಬರುತ್ತವೆ. ಆಗ ಲ್ಯಾಂಪ್ ತನ್ನ ಕೆಲಸ ಮಾಡುತ್ತದೆ. ಅಂದರೆ ಸೊಳ್ಳೆಗಳನ್ನು ತಕ್ಷಣ ತನ್ನೊಳಗೆ ಎಳೆದುಕೊಂಡು ಸಾಯಿಸಿಬಿಡುತ್ತದೆ.   ಈ  ಲ್ಯಾಂಪ್ ನ ಬೆಲೆ ಕೂಡಾ ಕಡಿಮೆ. ಇದರ ಬೆಲೆ ಕೇವಲ 689ರೂ. ಒಮ್ಮೆ ಖರೀದಿಸಿ ತಂದರೆ ವರ್ಷಗಳವರೆಗೆ ಬಳಸಬಹುದು. ಕಾಯಿಲ್, ಲೋಶನ್, ಕ್ರೀಮ್ ಇವುಗಳಿಗೆ ಹೋಲಿಸಿದರೆ ಬೆಲೆ ಅಗ್ಗ ಎಂದೇ ಹೇಳಬಹುದು. 


ಇದನ್ನೂ ಓದಿ : WhatsApp ನ ಈ ಅದ್ಭುತ ವೈಶಿಷ್ಟ್ಯ ಶೀಘ್ರದಲ್ಲಿಯೇ ಬಿಡುಗಡೆ, ಬಳಕೆದಾರರಿಗೇನು ಲಾಭ?


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.