ನವದೆಹಲಿ:  Best Prepaid Plans Bellow 100 Rupees - ಕೊರೊನಾ ಕಾಲದಲ್ಲಿ ನಿಮಗೆ ಮಾರುಕಟ್ಟೆಯಲ್ಲಿ ಹಲವು ರೀತಿಯ ಅಗ್ಗದ ಡೇಟಾ ಪ್ಲಾನ್ ಗಳು ಸಿಗುತ್ತಿವೆ. ಈ ಪ್ಲಾನ್ ಗಳಲ್ಲಿ ಹಲವು ರೀತಿಯ ಬೆನಿಫಿಟ್ ಗಳು ಸಿಗುತ್ತಿವೆ. ಇಂದು ನಾವು ನಿಮಗೆ Jio ಟೆಲಿಕಾಂ ಕಂಪನಿಯ ಅಗ್ಗದ ರಿಚಾರ್ಜ್ ಪ್ಲಾನ್ ಕುರಿತು ಹೇಳುತ್ತಿದ್ದು, ಇದರಲ್ಲಿ ಹಲವು ರೀತಿಯ ಲಾಭಗಳನ್ನು ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

Jio ರೂ.98ರ ರಿಚಾರ್ಜ್ ಪ್ಲಾನ್ (Jio 98 Rs Recharge)
ಅತ್ಯಂತ ಕಡಿಮೆ ಬೆಲೆಯ ಈ ಪ್ಲಾನ್ ನಲ್ಲಿ (Jio Data Plan) ನಿಮಗೆ ಹಲವು ಲಾಭಗಳು ಸಿಗುತ್ತಿವೆ. ಈ ಪ್ಲಾನ್ ಗರಿಷ್ಟ ಅವಧಿ 14 ದಿನಗಳದ್ದಾಗಿದೆ.  ಇದರಲ್ಲಿ ಬಳಕೆದಾರರಿಗೆ ನಿತ್ಯ 1.5 ಜಿಬಿ ಡೇಟಾ ಸಿಗುತ್ತಿದೆ. ಅಂದರೆ ಬಳಕೆದಾರರಿಗೆ ಒಟ್ಟು 14 ದಿನಗಳಲ್ಲಿ 21 ಜಿಬಿ ಡೇಟಾ ಸಿಗುತ್ತಿದೆ.


ಇದನ್ನೂ ಓದಿ- ನಿಮ್ಮ Smart Phone ಬೇರೆ ಅವರಿಗೆ ಮಾರುವ ಮುನ್ನ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ!


ಇದಲ್ಲದೆ ಇನ್ನೂ ಹಲವು ಲಾಭಗಳು ಸಿಗುತ್ತಿವೆ
Jio ಕಂಪನಿಯ ರೂ.98ರ ಯೋಜನೆಯ ಕುರಿತು ಹೇಳುವುದಾದರೆ ಇದರಲ್ಲಿ ಬಳಕೆದಾರರಿಗೆ ಡೇಟಾ ಸೇರಿದಂತೆ ಇತರೆ ಲಾಭಗಳು ಕೂಡ ಸಿಗುತ್ತಿವೆ. ಈ ಪ್ಲಾನ್ ಅಡಿ ಬಳಕೆದಾರರು ಯಾವುದೇ ನಂಬರ್ ಗೆ ಉಚಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಇದಲ್ಲದೆ ಈ ಪ್ಲಾನ್ ಅಡಿಯಲ್ಲಿ ಬಳಕೆದಾರರಿಗೆ ಉಚಿತ ಜಿಯೋ ಆಪ್ ಬಳಕೆಯ ಅವಕಾಶ ಕೂಡ ಕಲ್ಪಿಸಲಾಗುತ್ತಿದೆ. ಈ ಆಪ್ ಗಳಲ್ಲಿ JioTV, JioCinema, JioNews, JioSecurity ಹಾಗೂ JioCloud ಇತ್ಯಾದಿಗಳು ಶಾಮೀಲಾಗಿವೆ. ಕಳೆದ ವರ್ಷ ಕಂಪನಿ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಆದರೆ, ಇದೀಗ ಮತ್ತೆ ಈ ಯೋಜನೆಯನ್ನು ಲೈವ್ ಮಾಡಲಾಗಿದೆ.


ಇದನ್ನೂ ಓದಿ- Smartphone: 10,000 ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಿ ಉತ್ತಮ ಸ್ಮಾರ್ಟ್‌ಫೋನ್


ಡಬಲ್ ರಿಚಾರ್ಜ್ ಸೌಲಭ್ಯ ನೀಡುತ್ತಿದೆ Jio
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಜಿಯೋ (Reliance Jio) ಒಂದು ವಿಶೇಷ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯ ಅಡಿ, ಒಂದು ರಿಚಾರ್ಜ್ ಮಾಡಿದ ಗ್ರಾಹಕರಿಗೆ ಎರಡನೇ ರಿಚಾರ್ಜ್ (Recharge Plan) ಉಚಿತವಾಗಿ ನೀಡುವುದಾಗಿ ಕಂಪನಿ ಘೋಷಿಸಿತ್ತು. ಕೊರೊನಾ ವೈರಸ್ (Coronavirus) ಕಾರಣ ದೇಶಾದ್ಯಂತ ವಿಧಿಸಲಾಗಿರುವ ಲಾಕ್ ಡೌನ್ (Lockdown)ಅನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ಪ್ಲಾನ್ ಘೋಷಿಸಿತ್ತು. ಬಳಕೆದಾರರಿಗೆ ರಿಚಾರ್ಜ್ ಕಾರಣ ಯಾವುದೇ ಅಡೆತಡೆ ಉಂಟಾಗಬಾರದು ಎಂಬುದು ಕಂಪನಿಯ ಇದರ ಹಿಂದಿನ ಉದ್ದೇಶವಾಗಿತ್ತು.


ಇದನ್ನೂ ಓದಿ- Redmi Note 10 Pro Max: 108MP ಕ್ಯಾಮೆರಾ ಸ್ಮಾರ್ಟ್‌ಫೋನ್ ಅನ್ನು ಅಗ್ಗದ ದರದಲ್ಲಿ ಖರೀದಿಸಲು ಬಂಪರ್ ಅವಕಾಶ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.