ನವದೆಹಲಿ: ಸೋಷಿಯಲ್ ಮೀಡಿಯಾ ಮತ್ತು ಚಾಟಿಂಗ್ ಅಪ್ಲಿಕೇಶನ್‌ಗಳು ನಮ್ಮ ಜೀವನದ ಪ್ರಮುಖ ಭಾಗವಾಗಿವೆ. ನಿರಂತರ ಸಂಪರ್ಕದಲ್ಲಿರಲು ಮತ್ತು ಪರಸ್ಪರ ಮಾತನಾಡಲು ಅನೇಕ ಪ್ಲಾಟ್‌ಫಾರ್ಮ್‌ಗಳಿದ್ದರೂ, ಸಾಮಾನ್ಯವಾಗಿ ಎಲ್ಲರೂ WhatsApp ಬಳಸುತ್ತಾರೆ. ವಾಟ್ಸಾಪ್ ನಮ್ಮ ಜೀವನವನ್ನು ಸುಲಭಗೊಳಿಸಿದೆ, ಅಷ್ಟೇ ಅಪಾಯಕಾರಿಯೂ ಆಗಿದೆ. ಈ ಹಿಂದೆ ವಾಟ್ಸಾಪ್‌ನಲ್ಲಿ ಕಾಣಿಸಿಕೊಂಡಿದ್ದ ಹಗರಣವೊಂದು ಮತ್ತೊಮ್ಮೆ ಸದ್ದು ಮಾಡುತ್ತಿದೆ. ಇದರ ಬಗ್ಗೆ ನೀವು ತಿಳಿದುಕೊಳ್ಳದಿದ್ದರೆ ದೊಡ್ಡ ವಂಚನೆಗೆ ಸಿಲುಕುತ್ತೀರಿ. ಹೀಗಾಗಿ ಈ ಹಗರಣ ಮತ್ತು ವಂಚನೆಗಳಿಂದ ನೀವು ಹೇಗೆ ಸುರಕ್ಷತೆ ಕಾಯ್ದುಕೊಳ್ಳಬೇಕೆಂಬುದನ್ನು ತಿಳಿದುಕೊಳ್ಳಿರಿ.   


COMMERCIAL BREAK
SCROLL TO CONTINUE READING

WhatsAppನಲ್ಲಿ ಬರುವ ಈ ಸಂದೇಶಕ್ಕೆ ಉತ್ತರಿಸಬೇಡಿ!


WhatsAppನಲ್ಲಿ ಜನರಿಗೆ ಅನೇಕ ರೀತಿ ವಂಚಿಸಲಾಗುತ್ತದೆ. ಇದರದಲ್ಲಿ ಬಳಕೆದಾರರಿಗೆ ಆಕರ್ಷಕ ಸಂದೇಶಗಳನ್ನು ಕಳುಹಿಸಲಾಗುತ್ತಿದೆ. +92 306 0373744 ಸಂಖ್ಯೆಯ ಮೂಲಕ ಬಳಕೆದಾರರಿಗೆ ನೀವು ಲಾಟರಿ ಗೆದ್ದಿದ್ದೀರಿ ಎಂಬ ಸಂದೇಶ ಕಳುಹಿಸಲಾಗುತ್ತಿದೆ. ಈ ಸಂದೇಶದೊಂದಿಗೆ ಧ್ವನಿ ಟಿಪ್ಪಣಿಯನ್ನು ಸಹ ಕಳುಹಿಸಲಾಗುತ್ತದೆ. ಈ ಸಂದೇಶಗಳನ್ನು ನೈಜವಾಗಿ ಕಾಣುವಂತೆ ಮಾಡಲು ಸ್ಕ್ಯಾಮರ್‌ಗಳು ಅಮಿತಾಭ್ ಬಚ್ಚನ್ ಅವರ ಚಿತ್ರಗಳನ್ನು ಬಳಸುತ್ತಿದ್ದಾರೆ ಮತ್ತು ಕೌನ್ ಬನೇಗಾ ಕರೋಡ್ಪತಿ ಅಂದರೆ KBC ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: Whatsapp Alert : Whatsapp ಬಳಕೆದಾರರೇ ಎಚ್ಚರ..! ವ್ಯಾಟ್ಸ್ ಆಪ್ ಕರೆ ಮೂಲಕ ಮಾಡಲಾಗುತ್ತದೆ ವಂಚನೆ


ಸಂದೇಶದಲ್ಲಿ ಹೀಗೆ ಬರೆಯಲಾಗಿರುತ್ತದೆ…


ಪ್ರತಿಯೊಬ್ಬರೂ ನಂಬುಂವಂತೆ ಲಾಟರಿ ಸಂದೇಶವನ್ನು ನಿಮಗೆ ಕಳುಹಿಸಲಾಗುತ್ತದೆ. ಈ ಸಂಖ್ಯೆಯಿಂದ ಕಳುಹಿಸಲಾದ ಸಂದೇಶದಲ್ಲಿ ನೀವು 25 ಲಕ್ಷ ರೂ.ಗಳ ಲಾಟರಿ ಗೆದ್ದಿದ್ದೀರಿ ಎಂದು ಬರೆಯಲಾಗಿರುತ್ತದೆ. ಈ ಹಣವನ್ನು ತಕ್ಷಣವೇ ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ಸಹ ಹೇಳಿರುತ್ತಾರೆ. ಅಷ್ಟೇ ಅಲ್ಲ ನೀವು ಕರೆ ಮಾಡಬೇಕಾದ ಸಂದೇಶದಲ್ಲಿ ‘07666533352’ ಸಂಖ್ಯೆಯನ್ನು ನೀಡಲಾಗಿರುತ್ತದೆ. ಸಂದೇಶದ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಗೆ ಲಾಟರಿ ಹಣವನ್ನು ಹೇಗೆ ವರ್ಗಾಯಿಸಬಹುದು ಎಂಬುದನ್ನು ವಿವರಿಸುವ ಆಡಿಯೊ ಟಿಪ್ಪಣಿಯನ್ನು ಸಹ ನೀಡಲಾಗಿರುತ್ತದೆ.


ಇದು ಅಪಾಯಕಾರಿ ಹಗರಣವಾಗಿದ್ದು, ಈ ಬಗ್ಗೆ ನೀವು ತುಂಬಾ ಎಚ್ಚರಿಕೆ ವಹಿಸಬೇಕು. ಈ ಸಂದೇಶಗಳಿಗೆ ಪ್ರತ್ಯುತ್ತರ ನೀಡಿದರೆ ನೀವು ವಂಚಕರ ಜಾಲದಲ್ಲಿ ಸಿಲುಕುವ ಅಪಾಯವಿರುತ್ತದೆ. ಏಕೆಂದರೆ ನೀವು ನೀಡುವ ಮಾಹಿತಿಯ ಮೂಲಕ ಸ್ಕ್ಯಾಮರ್‌ಗಳು ನಿಮ್ಮ ಖಾತೆಯ ವಿವರಗಳನ್ನು ಕದಿಯುತ್ತಾರೆ. ಮುಂದೆ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ಲಪಟಾಯಿಸುತ್ತಾರೆ. 


ಇದನ್ನೂ ಓದಿ: 16 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್ ಮಾಡಿದ WhatsApp!


ಈ ಹಗರಣಗಳನ್ನು ಗುರುತಿಸುವುದು ಹೇಗೆ?


ಇಂತಹ ಹಗರಣಗಳನ್ನು ಹೇಗೆ ಗುರುತಿಸಬಹುದು ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಇಲ್ಲಿ ನಾವು ನಿಮಗೆ ಮೂರು ಪ್ರಮುಖ ವಿಷಯಗಳ ಬಗ್ಗೆ ಹೇಳಿದ್ದೇವೆ. ಇದರಿಂದ ನೀವು ಸುಲಭವಾಗಿ ಹಗರಣವನ್ನು ಗುರುತಿಸಬಹುದು. ಮೊದಲನೆಯದಾಗಿ ನೀವು ಅಪರಿಚಿತ ಸಂಖ್ಯೆಯಿಂದ ಸ್ವೀಕರಿಸುವ ಸಂದೇಶಕ್ಕೆ ಪ್ರತಿಕ್ರಿಯಿಸಬೇಡಿ. ಈ ಸಂಖ್ಯೆಯನ್ನು ಪರಿಶೀಲಿಸುವುದು ಬಹಳ ಮುಖ್ಯ. ಇದಲ್ಲದೆ ಎಲ್ಲೋ ಹಣ ಗೆದ್ದಿದ್ದೀರಿ ಅಥವಾ ಹಣ ಸಿಗುತ್ತದೆ ಎಂದು ಬರೆದಿರುವ ಸಂದೇಶ ಬಂದರೆ ಇದು ವಂಚಕರು ವ್ಯವಸ್ಥಿತ ಸಂಚು ಎಂಬುದನ್ನುಅರ್ಥಮಾಡಿಕೊಳ್ಳಿ. ಸಂದೇಶದ ಭಾಷೆಯಿಂದಲೂ ನೀವು ಈ ಸಂದೇಶವು ನಿಜವೋ ಅಥವಾ ನಕಲಿಯೋ ಎಂದು ಊಹಿಸಬಹುದು.


ವಂಚನೆ ತಪ್ಪಿಸುವ ಮಾರ್ಗಗಳು


ನೀವು ಅಪರಿಚಿತ ಸಂಖ್ಯೆಯಿಂದ ಸಂದೇಶವನ್ನು ಸ್ವೀಕರಿಸಿದ್ದರೆ ಅಥವಾ ನಿಮ್ಮನ್ನು ಬಲೆಗೆ ಬೀಳಿಸಲು ಈ ಸಂದೇಶ ಕಳುಹಿಸಲಾಗಿದೆ ಎಂದು ನೀವು ಭಾವಿಸಿದರೆ, ಮೊದಲು ಆ ಸಂಖ್ಯೆಯನ್ನು ಬ್ಲಾಕ್ ಮಾಡಿ. ನೀವು ವಿದೇಶಿ ನಂಬರ್‍ನಿಂದ ಸಂದೇಶ ಸ್ವೀಕರಿಸಿದ್ದರೆ ಅದರ ಬಗ್ಗೆ ವಿಶೇಷ ಗಮನ ಕೊಡಿ ಮತ್ತು ಯಾವುದೇ ಕಾರಣಕ್ಕೂ ಉತ್ತರಿಸಬೇಡಿ. ಯಾವುದೇ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಮತ್ತು ನಿಮ್ಮ ಫೋನ್‌ನಲ್ಲಿ ಸ್ವೀಕರಿಸಿದ OTP ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಇಂತಹ ಸಂದೇಶಗಳು ನಿಮಗೆ ಬಂದರೆ ಅದನ್ನು ಬೇರೆಯವರಿಗೆ ಫಾರ್ವರ್ಡ್ ಮಾಡಬೇಡಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.