UPI Refund Scam: ದೇಶದಲ್ಲಿ ದಿನದಿಂದ ದಿನಕ್ಕೆ ಯುಪಿಐ (UPI) ಎಂಬುದು ಆನ್ ಲೈನ್ ಪಾವತಿಯ ಅತಿದೊಡ್ಡ ಸಾಧನವಾಗಿದೆ. 8 ವರ್ಷಗಳ ಹಿಂದೆ ಆರಂಭವಾದ ಯುಪಿಐ (UPI) ಅಂದರೆ ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ ತನ್ನ ವಹಿವಾಟನ್ನು ವರ್ಷದಿಂದ ವರ್ಷಕ್ಕೆ ವ್ಯಾಪಕವಾಗಿ ವಿಸ್ತರಿಸಿಕೊಳ್ಳುತ್ತಲೇ ಬಂದಿದೆ. ಜೊತೆಗೆ ಇದೇ ಯುಪಿಐ ಮರುಪಾವತಿ ಹೆಸರಿನಲ್ಲಿ ಆಗುತ್ತಿರುವ ವಂಚನೆಯ ಪ್ರಮಾಣವು ಜಾಸ್ತಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುಪಿಐ ಬಳಕೆದಾರರು ಅತ್ಯಂತ ಜಾಗೃತರಾಗಿರಬೇಕಾಗಿದೆ.


COMMERCIAL BREAK
SCROLL TO CONTINUE READING

ತಂತ್ರಜ್ಞಾನ ಬೆಳೆಯುತ್ತಿದ್ದಂತೆ ತಂತ್ರಜ್ಞಾನವನ್ನೇ ಬಳಸಿ ವಂಚಿಸುವ ಜನರೂ ಹೆಚ್ಚಾಗುತ್ತಿದ್ದಾರೆ. ದುಡಿಯದೆ ತಿನ್ನಲು ಇಚ್ಚಿಸುವವರು ಎಲ್ಲಾ ಕಾಲಕ್ಕೂ ಇದ್ದೇ ಇರುತ್ತಾರೆ. ಈ ಬಗ್ಗೆ ನಾವು-ನೀವೂ ಜಾಗರೂಕರಾಗಿರಬೇಕಷ್ಟೆ. ಈಗ ಜನ ಯುಪಿಐ ಮೂಲಕ ಹೆಚ್ಚೆಚ್ಚು ವಹಿವಾಟು ಮಾಡುವುದರಿಂದ ನಿಮ್ಮ ಯುಪಿಐ ಖಾತೆಯನ್ನೇ ಹ್ಯಾಕ್ ಮಾಡುವ ಹ್ಯಾಕರ್ ಗಳು ಹುಟ್ಟಿಕೊಂಡಿದ್ದಾರೆ. ಅವರು ನಿಮಗೆ ಬಗೆಬಗೆಯಾದ ಆಕರ್ಷಕ ಸಂದೇಶಗಳನ್ನು ಕಳಿಸಿ ಬಲೆಗೆ ಬೀಳಿಸುತ್ತಿದ್ದಾರೆ.


ಯುಪಿಐ ಹ್ಯಾಕರ್ ಗಳು ಸಾಮಾನ್ಯ ಜನರನ್ನೇ ಹೆಚ್ಚು ಟಾರ್ಗೆಟ್ ಮಾಡಿ ಅವರಿಗೆ ಮೆಸೇಜ್ ಗಳನ್ನು ಕಳುಹಿಸುತ್ತಾರೆ. ನೀವು ಸಾಮಾನ್ಯವಾಗಿ ಹ್ಯಾಕರ್ ಗಳಿಂದ ಅಥವಾ ಸ್ಕ್ಯಾಮರ್ ಗಳಿಂದ ಸಂದೇಶ ಅಥವಾ ಕರೆಯನ್ನು ಸ್ವೀಕರಿಸುತ್ತೀರಿ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಸಂಬಂಧಿಗಳಿಗೆ ಅಥವಾ ಸ್ನೇಹಿತರಿಗೆ ಹಣವನ್ನು ವರ್ಗಾಯಿಸುವ ಹೆಸರಿನಲ್ಲಿ ನಿಮಗೆ ಯುಪಿಐ ವಹಿವಾಟನ್ನು ಹೋಲುವ ಸಂದೇಶವನ್ನು ಕಳುಹಿಸಲಾಗುತ್ತದೆ. ನಂತರ ನಿಮಗೆ ತಪ್ಪಾಗಿ ಹೆಚ್ಚು ಹಣವನ್ನು ಕಳುಹಿಸಲಾಗಿದೆ ಎಂದು ತಿಳಿಸಲಾಗುತ್ತದೆ. ಅಲ್ಲದೆ ಹೆಚ್ಚುವರಿ ಮೊತ್ತವನ್ನು ನೀವು ವಾಪಸ್ ಕಳುಹಿಸಿ ಎಂದು ಕೇಳಿಕೊಳ್ಳಲಾಗುತ್ತದೆ. ನೀವು ಹಣವನ್ನು ಹಿಂತಿರುಗಿಸುತ್ತೀರಿ. ಇಷ್ಟು ವ್ಯವಹಾರ ನಡೆಯುವ ಮಧ್ಯೆ ಅವರು ನಿಮ್ಮ ಯುಪಿಐ ಅನ್ನು ಹ್ಯಾಕ್ ಮಾಡಿರುತ್ತಾರೆ. ಈ ರೀತಿ ವಂಚನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. 


ಇದನ್ನೂ ಓದಿ- ಮೊಬೈಲ್ ಡೇಟಾ ವೇಗವಾಗಿ ಖಾಲಿಯಾಗುತ್ತಿದ್ಯಾ? ಚಿಂತೆ ಬಿಟ್ಟು ಈ ಸೆಟ್ಟಿಂಗ್ಸ್‌ ಆನ್‌ ಮಾಡಿ.. ಎಷ್ಟೇ ಉಪಯೋಗ ಮಾಡಿದ್ರು ಡೇಟಾ ಮುಗಿಯಲ್ಲ


ಒಂದೊಮ್ಮೆ ನೀವು ಈ ರೀತಿಯ ಸಂದೇಶ ಅಥಾವ ಫೋನ್ ಕರೆಗಳಿಗೆ ಸ್ಪಂದಿಸಬೇಡಿ. ಇದು ನೀವು ಮೊದಲು ಮಾಡಬೇಕಾದ ಕೆಲಸ. ನೀವು ಸ್ವಲ್ಪ ಎಚ್ಚರದಿಂದ ಇದ್ದರೂ ಈ ಸಂದೇಶ ಅಥವಾ ಫೋನ್ ಕರೆ ಯಾರದು ಎಂಬುದನ್ನು ಪತ್ತೆ ಮಾಡಬಹುದು. ನಿಮಗೆ ಸ್ವಲ್ಪವೇ ಅನುಮಾನ ಬಂದರೆ ಕರೆ ಅಥವಾ ಮೆಸೇಜ್ ಗೆ ಸ್ಪಂದಿಸಬೇಡಿ. 


ಈ ರೀತಿ ಸಂದೇಶ ಅಥವಾ ಫೋನ್ ಕರೆ ಮೂಲಕ ನಿಮ್ಮ ಯುಪಿಐ ಅನ್ನು ಹ್ಯಾಕ್ ಮಾಡುವ ಹ್ಯಾಕರ್ ಗಳು ಅಥವಾ ಸ್ಕ್ಯಾಮರ್ ಗಳನ್ನು ಪತ್ತೆ ಹಚ್ಚಲು ಈಗ ಗೃಹ ಇಲಾಖೆಯು Chakshu ಪೋರ್ಟಲ್ ಅನ್ನು ತೆರೆದಿದೆ.  ಇಷ್ಟು ಮಾತ್ರವಲ್ಲ, ಸೈಬರ್ ಅಪರಾಧಗಳನ್ನು ತಡೆಗಟ್ಟಬೇಕು ಎಂದು ರಾಷ್ಟ್ರವ್ಯಾಪ್ತಿ ಸಹಾಯವಾಣಿಯನ್ನೂ ಆರಂಭಿಸಿದೆ. ನೀವು ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ.


ಇದನ್ನೂ ಓದಿ- ಕೈಗೆಟುಕುವ ಬೆಲೆಯಲ್ಲಿ 84 ದಿನಗಳ ಪ್ಲಾನ್ ಪರಿಚಯಿಸಿದ ಜಿಯೋ, ಡಿಸ್ನಿ+ ಹಾಟ್‌ಸ್ಟಾರ್ ಕೂಡ ಉಚಿತ!


ನಾವು ದುಡಿದ ಹಣವನ್ನು ಜೋಪಾನವಾಗಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಮ್ಮ ಯುಪಿಐ (UPI) ಹ್ಯಾಕ್ ಆಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ಬೇರೆಯವರೂ ಮೋಸ ಹೋಗುವುದನ್ನು ತಡೆಯುವುದು ಕೂಡ ನಮ್ಮ ಕರ್ತವ್ಯವಾಗಬೇಕು. ಈ ಹಿನ್ನೆಲೆಯಲ್ಲಿ ನಿಮಗೆ ಆಗುವ ಸಮಸ್ಯೆಗಳ ಬಗ್ಗೆ ಅಥವಾ ನಿಮಗೆ ಅನುಮಾನ ಬಂದರೆ ಕೂಡಲೇ ನೀವು  Chakshu ಪೋರ್ಟಲ್ ನಲ್ಲಿ ದೂರು ದಾಖಲಿಸಬೇಕು. ಇದಕ್ಕಾಗಿ ಸಹಾಯವಾಣಿಯನ್ನೂ ಬಳಸಿಕೊಳ್ಳಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.