ಬೆಂಗಳೂರು: ವಾಟ್ಸ್ ಆಪ್ ತನ್ನ ಹೊಸ ಮತ್ತು ಇದುವರೆಗಿನ ಅತಿ ದೊಡ್ಡ ವೈಶಿಷ್ಟ್ಯದ ಪರೀಕ್ಷೆಯನ್ನು ಆರಂಭಿಸಿದ್ದು,  ಇದು ಬಳಕೆದಾರರಿಗೆ ತಮ್ಮ iOS ಮತ್ತು Android ಸ್ಮಾರ್ಟ್‌ಫೋನ್‌ಗಳಲ್ಲಿ WhatsApp ಗೆ ಇಮೇಲ್ ವಿಳಾಸಗಳನ್ನು ಸೇರಿಸಲು ಅನುವು ಮಾಡಿಕೊಡಲಿದೆ. ಕಂಪನಿಯು ಕೆಲವು ಸಮಯದಿಂದ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಲಾಗ್-ಇನ್ ಮಾಡಲು ಪರ್ಯಾಯ ವಿಧಾನವನ್ನು ಸೇರಿಸುವುದರ ಮೇಲೆ ಕೆಲಸ ಮಾಡುತ್ತಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಇದಲ್ಲದೆ, WhatsApp ತನ್ನ ಚಾನೆಲ್‌ಗಳ ವೈಶಿಷ್ಟ್ಯದಲ್ಲಿ ಸಮೀಕ್ಷೆಗಳನ್ನು ಹಂಚಿಕೊಳ್ಳುವ ಸಾಮರ್ಥ್ಯದ ಬಗ್ಗೆಯೂ ಕಾರ್ಯನಿರ್ವಹಿಸುತ್ತಿದೆ. ಈ ವೈಶಿಷ್ಟ್ಯವನ್ನು ಟ್ರ್ಯಾಕ್ ಮಾಡುವ ಟ್ರ್ಯಾಕರ್ ವಾಟ್ಸಾಪ್ ಚಾನೆಲ್‌ಗಳಲ್ಲಿ ಮತದಾನ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದೆ. (Technology News In Kannada)


COMMERCIAL BREAK
SCROLL TO CONTINUE READING

ಪ್ರಸ್ತುತ, ವಾಟ್ಸ್ ಆಪ್ ಬಳಕೆದಾರರು ಅಪ್ಲಿಕೇಶನ್ ಅನ್ನು ಬಳಸಲು ತಮ್ಮ ಫೋನ್ ಸಂಖ್ಯೆಯೊಂದಿಗೆ ಲಾಗ್ ಇನ್ ಮಾಡಬೇಕು. ಬಳಿಕ ಬಳಕೆದಾರರಿಗೆ ಓಟಿಪಿ ಬರುತ್ತದೆ ಮತ್ತು ಖಾತೆಯು ಸಕ್ರಿಯಗೊಳ್ಳುತ್ತದೆ. ಹೊಸ ವಿಧಾನದಿಂದ, ಬಳಕೆದಾರರು ತಮ್ಮ ಖಾತೆಗಳನ್ನು ಇ-ಮೇಲ್ ಮೂಲಕ ಪರಿಶೀಲಿಸುವ ಸೌಲಭ್ಯವನ್ನು ಇದೀಗ ನೀಡಲಾಗುತ್ತಿದೆ. ಈ ವೈಶಿಷ್ಟ್ಯವನ್ನು WABetaInfo ಗುರುತಿಸಿದೆ. ಐಓಎಸ್ ಮತ್ತು ಅಂಡ್ರಾಯಿಡ್ ನ ಕೆಲವು ಬೀಟಾ ಆವೃತ್ತಿಗಳಿಗೆ ಈ ವೈಶಿಷ್ಟ್ಯವನ್ನು ಪರೀಕ್ಷಿಸಲಾಗುತ್ತಿದೆ ಎನ್ನಲಾಗಿದೆ.


ಅಷ್ಟೇ ಅಲ್ಲ ಬಳಕೆದಾರರ ಇ-ಮೇಲ್ ಐಡಿ ಇತರ ಬಳಕೆದಾರರಿಗೆ ಗೋಚರಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ವರದಿಯ ಪ್ರಕಾರ, ಬಳಕೆದಾರರು ಪ್ರಯಾಣಿಸುವಾಗ ಮತ್ತು ಮತ್ತು ಅಂತರರಾಷ್ಟ್ರೀಯ ರೋಮಿಂಗ್ ಸೌಲಭ್ಯ ಹೊಂದಿರದ ಸಂದರ್ಭಗಳಲ್ಲಿ ಈ ವೈಶಿಷ್ಟ್ಯವು ಉಪಯುಕ್ತವಾಗಲಿದೆ.


ಇದನ್ನೂ ಓದಿ-ತನ್ನ ಈ 2 ರೀಚಾರ್ಜ್ ಯೋಜನೆಗಳಲ್ಲಿ 3 ಜಿಬಿ ಹೆಚ್ಚುವರಿ ಡೇಟಾ ನೀಡುವುದಾಗಿ ಘೋಷಿಸಿದ ಟೆಲಿಕಾಂ ಕಂಪನಿ!
 
ವರದಿಯ ಪ್ರಕಾರ, ನಿಮ್ಮ ಇ-ಮೇಲ್ ಐಡಿಯನ್ನು ನಿಮ್ಮ ವಾಟ್ಸ್ ಆಪ್ ಖಾತೆಗೆ ಸೇರಿಸಲು ನೀವು ಬಯಸಿದರೆ, ನಂತರ ವಾಟ್ಸ್ ಆಪ್  ಸೆಟ್ಟಿಂಗ್‌ಗಳಿಗೆ ಹೋಗಿ. ಖಾತೆಯ ಮೇಲೆ ಟ್ಯಾಪ್ ಮಾಡಿ. ಇಮೇಲ್ ವಿಳಾಸದ ಆಯ್ಕೆ ನಿಮಗೆ ಗೋಚರಿಸಲಿದೆ. ನಿಮ್ಮ ಇಮೇಲ್ ಐಡಿಯನ್ನು ನೀವು ಒದಗಿಸಬಹುದು. ಅದರ ಒಂದು ನಮೂನೆ ಈ ಕೆಳಗೆ ನೀಡಲಾಗಿದೆ. 


ಇದನ್ನೂ ಓದಿ-ಇನ್ಮುಂದೆ ಒಂದೇ ವಾಟ್ಸ್ ಆಪ್ ಖಾತೆಯಲ್ಲಿ ನೀವು ಎರಡು ಪ್ರೊಫೈಲ್ ರಚಿಸಬಹುದು! ಇಲ್ಲಿದೆ ವಿವರ...


WABetaInfo ಈ ಹೊಸ ವೈಶಿಷ್ಟ್ಯವನ್ನು ಸಹ ಟ್ರ್ಯಾಕ್ ಮಾಡಿದೆ, ಇದು ವಾಟ್ಸ್ ಆಪ್ ಚಾನೆಲ್‌ ವೈಶಿಷ್ಟ್ಯಕ್ಕೆ ಸಂಬಂಧಿಸಿದೆ. ಭವಿಷ್ಯದಲ್ಲಿ ಬೀಟಾ ಆವೃತ್ತಿಯಲ್ಲಿ ತರಬಹುದು ಎಂದು ಹೇಳಲಾಗುತ್ತಿದೆ. ವಾಟ್ಸಾಪ್ ಚಾನೆಲ್‌ಗಳಲ್ಲಿ ಸಮೀಕ್ಷೆಗಳನ್ನು ಹಂಚಿಕೊಳ್ಳುವ ಸಾಮರ್ಥ್ಯದ ಕುರಿತು ಕಂಪನಿಯು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ, ವಾಟ್ಸಾಪ್ ಚಾನೆಲ್‌ಗಳಲ್ಲಿ ಫೋಟೋಗಳು ಮತ್ತು ಪಠ್ಯವನ್ನು ಮಾತ್ರ ಹಂಚಿಕೊಳ್ಳಬಹುದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ