ಬೈಕ್ ಅಥವಾ ಸ್ಕೂಟರ್ ? ನಗರದಲ್ಲಿ ನಿತ್ಯ ಸಂಚಾರಕ್ಕೆ ಯಾವುದು ಬೆಸ್ಟ್ ?
What Should You Buy-Bike Or Scooter: ನಗರದಲ್ಲಿ ಬಳಸಲು ದ್ವಿಚಕ್ರ ವಾಹನವನ್ನು ಖರೀದಿಸುವುದಾದರೆ ಬೈಕ್ ಅಥವಾ ಸ್ಕೂಟರ್ ನಲ್ಲಿ ಯಾವುದು ಉತ್ತಮ ಎನ್ನುವ ಉತ್ತರ ಇಲ್ಲಿದೆ.
What Should You Buy-Bike Or Scooter : ದ್ವಿಚಕ್ರ ವಾಹನವನ್ನು ಖರೀದಿಸುವ ಬಗ್ಗೆ ಯೋಚನೆ ಬಂದಾಗ ಬೈಕ್ ಖರೀದಿಸುವುದೋ ಅಥವಾ ಸ್ಕೂಟರ್ ಖರೀದಿ ಒಳ್ಳೆಯದೋ ಎನ್ನುವ ಪ್ರಶ್ನೆ ಎದುರಾಗದೆ ಇರದು. ಈ ಪ್ರಶ್ನೆ ಆಗಾಗ ಬಹಳಷ್ಟು ದ್ವಿಚಕ್ರ ವಾಹನ ಸವಾರರ ಮನದಲ್ಲಿ ಮೂಡುತ್ತದೆ.ಎರಡೂ ವಾಹನಗಳು ತಮ್ಮದೇ ಆದ ಲಾಭ ನಷ್ಟಗಳನ್ನು ಹೊಂದಿವೆ. ಆದ್ದರಿಂದ, ಎರಡು ವಾಹನಗಳಲ್ಲಿ ಯಾವುದನ್ನಾದರೂ ಆಯ್ಕೆಮಾಡುವ ಮೊದಲು, ನಿಮ್ಮ ಅಗತ್ಯತೆಗಳೇನು ಎಂಬುದನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಅಗತ್ಯಗಳನ್ನು ನೀವು ಅರ್ಥಮಾಡಿಕೊಂಡಾಗ ಮಾತ್ರ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ. ನಗರದಲ್ಲಿ ಬಳಸಲು ದ್ವಿಚಕ್ರ ವಾಹನವನ್ನು ಖರೀದಿಸುವುದಾದರೆ ಬೈಕ್ ಅಥವಾ ಸ್ಕೂಟರ್ ನಲ್ಲಿ ಯಾವುದು ಉತ್ತಮ ಎನ್ನುವ ಉತ್ತರ ಇಲ್ಲಿದೆ.
ನಗರ ಬಳಕೆಗಾಗಿ ಬೈಕ್ ಅಥವಾ ಸ್ಕೂಟರ್ ಯಾವುದನ್ನು ಖರೀದಿಸಬೇಕು ? :
ನಗರ ಬಳಕೆಗೆ ಬೈಕ್ ಮತ್ತು ಸ್ಕೂಟರ್ ಎರಡೂ ಉತ್ತಮ ಆಯ್ಕೆಗಳಾಗಿವೆ. ಆದರೆ ನೀವು ಯಾವುದನ್ನು ಖರೀದಿಸಬೇಕು ಎನ್ನುವುದು ನಿಮ್ಮ ಅಗತ್ಯ ಮತ್ತು ಬಜೆಟ್ ಅನ್ನು ಅವಲಂಬಿಸಿರುತ್ತದೆ. ನಿಮಗೆ ಆರಾಮದಾಯಕ ದ್ವಿಚಕ್ರ ವಾಹನ ಬೇಕಾದರೆ ಬೈಕ್‌ಗಳಿಗಿಂತ ಸ್ಕೂಟರ್‌ಗಳು ಹೆಚ್ಚು ಆರಾಮದಾಯಕ. ಸ್ಕೂಟರ್‌ನಲ್ಲಿ ಹೆಚ್ಚಿನ ಸ್ಥಳಾವಕಾಶವಿರುತ್ತದೆ. ಇದು ಸರಕುಗಳನ್ನು ಸಾಗಿಸಲು ಸುಲಭವಾಗಿಸುತ್ತದೆ.
ಇದನ್ನೂ ಓದಿ : ನಿಮ್ಮ ಫೋನ್ ಎಲ್ಲಾ ಮಾತುಗಳನ್ನು ಆಲಿಸುತ್ತದೆ, ಸಂಗ್ರಹಿಸುತ್ತದೆ ಮತ್ತು ಇವರಿಗೆ ಕೊಡುತ್ತದೆ ಎಚ್ಚರ!
ಇದರೊಂದಿಗೆ ಸ್ಕೂಟರ್‌ನ ಆಸನವು ಬೈಕ್‌ಗಿಂತ ಅಗಲವಾಗಿರುತ್ತದೆ. ಇದರಿಂದ ಕುಳಿತುಕೊಳ್ಳಲು ಸುಲಭವಾಗುತ್ತದೆ. ಅದೇ ಸಮಯದಲ್ಲಿ, ನಿಮ್ಮ ದ್ವಿಚಕ್ರ ವಾಹನದಿಂದ ಹೆಚ್ಚಿನ ಮೈಲೇಜ್ ಪಡೆಯಲು ಬಯಸುವುದಾದರೆ ಸ್ಕೂಟರ್ ಬದಲಿಗೆ ಬೈಕು ಅನ್ನು ಪರಿಗಣಿಸಬಹುದು. ಏಕೆಂದರೆ ಬೈಕುಗಳು ಸಾಮಾನ್ಯವಾಗಿ ಸ್ಕೂಟರ್‌ಗಳಿಗಿಂತ ಹೆಚ್ಚು ಮೈಲೇಜ್ ನೀಡುತ್ತವೆ. ಇದು ನಿಮ್ಮ ಪ್ರಯಾಣ ವೆಚ್ಚವನ್ನು ಉಳಿಸುತ್ತದೆ. ಆದರೆ, ನೆನಪಿಡಿ ಇದು ಕಡಿಮೆ ಆರಾಮದಾಯಕವಾಗಿರುತ್ತದೆ.
ಮನೆಯ ಮಹಿಳೆಯರು ಸಹ ನಿಮ್ಮ ದ್ವಿಚಕ್ರ ವಾಹನವನ್ನು ಬಳಸುತ್ತಿದ್ದರೆ, ಅಥವಾ ನೀವು ಖರೀದಿಸಬೇಕೆಂದಿರುವುದೇ ಮಹಿಳೆಗೆ ಎಂದಾದರೆ ಸ್ಕೂಟರ್ ನಿಮಗೆ ಉತ್ತಮ ಆಯ್ಕೆಯಾಗಿರುತ್ತದೆ. ಇದು ಕಾರ್ಯನಿರ್ವಹಿಸಲು ಸುಲಭವಾಗಿದೆ. ಪುರುಷರು ಮತ್ತು ಮಹಿಳೆಯರು ಇಬ್ಬರೂ ಇದನ್ನು ಆರಾಮವಾಗಿ ಓಡಿಸಬಹುದು. ಆದರೆ ಬೈಕ್ ಮತ್ತು ಸ್ಕೂಟರ್ ವಿನ್ಯಾಸದಲ್ಲಿ ವ್ಯತ್ಯಾಸವಿರುವುದರಿಂದ ಮಹಿಳೆಯರಿಗೆ ಬೈಕ್ ಓಡಿಸುವುದು ಸ್ವಲ್ಪ ಕಷ್ಟ. ನೀವು ಯಾವುದನ್ನು ಖರೀದಿಸಲು ಬಯಸುತ್ತೀರಿ ಎನ್ನುವುದನ್ನು ನಿಮ್ಮ ಆದ್ಯತೆ ಮೇರೆಗೆ ನಿರ್ಧಾರ ಮಾಡಿ.
ಇದನ್ನೂ ಓದಿ : ಜನವರಿ 1, 2024 ರಿಂದ ಮೊಬೈಲ್ ಸಿಮ್ ಗೆ ಸಂಬಂಧಿಸಿದ ಈ ನಿಯಮ ಬದಲಾಯಿಸಿದೆ ಸರ್ಕಾರ, ಇಂದೇ ತಿಳಿದುಕೊಳ್ಳಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ