ನವದೆಹಲಿ: Aliens News - ಅನ್ಯಗ್ರಹ ಜೀವಿಗಳ ಕುರಿತು ವಿಶ್ವಾದ್ಯಂತ ಹಲವು ಹಕ್ಕುಗಳು ಮಂಡನೆಯಾಗುತ್ತಿವೆ. ಏಲಿಯನ್ಸ್ ಅಸ್ತಿತ್ವದಲ್ಲಿದೆಯೇ? ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ವಿಜ್ಞಾನಿಗಳು ದಶಕಗಳಿಂದ ಪ್ರಯತ್ನಿಸುತ್ತಿದ್ದಾರೆ. ಇನ್ನೊಂದೆಡೆ, ಮಹಿಳೆಯೊಬ್ಬಳು ನೀಡಿರುವ ಹೇಳಿಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅನೇಕ ಬಾರಿ ತಾನು ಏಲಿಯನ್ ಗಳನ್ನು ಭೇಟಿಯಾಗಿರುವುದಾಗಿ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ ಈ ಅನ್ಯಗ್ರಹ ಜೀವಿಗಳು ಆಕೆಗೆ ವೈಯಕ್ತಿಕ ಚಿತ್ರಗಳನ್ನು ಕಳುಹಿಸುತ್ತವೆ ಎಂದು ಕೂಡ ಆಕೆ ಹೇಳಿದ್ದಾಳೆ.

COMMERCIAL BREAK
SCROLL TO CONTINUE READING

ಲಾಕ್‌ಡೌನ್‌ನಲ್ಲಿ ಮೊದಲ ಬಾರಿಗೆ ಏಲಿಯನ್ ಗಳನ್ನು ಭೇಟಿಯಾಗಿರುವುದಾಗಿ ಹೇಳುವ ಲಿಲಿ (Women Met Aliens)
'ದಿ ಮಿರರ್' ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಅಮೆರಿಕದ (US) ಮಿಸ್ಸೌರಿ (Misouri) ರಾಜ್ಯದಲ್ಲಿ ವಾಸಿಸುತ್ತಿರುವ 29 ವರ್ಷದ ಮಹಿಳೆ ಲಿಲಿ ನೋವಾ (Lily Nova)), ತಾನು ಒಂದಲ್ಲ ಎರಡಲ್ಲ, ಹಲವು ಬಾರಿ ಏಲಿಯನ್ ಗಳನ್ನು ಭೇಟಿಯಾಗಿರುವುದಾಗಿ ಹೇಳಿಕೊಳ್ಳುತ್ತಾಳೆ. ಹಾಲಿವುಡ್ ಚಿತ್ರ 'ಅವತಾರ್' ನಲ್ಲಿ ಕಾಣಿಸಿಕೊಂಡಿರುವ ಜೀವಿಗಳಂತೆ ಏಲಿಯನ್ ಗಳು ಕಾಣುತ್ತವೆ ಎಂದು  ಲಿಲಿ ಹೇಳುತ್ತಾಳೆ. 2020 ರಲ್ಲಿ ಕರೋನಾದಿಂದಾಗಿ (Coronavirus) ವಿಶ್ವಾದ್ಯಂತ ಲಾಕ್‌ಡೌನ್ (Lockdown) ಘೋಷಣೆಯಾದ ಸಮಯದಲ್ಲಿ ಮೊದಲು ಬಾರಿಗೆ  ಆಕೆ ಅನ್ಯಗ್ರಹ ಜೀವಿಯನ್ನು ಭೇಟಿಯಾಗಿರುವುದಾಗಿ ಆಕೆ ಹೇಳುತ್ತಾಳೆ  


ಇದನ್ನೂ ಓದಿ-Lost City: ಈಜಿಪ್ಟ್ ನಲ್ಲಿ 3000 ವರ್ಷಗಳಷ್ಟು ಹಳೆ ನಗರ ಪತ್ತೆ


ಲಾಕ್‌ಡೌನ್‌ನಲ್ಲಿ ಮೊದಲ ಬಾರಿಗೆ ತಾನು ಏಲಿಯನ್ ಗಳನ್ನು (Aliens) ಭೇಟಿಯಾಗಿರುವುದಾಗಿ ಮಹಿಳೆ ಹೇಳುತ್ತಾಳೆ. ರಾತ್ರಿಯ ಹೊತ್ತು ವಾಯುವಿಹಾರಕ್ಕಾಗಿ ಒಮ್ಮೆ ಮನೆಯಿಂದ ಹೊರಗೆ ಹೋಗಿದ್ದೆ. ತೆರೆದ ಆಗಸದ ಕೆಳಗೆ ವಾಕ್ ಮಾಡುವಾಗ ಅವಳ ನೆರೆಹೊರೆಯಲ್ಲಿ ಪ್ರಕಾಶಮಾನವಾದ ಬೆಳಕನ್ನು ನೋಡಿದೆ ಎಂದು ಮಹಿಳೆ ಹೇಳುತ್ತಾರೆ. ಮೊದಲಿಗೆ ಅದು ವಿಮಾನ ಎಂದು ಅವಳು ಭಾವಿಸಿದ್ದಳಂತೆ, ಆದರೆ ನಂತರ ಎಚ್ಚರಿಕೆಯಿಂದ ಗಮನಿಸಿದಾಗ ಆಕೆ ಬೆಚ್ಚಿಬಿದ್ದಿದ್ದಾಳೆ. ಅದು UFO ಆಗಿತ್ತು ಎಂದು ಮಹಿಳೆ ಹೇಳುತ್ತಾಳೆ. ಏಲಿಯನ್ ಗಳು ಟೆಲಿಪತಿ ಮೂಲಕ  ಆಕೆಗೆ ಭಾವಚಿತ್ರಗಳನ್ನು ಕಳುಹಿಸುತ್ತವೆ ಎಂದು ಮಹಿಳೆ ಹೇಳುತ್ತಾರೆ. ಮೊದಲ ಬಾರಿಗೆ ಏಲಿಯನ್ ಗಳನ್ನು ನೋಡಿದ ಲಿಲಿ ತುಂಬಾ ಹೆಅರಿದ್ದರಂತೆ. ಇದೇ ಕಾರಣದಿಂದ ಏಲಿಯನ್ ಗಳು ಆಕೆಯಲ್ಲಿನ ಭಯ ಹೋಗಲಾಡಿಸಲು ಚಿತ್ರಗಳನ್ನು ಕಳುಹಿಸುತ್ತವೆ ಎಂದು ಆಕೆ ಹೇಳುತ್ತಾಳೆ.


ಇದನ್ನೂ ಓದಿ-Russia-Ukraine War: ಪಾಶ್ಚಾತ್ಯ ರಾಷ್ಟ್ರಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಪುಟಿನ್


'ತಿಳಿ ನೀಲಿ ಚರ್ಮ ಹೊಂದಿರುವ 'ಹುಡುಗಿ'ಯನ್ನು ಸಹ ಭೇಟಿಯಾಗಿದ್ದೇನೆ'
ಲಿಲಿ ಪ್ರಕಾರ, ಈ ಘಟನೆ ನಡೆದ ಕೆಲವು ತಿಂಗಳ ನಂತರ ಅವಳಿಗೆ ಮತ್ತೊಮ್ಮೆ ಏಲಿಯನ್ ಗಳು ಭೇಟಿಯಾಗಿವೆ. ಆದರೆ, ಇಂದು ಅವಳು ಪ್ರತಿ ದಿನ ಏಲಿಯನ್ ಗಳನ್ನು ಭೇಟಿಯಾಗುತ್ತಾಳಂತೆ. ಅಷ್ಟೇ ಅಲ್ಲ ಇತರ ಗ್ರಹಗಳಲ್ಲಿ ವಾಸಿಸುವ ಅನೇಕ ರೀತಿಯ ಜೀವಿಗಳನ್ನು ನಾನು ಭೇಟಿಯಾಗಿದ್ದೇನೆ ಎಂಬ ವಿಸ್ಮಯಕಾರಿ ಸಂಗತಿಯನ್ನು ಕೂಡ ಲಿಲಿ ಬಹಿರಂಗಪಡಿಸಿದ್ದಾಳೆ. ಏಲಿಯನ್ ಗಳಂತೆಯೇ ಆಕೆ ಮೊದಲ ಬಾರಿಗೆ ಮಸುಕಾದ ನೀಲಿ ಚರ್ಮ ಹೊಂದಿರುವ ಹುಡುಗಿಯನ್ನು ನೋಡಿರುವುದಾಗಿ ಲಿಲಿ ಹೇಳುತ್ತಾಳೆ.ಆ ಹುಡುಗಿ ತುಂಬಾ ಸುಂದರವಾಗಿದ್ದಳು. ಆದರೆ, ಅವಳ ತಲೆಯಲ್ಲಿ ಕೂದಲಿರಲಿಲ್ಲ. ನಾನು ಏಲಿಯನ್ ಗಳನ್ನು ಹುಚ್ಚರಂತೆ ಪ್ರೀತಿಸುತ್ತಿದ್ದೇನೆ  ಎಂದು ಆಕೆ ಹೇಳಿಕೊಳ್ಳುತ್ತಾಳೆ.


ಇದನ್ನೂ ಓದಿ-Watch:ಭಾರೀ ಮಳೆಯ ಬೆನ್ನಲ್ಲೇ ವಿಲಕ್ಷಣ 'ಏಲಿಯನ್ ತರಹದ' ಜೀವಿ ಪತ್ತೆ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.