Hop Oxo Electric Motorcycle : ಎಲೆಕ್ಟ್ರಿಕ್ ಟು ವೆಹಿಕಲ್ ಸ್ಟಾರ್ಟಪ್ HOP ಸೆಪ್ಟೆಂಬರ್‌ನಲ್ಲಿ   ತನ್ನ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹಾಪ್ ಆಕ್ಸೊ ಮತ್ತು ಆಕ್ಸೊ ಎಕ್ಸ್   ಎಂಬ ಎರಡು  ವೆರಿಯೇಂಟ್ ಗಳಲ್ಲಿ ಕಂಪನಿ ಬೈಕ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಈ ಬೈಕ್ ವಿತರಣೆ ಆರಂಭವಾಗಿದ್ದು, ಕೇವಲ 999 ರೂಪಾಯಿ ಪಾವತಿಸಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ಬುಕ್ ಮಾಡಬಹುದು. ಈ ಬೈಕ್ ನ ಇನ್ನೊಂದು ವಿಶೇಷವೆಂದರೆ 100 ರೂಪಾಯಿಗೆ 400ಕಿಮೀ ಪ್ರಯಾಣಿಸಬಹುದು. 


COMMERCIAL BREAK
SCROLL TO CONTINUE READING

ಸಿಂಗಲ್ ಚಾರ್ಜ್ ನಲ್ಲಿ 150 ಕಿ.ಮೀ. ರೇಂಜ್ :
ಬ್ಯಾಟರಿ ಪ್ಯಾಕ್ ಅನ್ನು ಅವಲಂಬಿಸಿ ಈ ಎಲೆಕ್ಟ್ರಿಕ್ ಮೋಟಾರ್‌ ಸೈಕಲ್‌ಗಳು ಬೇರೆ ಬೇರೆ ರೇಂಜ್ ಅನ್ನು ನೀಡುತ್ತದೆ. ಇದರಲ್ಲಿ 3.75 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನೀಡಲಾಗಿದೆ. Oxo X ಅನ್ನು ಒಂದು ಬಾರಿ ಪೂರ್ತಿ ಚಾರ್ಜ್ ಮಾಡಿದರೆ,  150 ಕಿ.ಮೀ. ರೇಂಜ್ ನೀಡುತ್ತದೆ. ಈ ಬೈಕ್ ನಲ್ಲಿ ಒಂದು ಕಿ.ಮಿ ವರೆಗೆ ಪ್ರಯಾಣಿಸಿದರೆ  25 ಪೈಸೆ ವೆಚ್ಚವಾಗುತ್ತದೆ. ಈ ಪ್ರಕಾರ ಲೆಕ್ಕ ಹಾಕಿದರೆ 100 ರೂಪಾಯಿ ಖರ್ಚು ಮಾಡಿದರೆ 400 ಕಿಮೀ ವರೆಗಿನ ದೂರವನ್ನು ಕ್ರಮಿಸಬಹುದು. 


ಇದನ್ನೂ ಓದಿ : ರಾಯಲ್ ಎನ್‌ಫೀಲ್ಡ್‌ಗೆ ಟಕ್ಕರ್ ನೀಡುತ್ತಿದ್ದ ಹೀರೋದ ಈ ಜನಪ್ರಿಯ ಬೈಕ್ ಮಾರಾಟ ಸ್ಥಗಿತ .!


ನಾಲ್ಕು ಗಂಟೆಯಲ್ಲಿ ಫುಲ್ ಚಾರ್ಜ್ : 
ಇನ್ನು , ಆಕ್ಸೊ ರೂಪಾಂತರದ ಬಗ್ಗೆ ಹೇಳುವುದಾದರೆ ಇದು ಸಿಂಗಲ್ ಚಾರ್ಜ್ ನಲ್ಲಿ 135 ಕಿ.ಮೀವರೆಗಿನ ರೇಂಜ್ ನೀಡುತ್ತದೆ.  ಟರ್ಬೊ ಮೋಡ್‌ನಲ್ಲಿ, Hop Oxo-X 4 ಸೆಕೆಂಡುಗಳಲ್ಲಿ 0-40 kmp ವೇಗವನ್ನು ಹಿಡಿಯುತ್ತದೆ.  ಈ ಬೈಕ್  ಪೋರ್ಟಬಲ್ ಸ್ಮಾರ್ಟ್ ಚಾರ್ಜರ್‌ನೊಂದಿಗೆ ಬರುತ್ತದೆ. ಈ ಚಾರ್ಜರ್ ಮೂಲಕ 16 ಆಂಪಿಯರ್ ಪವರ್ ಸಾಕೆಟ್‌ನಲ್ಲಿ ಚಾರ್ಜ್ ಮಾಡಬಹುದು. ಇದನ್ನು 0 ಯಿಂದ 80% ವರೆಗೆ ಚಾರ್ಜ್ ಮಾಡಲು 4 ಗಂಟೆಗಳಿಗಿಂತ ಕಡಿಮೆ ಸಮಯ  ಸಾಕಾಗುತ್ತದೆ.  


ವೈಶಿಷ್ಟ್ಯಗಳು ಏನಿರಲಿವೆ : 
ಹಾಪ್ ಆಕ್ಸೊ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 4G ಕನೆಕ್ಟಿವಿಟಿ, ಮಲ್ಟಿ-ಮೋಡ್ ರೀಜನರೇಟಿವ್ ಬ್ರೇಕಿಂಗ್, ಆಂಟಿ-ಥೆಫ್ಟ್ ಸಿಸ್ಟಮ್, ಸ್ಪೀಡ್ ಕಂಟ್ರೋಲ್, ಜಿಯೋ-ಫೆನ್ಸಿಂಗ್ ಮತ್ತು ರೈಡ್ ಅಂಕಿಅಂಶಗಳೊಂದಿಗೆ ಬರುತ್ತದೆ. ಇಕೋ, ಪವರ್ ಮತ್ತು ಸ್ಪೋರ್ಟ್ ಎನ್ನುವ ಮೂರು  ರೈಡ್ ಮೋಡ್  ಗಳೊಂದಿಗೆ ಈ ಬೈಕ್ ಬರುತ್ತದೆ. ಬೈಕ್ ಒಟ್ಟು 5 ಬಣ್ಣಗಳಲ್ಲಿ   ಬರುತ್ತದೆ.  ಹಾಪ್ ಆಕ್ಸೊ ಬೆಲೆ ರೂ 1.25 ಲಕ್ಷ ಮತ್ತು ಆಕ್ಸೋ ಎಕ್ಸ್ ರೂಪಾಂತರದ ಬೆಲೆ ರೂ 1.40 ಲಕ್ಷ .


ಇದನ್ನೂ ಓದಿ : Happy New Year 2023: ಹೊಸ ವರ್ಷದಲ್ಲಿ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಲೆಕ್ಟ್ರಿಕ್ ಕಾರುಗಳು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.