ಇಲ್ಲಿ Creta ಬೆಲೆಯಲ್ಲಿ ಮನೆಗೆ ತನ್ನಿ ಟೊಯೊಟಾ ಫಾರ್ಚುನರ್
ಕಡಿಮೆ ಬಜೆಟ್ನಲ್ಲಿ ಅತ್ಯುತ್ತಮ ಕಾರ್ ಖರೀದಿಸುವ ಬಗ್ಗೆ ಯೋಚಿಸುತ್ತಿರುವವರಿಗೆ ಇಲ್ಲಿದೆ ಅತ್ಯುತ್ತಮ ಅವಕಾಶ. ಇಲ್ಲಿ ಕ್ರೆಟಾ ಬೆಲೆಯಲ್ಲಿ ನೀವು ಟೊಯೊಟಾ ಫಾರ್ಚುನರ್ ಕಾರ್ ಅನ್ನು ಖರೀದಿಸಬಹುದಾಗಿದೆ.
ಬೆಂಗಳೂರು: ಪ್ರಸ್ತುತ ದೇಶದಲ್ಲಿ ಎಸ್‌ಯುವಿ ಕಾರುಗಳ ಕ್ರೇಜ್ ಹೆಚ್ಚಾಗಿದೆ. ಅದರಲ್ಲೂ ಟೊಯೊಟಾ ಫಾರ್ಚುನರ್ ಅತ್ಯಂತ ಜನಪ್ರಿಯ ಎಸ್‌ಯುವಿ ಆಗಿದೆ. ವಾಸ್ತವವಾಗಿ, ಟೊಯೊಟಾ ಫಾರ್ಚುನರ್ ಎಸ್‌ಯುವಿ ಕಾರಿನ ಬೆಲೆ 32.5 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಇದರ ಉನ್ನತ ರೂಪಾಂತರದ ಬೆಲೆ ಸುಮಾರು 50 ಲಕ್ಷ ರೂ.ಗಳವರೆಗೆ ಇರಲಿದೆ. ಇದರ ದುಬಾರಿ ಬೆಲೆಯಿಂದಾಗಿ ಎಷ್ಟೇ ಆಸೆ ಇದ್ದರೂ ಕೂಡ ಎಲ್ಲರಿಗೂ ಎಸ್‌ಯುವಿ ಕಾರ್ ಅನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಆದರೆ, ಇಲ್ಲಿ ನೀವು ಕ್ರೆಟಾ ಬೆಲೆಯಲ್ಲಿ ಟೊಯೊಟಾ ಫಾರ್ಚುನರ್ ಕಾರ್ ಅನ್ನು ಖರೀದಿಸಬಹುದಾಗಿದೆ. ಎಲ್ಲಿ ಇಂತಹ ಡೀಲ್ ನೀಡಲಾಗುತ್ತಿದೆ ಎಂದು ತಿಳಿಯೋಣ.
ನಿಸ್ಸಂದೇಹವಾಗಿ ನೀವು ಇಲ್ಲಿ ಕಡಿಮೆ ಬೆಲೆಯಲ್ಲಿ ಟೊಯೊಟಾ ಫಾರ್ಚುನರ್ ಕಾರ್ ಅನ್ನು ಖರೀದಿಸಬಹುದಾಗಿದೆ. ಆದರೆ, ಇವು ಸೆಕೆಂಡ್ ಹ್ಯಾಂಡ್ ಟೊಯೊಟಾ ಫಾರ್ಚುನರ್ ಆಗಿರಲಿವೆ. ನೀವು ಈಗಾಗಲೇ ಬಳಸಿರುವ ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ ಸೆಕೆಂಡ್ ಹ್ಯಾಂಡ್ ಟೊಯೊಟಾ ಫಾರ್ಚುನರ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಕಾರ್ ದೇಖೋ ವೆಬ್‌ಸೈಟ್‌ನಲ್ಲಿ ಸುಮಾರು 12 ಲಕ್ಷ ರೂ. ಗಳಲ್ಲಿ ಟೊಯೊಟಾ ಫಾರ್ಚುನರ್ ಅನ್ನು ಖರೀದಿಸಬಹುದಾಗಿದೆ.
ಇದನ್ನೂ ಓದಿ- ಫ್ಲಿಪ್‌ಕಾರ್ಟ್‌ನಲ್ಲಿ ಫ್ರೀ ಶಾಪಿಂಗ್: ಎಸಿ, ಫ್ರಿಜ್ ಅನ್ನು ಕೇವಲ 1 ರೂ.ಗೆ ಮನೆಗೆ ತನ್ನಿ
ಕಾರ್ ದೇಖೋ ವೆಬ್‌ಸೈಟ್‌ನಲ್ಲಿ 2014 Toyota Fortuner 4x4 MT ಅನ್ನು 12.40 ಲಕ್ಷ ರೂ.ಗಳಲ್ಲಿ ಪಟ್ಟಿ ಮಾಡಲಾಗಿದೆ. ಈ ಡೀಸೆಲ್ ಎಂಜಿನ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಕಾರ್ ಇದುವರೆಗೂ 1,59,166 ಕಿ.ಮೀ ಕ್ರಮಿಸಿದ್ದು, ಕಾರು ಎರಡನೇ ಓನರ್ ಮಾಲೀಕತ್ವದಲ್ಲಿದೆ. ಈ ಕಾರ್ ಗಾಜಿಯಾಬಾದ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಹೇಳಲಾಗಿದೆ.
ಈ ವೆಬ್‌ಸೈಟ್‌ನಲ್ಲಿರುವ ಇನ್ನೊಂದು ಕಾರ್ ಎಂದರೆ 2014 ಟೊಯೋಟಾ ಫಾರ್ಚುನರ್ 4x2 ಮ್ಯಾನುಯಲ್. ಇದುವರೆಗೂ 1,27,429 ಕಿಮೀ ಕ್ರಮಿಸಿರುವ ಈ ಕಾರಿನ ಬೆಲೆ 12.62 ಲಕ್ಷ ರೂ. ಆಗಿದೆ. ಈ ಕಾರ್ ಮೊದಲ ಮಾಲೀಕರಿಂದ ಮಾರಾಟಕ್ಕೆ ಲಭ್ಯವಿರಲಿದೆ. ಇದೂ ಸಹ ಗಾಜಿಯಾಬಾದ್‌ನಲ್ಲೂ ಮಾರಾಟಕ್ಕೆ ಲಭ್ಯವಿದೆ.
ಇದನ್ನೂ ಓದಿ- ನಿಮ್ಮ ಕನಸಿನ Maruti Brezza SUV ಅನ್ನು ಕೇವಲ 3 ಲಕ್ಷಕ್ಕೆ ಮನೆಗೆ ತನ್ನಿ
ಈ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿರುವ ಮತ್ತೊಂದು ಕಾರ್ ಎಂದರೆ, 2015 ಟೊಯೋಟಾ ಫಾರ್ಚುನರ್ 4x2 ಮ್ಯಾನುವಲ್. ಇದುವರೆಗೂ 96,004 ಕಿಮೀ ಕ್ರಮಿಸಿರುವ ಈ ಕಾರಿಗೆ 13 ಲಕ್ಷ ರೂ. ಎಂದು ಹೇಳಲಾಗುತ್ತಿದೆ. ಎರಡನೇ ಮಾಲೀಕರ ಒಡೆತನದಲ್ಲಿರುವ ಈ ಕಾರ್ ಗಾಜಿಯಾಬಾದ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.