ಬೆಂಗಳೂರು : ದೆಹಲಿ ಮತ್ತು ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ದೂರವಾಣಿ ಕಂಪನಿಯಾದ MTNL ತನ್ನ ಗ್ರಾಹಕರಿಗೆ 4G ಸೇವೆಯನ್ನು ಒದಗಿಸಲು ಮತ್ತೊಂದು ಸರ್ಕಾರಿ ಕಂಪನಿ BSNL ಜೊತೆಗೆ ಒಪ್ಪಂದ ಮಾಡಿಕೊಂಡಿದೆ.ಈ ಒಪ್ಪಂದದ ಅಡಿಯಲ್ಲಿ,MTNL ಮುಂದಿನ 10 ವರ್ಷಗಳವರೆಗೆ ತನ್ನ ನೆಟ್‌ವರ್ಕ್ ಅನ್ನು ಸುಧಾರಿಸಿ ಗ್ರಾಹಕರಿಗೆ ಉತ್ತಮ 4G ಸೇವೆಯನ್ನು ಒದಗಿಸುತ್ತದೆ. MTNL ಮತ್ತು BSNL ಎರಡೂ ಈ ಹಿಂದೆ 4G ಮಾರುಕಟ್ಟೆಯನ್ನು ಪ್ರವೇಶಿಸುವುದನ್ನು ವಿಳಂಬಗೊಳಿಸಿದ್ದವು.ಇದಾದ ನಂತರ ಇದೀಗ ಎರಡೂ ಕಂಪನಿಗಳು 4ಜಿ ಸೇವೆ ಆರಂಭಿಸಲು ನಿರ್ಧರಿಸಿವೆ. 


COMMERCIAL BREAK
SCROLL TO CONTINUE READING

ದೆಹಲಿ ಮತ್ತು ಮುಂಬೈನ ಜನರಿಗೆ ಪ್ರಯೋಜನ :
MTNL ಮತ್ತು BSNL ನಡುವೆ ನಡೆದ ಒಪ್ಪಂದವು 10 ವರ್ಷಗಳ ಅವಧಿಯದ್ದಾಗಿದೆ.  ಎರಡೂ ಕಂಪನಿಗಳು ಕನಿಷ್ಠ 6 ತಿಂಗಳ ಸೂಚನೆ ನೀಡುವ ಮೂಲಕ ಈ ಒಪ್ಪಂದವನ್ನು ಮುಕ್ತಾಯಗೊಳಿಸಬಹುದು.ಇದರಿಂದ ದೇಶದ ರಾಜಧಾನಿ ಮತ್ತು ದೊಡ್ಡ ವಾಣಿಜ್ಯ ನಗರಿಯ ಅನೇಕ ಜನರಿಗೆ ಅನುಕೂಲವಾಗಲಿದೆ.


ಇದನ್ನೂ ಓದಿ : ಇನ್ಮುಂದೆ ಫೇಕ್ ಕಾಲ್ ಮಾಡುವವರ ನಂಬರ್ ಸೇರುತ್ತೆ ಬ್ಲಾಕ್ ಲಿಸ್ಟ್: ಸೆಪ್ಟೆಂಬರ್ 01 ಜಾರಿಯಾಗಲಿದೆ ಹೊಸ ನಿಯಮ


56% ಪಾಲನ್ನು ಹೊಂದಿರುವ ಸರ್ಕಾರ : 
MTNLನಲ್ಲಿ ಸರ್ಕಾರ 56% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.ಅದಕ್ಕಾಗಿಯೇ ಕಂಪನಿಯು ತನ್ನ ಎರಡನೇ ಕಂಪನಿ ಮಿಲೇನಿಯಮ್ ಟೆಲಿಕಾಂ ಲಿಮಿಟೆಡ್ (MTL) ಅನ್ನು ಮುಚ್ಚಲು ನಿರ್ಧರಿಸಿದೆ.ದೆಹಲಿ ಮತ್ತು ಮುಂಬೈನಲ್ಲಿ ಮೊಬೈಲ್, ಬ್ರಾಡ್‌ಬ್ಯಾಂಡ್ ಮತ್ತು ಲ್ಯಾಂಡ್‌ಲೈನ್ ಸೇವೆಗಳನ್ನು ಒದಗಿಸುವ MTNL, ಸರ್ಕಾರದಿಂದ 80,000 ಕೋಟಿ ರೂ.ಗಿಂತ ಅಧಿಕ ಹಣ ಪಡೆಯುತ್ತದೆ.ಇದು ಕಂಪನಿಯ ಸ್ಥಿತಿಯನ್ನು ಉತ್ತಮಗೊಳಿಸಾಲು ಸಹಾಯ ಮಾಡುತ್ತದೆ.ಈ ಹಣವನ್ನು ದೂರವಾಣಿ ಸೇವೆಗಳನ್ನು ಸುಧಾರಿಸಲು ಮತ್ತು ಇಂಟರ್ನೆಟ್ ಸೌಲಭ್ಯಗಳನ್ನು ಹೆಚ್ಚಿಸಲು ಬಳಸಲಾಗುತ್ತದೆ.


ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಗ್ರಾಹಕರಿಗಾಗಿ ಹೊಸ ಸೇವೆಯನ್ನು ಪ್ರಾರಂಭಿಸಿದೆ.ಈ ಸರ್ಕಾರಿ ಕಂಪನಿಯು ಹೊಸ 4G ಮತ್ತು 5G ಓವರ್-ದಿ-ಏರ್ (OTA) ಮತ್ತು ಯೂನಿವರ್ಸಲ್ SIM (USIM) ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ.ಈ ಹೊಸ ಕೆಲಸವು ಕಂಪನಿಯ ಸೇವೆ ಮತ್ತು ನೆಟ್‌ವರ್ಕ್ ಅನ್ನು ಸುಧಾರಿಸುತ್ತದೆ.


ಇದನ್ನೂ ಓದಿ : ಪೆಟ್ರೋಲ್ ಅಥವಾ ಡೀಸೆಲ್? ವಿಮಾನ ಹಾರಾಟಕ್ಕೆ ಉಪಯೋಗಿಸುವ ಇಂಧನ ಯಾವುದು? 1 ಲೀಟರ್ ಬೆಲೆ ಎಷ್ಟೆಂದು ತಿಳಿದರೆ ಹುಬ್ಬೇರೋದು ಗ್ಯಾರಂಟಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ