5G ಯುಗಕ್ಕೆ ಕಾಲಿಟ್ಟ BSNL :ಈ ನಗರದಲ್ಲಿಯೇ ಮೊದಲ ಪ್ರಯೋಗ !ಉಳಿದ ನೆಟ್ ವರ್ಕ್ ಕಂಪನಿಗಳ ಎದೆಯಲ್ಲಿ ನಡುಕ
BSNL 5G Service : ಸದ್ಯಕ್ಕೆ ದೇಶದಲ್ಲಿ ಏರ ಟೆಲ್ ಮತ್ತು ಜಿಯೋ ೫ ಜಿ ಸೇವೆಯನ್ನು ಒದಗಿಸುತ್ತಿದೆ. ಆದ್ರೆ ಇದೀಗ ಜಿಯೋ ಕೂಡಾ ಈ ಸಾಲಿಗೆ ಸೇರಿದ್ದು, ೫ಜಿ ಸೇವೆಯ ಪ್ರಯೋಗ ನಡೆಸುತ್ತಿದೆ.
BSNL 5G Service : ಭಾರತೀಯ ಟೆಲಿಕಾಂ ಸ್ಟಾರ್ಟ್‌ಅಪ್‌ಗಳು ಮತ್ತು ಕಂಪನಿಗಳು 5th ಜನರೇಶನ್ ಅಂದರೆ 5G ತಂತ್ರಜ್ಞಾನದ ನೇರ ಪ್ರಯೋಗಗಳನ್ನು ನಡೆಸಲು ಸರ್ಕಾರಿ ಟೆಲಿಕಾಂ ಕಂಪನಿ BSNL ಮುಂದಾಗಿದೆ.ಈ ಪ್ರಯೋಗಗಳು ಸುಮಾರು ಒಂದರಿಂದ ಮೂರು ತಿಂಗಳುಗಳಲ್ಲಿ ಪ್ರಾರಂಭವಾಗಬಹುದು.ಇದೀಗ ಬಿಎಸ್ ಎನ್ ಎಲ್ ನ ಈ ಪ್ರಯೋಗ ಉಳಿದ ನೆಟ್ ವರ್ಕ್ ಗಳ ನಿದ್ದೆಗೆಡಿಸಿದೆ.ಪ್ರಸ್ತುತ ಭಾರತದಲ್ಲಿ ಜಿಯೋ ಮತ್ತು ಏರ್‌ಟೆಲ್ ಮಾತ್ರ 5 ಜಿ ಸೇವೆಯನ್ನು ಒದಗಿಸುತ್ತಿವೆ.ಇದೀಗ ಈ ಸಾಲಿಗೆ ಜಿಯೋ ಕೂಡಾ ಸೇರುತ್ತಿದೆ.
ಯಾವ ನಗರಗಳಲ್ಲಿ ಸಿಗುತ್ತಿದೆ 5G ಸೇವೆ :
ಈ ಯೋಜನೆಗಳು ಪ್ರಾಥಮಿಕವಾಗಿ BSNL ಹೊಂದಿರುವ 700 MHz ಬ್ಯಾಂಡ್ ಅನ್ನು ಬಳಸುತ್ತವೆ. ದೆಹಲಿಯ ಕನ್ನಾಟ್ ಪ್ಲೇಸ್,ಬೆಂಗಳೂರಿನ ಸರ್ಕಾರಿ ಕಚೇರಿಗಳು, ದೆಹಲಿಯ ಸಂಚಾರ ಭವನ, ಮತ್ತು JNU ಕ್ಯಾಂಪಸ್‌ನ ಸುತ್ತ ಮುತ್ತ, ದೆಹಲಿಯ IIT ಕ್ಯಾಂಪಸ್‌ಗಳಲ್ಲಿ ೫ಜಿ ಸೇವೆಯನ್ನು ಕಾರ್ಯಗತಗೊಳಿಸಲಾಗುತ್ತದೆ. ಅಲ್ಲದೆ, ಇಂಡಿಯಾ ಹ್ಯಾಬಿಟಾಟ್ ಸೆಂಟರ್ ಅಥವಾ ಗುರ್ಗಾಂವ್‌ನ ಕೆಲವು ಭಾಗಗಳು, ಐಐಟಿ ಹೈದರಾಬಾದ್ ಕ್ಯಾಂಪಸ್ ಮುಂತಾದ ಸ್ಥಳಗಳಲ್ಲಿ ಕೂಡಾ ಇದರ ಪ್ರಯೋಗವನ್ನು ಪ್ರಸ್ತಾಪಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರು ದೇಶದ ನ್ಯಾನೋ ಟೆಕ್ ಹಬ್ ಆಗಿ ರೂಪುಗೊಳ್ಳುವ ಪೂರ್ಣ ವಿಶ್ವಾಸ ನನಗಿದೆ: ಸಿಎಂ ಸಿದ್ದರಾಮಯ್ಯ
ಲೈವ್ 5G ಟ್ರಯಲ್ (Live 5G Trail) :
ಬಿಎಸ್‌ಎನ್‌ಎಲ್ ಸ್ಪೆಕ್ಟ್ರಮ್, ಟವರ್, ಬ್ಯಾಟರಿ/ವಿದ್ಯುತ್ ಪೂರೈಕೆ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸಲು ಸಿದ್ಧವಾಗಿದೆ.ಈಗ 5G ಲೈವ್ ಪ್ರಯೋಗಕ್ಕೆ ಮುಂದಾಗಿದ್ದು, ಇದನ್ನು ಸಾಮಾನ್ಯ ಜನರಿಗೆ ಶಿಘ್ರದಲ್ಲಿಯೇ ತಲುಪಿಸಲಾಗುವುದು ಎಂದು ವಾಯ್ಸ್ ಆಫ್ ಇಂಡಿಯನ್ ಕಮ್ಯುನಿಕೇಷನ್ ಟೆಕ್ನಾಲಜಿ ಎಂಟರ್‌ಪ್ರೈಸಸ್ (VoICE) ಮಹಾನಿರ್ದೇಶಕ ಆರ್.ಕೆ.ಭಟ್ನಾಗರ್ ತಿಳಿಸಿದ್ದಾರೆ.
VoICE ಎಂಬುದು ಭಾರತದ ಅನೇಕ ಟೆಲಿಕಾಂ ಕಂಪನಿಗಳನ್ನು ಒಳಗೊಂಡಿರುವ ಒಂದು ಸಂಸ್ಥೆಯಾಗಿದೆ. ಕೆಲವು ದೊಡ್ಡ ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ತೇಜಾ ನೆಟ್‌ವರ್ಕ್ಸ್, VNL, ಯುನೈಟೆಡ್ ಟೆಲಿಕಾಮ್ಸ್, ಕೋರಲ್ ಟೆಲಿಕಾಂ, ಮತ್ತು HFCL ಮುಂತಾದವು ಇದರ ಅಡಿಯಲ್ಲಿ ಬರುತ್ತವೆ.ಈ ಎಲ್ಲಾ ಕಂಪನಿಗಳು ಒಟ್ಟಾಗಿ ಕೆಲಸ ಮಾಡುತ್ತವೆ.
ಮರೆತೂ ಇದನ್ನೂ ಓದಿ :ಕೂಡ ವಾಟ್ಸಾಪ್ ಗ್ರೂಪ್‌ಗಳಲ್ಲಿ ಈ ಸಂದೇಶಗಳನ್ನು ಕಳುಹಿಸಬೇಡಿ, ನಿರ್ಲಕ್ಷಿಸಿದರೆ ಜೈಲು ಸೇರಬೇಕಾದೀತು ಎಚ್ಚರ!
ಪ್ರಸ್ತಾವನೆಯನ್ನು ಸಲ್ಲಿಸಿರುವ ಕಂಪನಿಗಳು :
ಲೇಖಾ ವೈರ್‌ಲೆಸ್, ಗಲೋರ್ ನೆಟ್‌ವರ್ಕ್ಸ್, ವೆಲ್‌ಮನಿ, ಡಬ್ಲ್ಯು4ಎಸ್ ಲ್ಯಾಬ್ಸ್, ಸುಕ್ತ ಕನ್ಸಲ್ಟಿಂಗ್, ಕೋರಲ್ ಟೆಲಿಕಾಂ, ಅಮಂತ್ಯಾ ಟೆಕ್ನಾಲಜೀಸ್, ವಿವಿಡಿಎನ್, ಭಾರತ್ ಆರ್‌ಎಎನ್ ಕನ್ಸೋರ್ಟಿಯಂ, ಸಿಗ್ನಲ್‌ಟ್ರಾನ್ ಮತ್ತು ರೆಸೋನನ್‌ನಂತಹ ಅನೇಕ ಭಾರತೀಯ ಕಂಪನಿಗಳು ಈ ಪ್ರಯೋಗಗಳನ್ನು ನಡೆಸಲು ಪ್ರಸ್ತಾಪಿಸಿವೆ.ಈ ಕಂಪನಿಗಳು 5G ಅಥವಾ 5G ಫಿಕ್ಸೆಡ್ ವೈರ್‌ಲೆಸ್ ಆಕ್ಸೆಸ್ (FWA), ನೆಟ್‌ವರ್ಕ್ ಸ್ಲೈಸಿಂಗ್ ಟೆಸ್ಟ್, ಪ್ರೈವೇಟ್ ಅಟೋಮ್ಯಾಟಿಕ್ ಬ್ರಾಂಚ್ ಎಕ್ಸ್ಚೇಂಜ್ ಮತ್ತು ಮೊಬೈಲ್‌ನಲ್ಲಿ ಸುಲಭ ಸಂವಹನದಂತಹ ಸೇವೆಗಳ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.