BSNL ಅಂದರೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಬಳಕೆದಾರರಿಗೆ ಹಲವು ರೀತಿಯ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ, ಆದರೆ BSNL ಪ್ಯಾನ್-ಇಂಡಿಯಾ 4G ನೆಟ್‌ವರ್ಕ್ ಅನ್ನು ಹೊಂದಿಲ್ಲ ಎಂಬುದು ಅದರ ಸಮಸ್ಯೆಯಾಗಿದೆ. ಈ ಕಾರಣದಿಂದಾಗಿ, BSNL ನ ವಿಭಿನ್ನ ಯೋಜನೆಗಳನ್ನು ಭಾರತದ ವಿವಿಧ ಪ್ರದೇಶಗಳಲ್ಲಿ ಬೆಂಬಲಿಸಲಾಗುತ್ತದೆ.


COMMERCIAL BREAK
SCROLL TO CONTINUE READING

BSNL ನ ಎಲ್ಲಾ ಸಣ್ಣ ಮತ್ತು ದೀರ್ಘಾವಧಿಯ ಯೋಜನೆಗಳ ವಿಷಯದಲ್ಲಿ ಇದೇ ಪರಿಸ್ಥಿತಿ ಇದೆ. ಆದರೂ ಕೂಡ BSNL ತನ್ನ ಬಳಕೆದಾರರಿಗೆ ದೀರ್ಘಾವಧಿಯ ಯೋಜನೆಯನ್ನು ನೀಡುತ್ತಿದ್ದು, ಇದು ಹೆಚ್ಚಿನ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತದೆ. BSNL ನ ಈ  ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ,


BSNL ರೂ 1999 ಪ್ರಿಪೇಯ್ಡ್ ಯೋಜನೆ
BSNL ನ ಈ ದೀರ್ಘಾವಧಿಯ ಯೋಜನೆಯ ಬೆಲೆ 1999 ರೂ. ಈ ಯೋಜನೆಯ ಒಟ್ಟು ಮಾನ್ಯತೆ 365 ದಿನಗಳು. BSNL ಸಿಮ್ ಅನ್ನು ತಮ್ಮ ಪ್ರಾಥಮಿಕ ಸಂಖ್ಯೆಯಾಗಿ ಬಳಸುವ ಬಳಕೆದಾರರಿಗೆ, ಈ ಯೋಜನೆಯು ಉತ್ತಮ ಆಯ್ಕೆಯಾಗಿದೆ.


BSNL ನ ಈ ರೂ.1999 ರ ಯೋಜನೆಯ ಅಡಿಯಲ್ಲಿ ಬಳಕೆದಾರರು ಅನಿಯಮಿತ ಧ್ವನಿ ಕರೆ, 100 ದೈನಂದಿನ SMS ಮತ್ತು ಒಟ್ಟು 600GB ಇಂಟರ್ನೆಟ್ ಡೇಟಾವನ್ನು ಪೂರ್ಣ ವರ್ಷದ ಅವಧಿಗಾಗಿ ಪಡೆಯುತ್ತಾರೆ.


ಹೌದು, ನೀವು ಕೇಳಿದ್ದು ಸಂಪೂರ್ಣ ನಿಜವಾಗಿದೆ. BSNL ನ ಈ ಯೋಜನೆಯಲ್ಲಿ, ಬಳಕೆದಾರರು ಒಂದು ವರ್ಷಕ್ಕೆ ಒಟ್ಟು 600 GB ಡೇಟಾವನ್ನು ಪಡೆಯುತ್ತಾರೆ. BSNL ಸೇರಿದಂತೆ ಇತರ ಟೆಲಿಕಾಂ ಕಂಪನಿಗಳು ಒಂದು ವರ್ಷದಲ್ಲಿ ಇಷ್ಟು ಡೇಟಾವನ್ನು ನೀಡುತ್ತವೆ, ಆದರೆ ಅವುಗಳಿಗೂ ಮತ್ತು BSNL ನ ಈ ಯೋಜನೆಗೂ ತುಂಬಾ ವ್ಯತ್ಯಾಸವಿದೆ.


ಯಾವುದೇ ಮಿತಿಯಿಲ್ಲದೆ 600GB ಡೇಟಾ ಲಭ್ಯವಿರುತ್ತದೆ
ಇತರ ಕಂಪನಿಗಳ ಡೇಟಾವು ನಿಗದಿತ ದೈನಂದಿನ ಮಿತಿಯೊಂದಿಗೆ ಬರುತ್ತದೆ. ಉದಾಹರಣೆಗೆ, ಪ್ರತಿದಿನ 1.5GB, 2GB, ಅಥವಾ 3GB ಡೇಟಾವನ್ನು ನೀಡಲಾಗುತ್ತದೆ. ಇಂಟರ್ನೆಟ್ ಡೇಟಾ ಬಳಕೆದಾರರು ಈ ನಿಗದಿತ ಮಿತಿಗಿಂತ ಹೆಚ್ಚಿನದನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ದೀರ್ಘಾವಧಿಯ ಯೋಜನೆಯಲ್ಲಿ BSNL ತನ್ನ ಬಳಕೆದಾರರಿಗೆ ಅಂತಹ ಯಾವುದೇ ಮಿತಿಯನ್ನು ನಿಗದಿಪಡಿಸಿಲ್ಲ.


ಇದನ್ನೂ ಓದಿ-Gmail ಬಳಕೆದಾರರು ಈಗ ಇಂಟರ್ನೆಟ್ ಇಲ್ಲದೆ ಇಮೇಲ್ ಕಳುಹಿಸಬಹುದು


BSNL ತನ್ನ ಬಳಕೆದಾರರಿಗೆ ಒಂದು ವರ್ಷದ ಮಾನ್ಯತೆಯೊಂದಿಗೆ ಒಟ್ಟು 600GB ಇಂಟರ್ನೆಟ್ ಡೇಟಾವನ್ನು ನೀಡುತ್ತದೆ. ಹೀಗಿರುವಾಗ ಬಳಕೆದಾರರು ಬಯಸಿದ್ದಲ್ಲಿ, ಅವರು ಒಂದು ದಿನದಲ್ಲಿ ಈ ಸಂಪೂರ್ಣ ಡೇಟಾವನ್ನು ಬಳಸಬಹುದು ಅಥವಾ ತಮ್ಮದೇ ಆದ ರೀತಿಯಲಿ ಒಂದು ವರ್ಷದ ಸಂಪೂರ್ಣ ಬಜೆಟ್ ಅನ್ನು ಮಾಡಿಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ, BSNL ತನ್ನ ಬಳಕೆದಾರರಿಗೆ ಡೇಟಾವನ್ನು ಬಳಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ. ಅವರು ಅಗತ್ಯವಿರುವಾಗ ಮತ್ತು ತಮಗೆ ಬೇಕಾದಷ್ಟು ಡೇಟಾ ಬಳಸಬಹುದು.


ಇದನ್ನೂ ಓದಿ-No Toll Plaza On Highway: ಇನ್ಮುಂದೆ ಒಂದೂ ಟೋಲ್ ಪ್ಲಾಜಾ ಇಲ್ಲದ ಹೆದ್ದಾರಿಯ ಮೇಲೆ ಬಿಂದಾಸ್ ವಾಹನ ಓಡಿಸಿ


BSNL ನ ಈ ಯೋಜನೆಯಲ್ಲಿ, 600GB ಡೇಟಾ ಮುಗಿದ ನಂತರ, ಬಳಕೆದಾರರಿಗೆ 80 Kbps ವೇಗದಲ್ಲಿ ಇಂಟರ್ನೆಟ್ ಡೇಟಾ ಒದಗಿಸಲಾಗುತ್ತದೆ. ಇದಲ್ಲದೆ, ಬಳಕೆದಾರರು ಈ ಯೋಜನೆಯಲ್ಲಿ 30-30 ದಿನಗಳವರೆಗೆ PRBT, Eros Now Entertainment ಮತ್ತು Lokdhun ಕಂಟೆಂಟ್  ಸೌಲಭ್ಯವನ್ನು ಪಡೆಯುತ್ತಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.