ಒಂದಲ್ಲ, ಎರಡಲ್ಲ 100 ರೂ.ಗಿಂತ ಕಡಿಮೆ ಬೆಲೆಯಲ್ಲಿ `ಐದು` ಪ್ರಿಪೇಯ್ಡ್ ಆಫರ್ ಪರಿಚಯಿಸಿದ ಬಿಎಸ್‌ಎನ್‌ಎಲ್
BSNL Prepaid Offer: ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ 100 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ಒಟ್ಟೊಟ್ಟಿಗೆ ಐದು ಪ್ರಿಪೇಯ್ಡ್ ಕೊಡುಗೆಗಳನ್ನು ಪರಿಚಯಿಸಿದೆ. ಆದರಲ್ಲಿ ಎರಡು ರಿಚಾರ್ಜ್ ಆಫರ್ನಲ್ಲಿ 100 ರೂ.ಗಿಂತ ಕಡಿಮೆ ಬೆಲೆಯಲ್ಲಿ ಪ್ರತಿದಿನ 2ಜಿಬಿ ಡೇಟಾ ಸೌಲಭ್ಯ ಲಭ್ಯವಿದೆ.
BSNL Prepaid Offer: ಪ್ರಸ್ತುತ, ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಿರುವ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗಾಗಿ 100 ರೂ.ಗಿಂತ ಕಡಿಮೆ ಬೆಲೆಯಲ್ಲಿ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಅದೂ ಸಹ ಒಂದಲ್ಲ, ಎರಡಲ್ಲ ಒಟ್ಟೊಟ್ಟಿಗೆ 'ಐದು' ಯೋಜನೆಗಳನ್ನು ಬಿಎಸ್‌ಎನ್‌ಎಲ್ ಪರಿಚಯಿಸಿದೆ.
ಬಿಎಸ್‌ಎನ್‌ಎಲ್ ನ 5 ಬೆಸ್ಟ್ ಪ್ರಿಪೇಯ್ಡ್ ಪ್ಲಾನ್‌ಗಳು:-
ಬಿಎಸ್‌ಎನ್‌ಎಲ್ 58 ರೂ. ಪ್ರಿಪೇಯ್ಡ್ ಯೋಜನೆ:
ಈ ಯೋಜನೆಯು ಒಂದು ವಾರದ ಎಂದರೆ ಏಳು ದಿನಗಳ ಮಾನ್ಯತೆಯೋಜ್ಡಿಗೆ ಬರುತ್ತದೆ. ಇದರಲ್ಲಿ 2 ಜಿಬಿ ಡೇಟಾ ಲಭ್ಯವಿದ್ದು, ಡೇಟಾ ಮಿತಿ ಮುಗಿದ ನಂತರ ಇಂಟರ್ನೆಟ್ ವೇಗವು 40kbps ಆಗುತ್ತದೆ.
ಬಿಎಸ್‌ಎನ್‌ಎಲ್ 87 ರೂ. ಯೋಜನೆ:
ಬಿಎಸ್‌ಎನ್‌ಎಲ್ 87 ರೂ. ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಜೊತೆಗೆ ಪ್ರತಿ ದಿನ 1ಜಿಬಿ ಡೇಟಾ ಸಿಗುತ್ತದೆ. ದೈನಂದಿನ ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್ ವೇಗ 40kbps ಗೆ ಇಳಿಕೆಯಾಗುತ್ತದೆ. ಈ ಯೋಜನೆಯ ಮಾನ್ಯತೆ ಕೇವಲ 14 ದಿನಗಳು ಮಾತ್ರ.
ಇದನ್ನೂ ಓದಿ- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲೂ ಈ 15 ಅಪ್ಲಿಕೇಶನ್‌ಗಳಿವೆಯೇ ಕೂಡಲೇ ಡಿಲೀಟ್ ಮಾಡಿ, ಇಲ್ಲ ಅಕೌಂಟ್ ಖಾಲಿಯಾದೀತೂ ಎಚ್ಚರ!
ಬಿಎಸ್‌ಎನ್‌ಎಲ್ 94 ರೂ. ಪ್ರಿಪೇಯ್ಡ್ ಯೋಜನೆ:
30 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯಲ್ಲಿ ಗ್ರಾಹಕರಿಗೆ 200 ನಿಮಿಷಗಳ ಕರೆ ಸೌಲಭ್ಯ ಹಾಗೂ 3ಜಿಬಿ ಡೇಟಾ ಲಭ್ಯವಾಗಲಿದೆ.
ಬಿಎಸ್‌ಎನ್‌ಎಲ್ 97 ರೂ. ಪ್ರಿಪೇಯ್ಡ್ ಯೋಜನೆ:
ಬಿಎಸ್‌ಎನ್‌ಎಲ್ 97ರೂ. ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಕರೆ ಜೊತೆಗೆ ಪ್ರತಿದಿನ 2ಜಿಬಿ ಡೇಟಾ ಪ್ರಯೋಜನವೂ ಲಭ್ಯವಾಗಲಿದೆ. ದೈನಂದಿನ ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್ ವೇಗ 40kbpsಗೆ ಇಳಿಕೆಯಾಗುತ್ತದೆ. ಈ ಯೋಜನೆಯ ಮಾನ್ಯತೆ 15 ದಿನಗಳು.
ಇದನ್ನೂ ಓದಿ- Xiaomiಯ ಅತ್ಯಂತ ಅಗ್ಗದ 5G Smartphone ಬಿಡುಗಡೆ !ವಿನ್ಯಾಸ, ವೈಶಿಷ್ಟ್ಯ ಎಲ್ಲವೂ ಅದ್ಭುತ !
ಬಿಎಸ್‌ಎನ್‌ಎಲ್ 98 ರೂ. ಪ್ರಿಪೇಯ್ಡ್ ಯೋಜನೆ:
ಬಿಎಸ್‌ಎನ್‌ಎಲ್ 98ರೂ. ಯೋಜನೆಯಲ್ಲಿ ಗ್ರಾಹಕರಿಗೆ ಅನ್ಲಿಮಿಟೆಡ್ ಕಾಲ್ ಜೊತೆಗೆ ನಿತ್ಯ 2ಜಿಬಿ ಡೇಟಾ ಲಭ್ಯವಾಗಲಿದೆ. ದೈನಂದಿನ ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್ ವೇಗ 40kbpsಗೆ ಇಳಿಕೆಯಾಗುತ್ತದೆ. ಈ ಯೋಜನೆಯ ಮಾನ್ಯತೆ 18 ದಿನಗಳು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.