ಬೆಂಗಳೂರು: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಹಲವಾರು ಆಕರ್ಷಕ ಪ್ರಿಪೇಯ್ಡ್ ಯೋಜನೆಗಳನ್ನು ಹೊಂದಿದೆ. ಈ ಯೋಜನೆಗಳು ಕಡಿಮೆ ವೆಚ್ಚದಲ್ಲಿ ತನ್ನ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ. ಇದರಲ್ಲಿ 150 ದಿನಗಳ ಮಾನ್ಯತೆ ಹೊಂದಿರುವ ಒಂದು ಯೋಜನೆ ಕೂಡ ಶಾಮಿಲಾಗಿದೆ. ಇದು ಹೊಸ ಯೋಜನೆ ಅಲ್ಲ, ಆದರೆ ಅದನ್ನು ಪರಿಷ್ಕರಿಸಲಾಗಿದೆ. ನೀವು BSNL ಬಳಕೆದಾರರಾಗಿದ್ದರೆ ಮತ್ತು ದೀರ್ಘಾವಧಿಯ ವ್ಯಾಲಿಡಿಟಿ ಹೊಂದಿರುವ ಯೋಜನೆಯನ್ನು ಬಯಸುತ್ತಿದ್ದರೆ, ನೀವು ಈ ಯೋಜನೆಯ ಬಗ್ಗೆ ತಿಳಿದಿರಬೇಕು. ಒಂದು ವೇಳೆ ನೀವು ಸೆಕೆಂಡರಿ ಸಿಮ್ ಅನ್ನು ಬಳಸುತ್ತಿದ್ದು, ಅದರ ಜೊತೆಗೆ ಮಾನ್ಯತೆಯನ್ನು ಕಾಪಾಡಿಕೊಳ್ಳಲು ಬಯಸುತ್ತಿದ್ದಾರೆ.  ನಂತರ ನೀವು ಈ ಯೋಜನೆಯನ್ನು ಬಳಸಬಹುದು. ಈ ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳೇನು ತಿಳಿದುಕೊಳ್ಳೋಣ ಬನ್ನಿ, 


COMMERCIAL BREAK
SCROLL TO CONTINUE READING

BSNL ರೂ 397 ಪ್ರಿಪೇಯ್ಡ್ ಯೋಜನೆ
ಮೇಲೆ ಹೇಳಿದಂತೆ, BSNL ನ 397 ರೂ ಪ್ಲಾನ್ ಹೊಸದಲ್ಲ. ಆದರೆ ಅದರ ಪ್ರಯೋಜನಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಈ ಯೋಜನೆಯನ್ನು ಈಗ ಸ್ವಲ್ಪ ದುಬಾರಿ ಮಾಡಲಾಗಿದೆ. ಈ ಯೋಜನೆಯು 150 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಮೊದಲು ಈ ಯೋಜನೆಯು 180 ದಿನಗಳವರೆಗೆ ಲಭ್ಯವಿತ್ತು. ಇದರಲ್ಲಿ ಗ್ರಾಹಕರು 2GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಗಳನ್ನು 60 ದಿನಗಳವರೆಗೆ ನೀಡಲಾಗುತ್ತಿತ್ತು. ಇದೀಗ  ಈ ಎಲ್ಲಾ ಪ್ರಯೋಜನಗಳನ್ನು ಕೇವಲ 30 ದಿನಗಳವರೆಗೆ ನೀಡಲಾಗುವುದು.


ಇದನ್ನೂ ಓದಿ-ಇನ್ಮುಂದೆ ವಾಟ್ಸ್ ಆಪ್ ಗ್ರೂಪ್ ನಲ್ಲಿ ಹೊಸ ಸದಸ್ಯ ಕೂಡ ಹಳೆ ಚಾಟ್ ಓದಬಹುದು!


ಏನು ಬದಲಾಗಿದೆ?
ಈ ಯೋಜನೆಯು ದೀರ್ಘಾವಧಿಯ ಮಾನ್ಯತೆ ಬಯಸುವವರಿಗೆ ಮಾತ್ರ ರೂಪಿಸಲಾಗಿದೆ. ಈ ಯೋಜನೆಯ ಮಾನ್ಯತೆ 150 ದಿನಗಳು. ಮೊದಲ 30 ದಿನಗಳಲ್ಲಿ ಪ್ರಯೋಜನಗಳು ಕೊನೆಗೊಳ್ಳುತ್ತವೆ. ಅದರ ನಂತರ ಮಾನ್ಯತೆ ಉಳಿಯಲಿದೆ. ಇಂತಹ ಪರಿಸ್ಥಿತಿಯಲ್ಲಿ, ತಮ್ಮ ಸಿಮ್ ಅನ್ನು ಸಕ್ರಿಯವಾಗಿ ಇರಿಸಿಕೊಳ್ಳಲು ಬಯಸುವ ಬಳಕೆದಾರರಿಗಾಗಿ ಈ ಯೋಜನೆಯಾಗಿದೆ. ಈ ದಿನಗಳಲ್ಲಿ ಔಟ್ ಗೋಯಿಂಗ್ ಇರುತ್ತದೆ. ಸೆಕೆಂಡರಿ ಸಿಮ್ ಬಳಕೆದಾರರಿಗೆ ಈ ಯೋಜನೆ ತುಂಬಾ ಒಳ್ಳೆಯ ಯೋಜನೆಯಾಗಿದೆ.


ಇದನ್ನೂ ಓದಿ-ನೀವೂ ಕೂಡ ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಬೇಸತ್ತು ಹೋಗಿರುವಿರಾ? ಈ ಟ್ರಿಕ್ ಟ್ರೈ ಮಾಡಿ!


ನೀವು ಖಾಸಗಿ ಟೆಲಿಕಾಂ ಆಪರೇಟರ್‌ಗಳಿಂದ ಯೋಜನೆಯನ್ನು ಆರಿಸಿದರೆ, ವೆಚ್ಚವು ತುಂಬಾ ಹೆಚ್ಚಾಗಿರುತ್ತದೆ. ಇದೇ ವೇಳೆ, ಅದರ ಬೆಲೆ ತುಂಬಾ ಕಡಿಮೆಯಾಗಿದೆ. ಈ ಪ್ಲಾನ್‌ನಲ್ಲಿರುವ ಒಳ್ಳೆಯ ವಿಶೇಷತೆ ಎಂದರೆ ಧ್ವನಿ ಕರೆ ಮಾಡುವ ಅವಶ್ಯಕತೆಯಿದೆ ಎಂದು ನೀವು ಭಾವಿಸಿದಾಗ, ನೀವು ಅದಕ್ಕೆ ತಕ್ಕಂತೆ ರೀಚಾರ್ಜ್ ಮಾಡಬಹುದು.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್