BSNL Cheapest Offer: ಹಲವು ಅಗ್ಗದ ದರದ ರಿಚಾರ್ಜ್ ಯೋಜನೆಗಳ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳ ನಿದ್ದೆಗೆಡಿಸಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿ‌ಎಸ್‌ಎನ್‌ಎಲ್) ಇದೀಗ ಮೊಬೈಲ್ ಡೇಟಾ ಜೊತೆ ಬ್ರಾಡ್‌ಬ್ಯಾಂಡ್‌ ಸೇವೆಯಲ್ಲೂ ಎದುರಾಳಿಗಳಿಗೆ ಟಕ್ಕರ್ ನೀಡಲು ಮುಂದಾಗಿದೆ. 


COMMERCIAL BREAK
SCROLL TO CONTINUE READING

ಅತ್ಯಂತ ಕಡಿಮೆ ಬೆಲೆಯಲ್ಲಿ  ಮೊಬೈಲ್ ಡೇಟಾ ಜೊತೆ ಬ್ರಾಡ್‌ಬ್ಯಾಂಡ್‌ ಸೇವೆ ಒದಗಿಸುತ್ತಿರುವ ಸರ್ಕಾರಿ ಟೆಲಿಕಾಂ ಕಂಪನಿ ಬಿ‌ಎಸ್‌ಎನ್‌ಎಲ್ ಈ ಪ್ಲಾನ್‌ನಲ್ಲಿ ಬಳಕೆದಾರರಿಗೆ 200Mbps ಸ್ಪೀಡ್‌ನಲ್ಲಿ 5000GB ಡೇಟಾ ಜೊತೆಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಬಿ‌ಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪ್ಲಾನ್‌ನ ಬೆಲೆ ಮತ್ತು ಅದನ್ನು ಪಡೆಯುವ ಸುಲಭ ವಿಧಾನದ ಬಗ್ಗೆ ತಿಳಿಯೋಣ... 


ಬಿ‌ಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪ್ಲಾನ್‌ನ ಬೆಲೆ (BSNL Broadband Plan Price): 
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಪರಿಚಯಿಸುತ್ತಿರುವ ಈ ಬಿ‌ಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಪ್ಲಾನ್‌ನ ಬೆಲೆ 999 ರೂ. ಗಳು (ಪ್ರತಿ ತಿಂಗಳಿಗೆ) ಮಾತ್ರ. ಯಾವುದೇ ಇನ್‌ಸ್ಟಾಲೇಷನ್ ಶುಲ್ಕವಿಲ್ಲದೆ ಗ್ರಾಹಕರು ಈ ಬಿಎಸ್‌ಎನ್‌ಎಲ್ ಭಾರತ್ ಫೈಬರ್ ಇಂಟರ್‌ನೆಟ್  ಅನ್ನು ಅಳವಡಿಸಬಹುದಾಗಿದೆ. 


ಇದನ್ನೂ ಓದಿ- ಏರ್‌ಟೆಲ್ ಧಮಾಕಾ ಪ್ಲಾನ್ಸ್: ಕೇವಲ 7 ರೂ.ಗೆ ಸಿಗುತ್ತೆ 1 GB ಡೇಟಾ


ಬಿ‌ಎಸ್‌ಎನ್‌ಎಲ್  999 ರೂಪಾಯಿ ರೀಚಾರ್ಜ್ ಪ್ಲಾನ್ ಪ್ರಯೋಜನ (BSNL Rs 999 Recharge Plan Benefit): 
ಬಿ‌ಎಸ್‌ಎನ್‌ಎಲ್ ಪರಿಚಯಿಸಿರುವ ಈ  999 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ ಗ್ರಾಹಕರು ತಿಂಗಳು ಪೂರ್ತಿ 200Mbps ಸ್ಪೀಡ್‌ನಲ್ಲಿ ಇಂಟರ್‌ನೆಟ್ ಅನ್ನು ಪಡೆಯಬಹುದು. ತಿಂಗಳಿಗೆ 5000GB ಡೇಟಾ ಸೌಲಭ್ಯ ಲಭ್ಯವಾಗಲಿದ್ದು, ಡೇಟಾ ಪ್ಯಾಕ್ ಖಾಲಿಯಾದ ಬಳಿಕ 10Mbps ಸ್ಪೀಡ್‌ನಲ್ಲಿ ಅನ್‌ಲಿಮಿಟೆಡ್ ಇಂಟರ್‌ನೆಟ್ ಸೇವೆಯನ್ನು ಮುಂದುವರೆಸಬಹುದಾಗಿದೆ. 


ಓಟಿಟಿ ಆಪ್‌ ಗಳಿಗೆ ಫ್ರೀ ಸಬ್‌ಸ್ಕ್ರಿಪ್ಷನ್ (Free subscription to OTT apps): 
ಬಿ‌ಎಸ್‌ಎನ್‌ಎಲ್ ನ ಈ 999 ರೂ. ಬ್ರಾಡ್‌ಬ್ಯಾಂಡ್ ಪ್ಲಾನ್‌ನಲ್ಲಿ ಗ್ರಾಹಕರಿಗೆ Disney Plus Hotstar, Sony LIV, Zee5, YuppTV, Hungama ಸೇರಿಡಾಂಟೆ ಹಲವು ಓಟಿಟಿ ಪ್ಲಾಟ್ಫಾರ್ಮ್ ಗಳಿಗೆ ಉಚಿತ ಚಂದಾದಾರಿಕೆಯೂ ಲಭ್ಯವಾಗಲಿದೆ. 


ಈ ಎಲ್ಲಾ ಪ್ರಯೋಜನಗಳ ಜೊತೆಗೆ ಗ್ರಾಹಕರು ಯಾವ ಬಿ‌ಎಸ್‌ಎನ್‌ಎಲ್ ನಂಬರ್ ನಿಂದ ಈ 999 ರೂ. ರಿಚಾರ್ಜ್ ಪ್ಲಾನ್ ಆಕ್ಟಿವೇಟ್ಮಾಡಿಕೊಳ್ಳುತ್ತಾರೆ ಆ ನಂಬರ್‌ಗೆ ಇಡೀ ದೇಶಾದ್ಯಂತ  ಅನ್‌ಲಿಮಿಟೆಡ್ ಫ್ರೀ ಕಾಲಿಂಗ್ ಸೇವೆಯೂ ಲಭ್ಯವಿರುತ್ತದೆ. 


ಇದನ್ನೂ ಓದಿ- iPhone ಬಳಕೆದಾರರಿಗೆ ಹೈ ಅಲರ್ಟ್​! ಭಾರತದಲ್ಲಿ ಈ ಆವೃತ್ತಿಗಳು ಹ್ಯಾಕ್‌ ಆಗುವ ಸಾಧ್ಯತೆ..! ತಕ್ಷಣವೇ ಈ ಕೆಲಸ ಮಾಡಿ ಎಂದು ಸರ್ಕಾರದಿಂದ ಸೂಚನೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.