ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಪ್ರಿಪೇಯ್ಡ್ ಯೋಜನೆಗಳು ಸಾಕಷ್ಟು ಜನಪ್ರಿಯವಾಗಿವೆ. ಕಂಪನಿಯು ಪ್ರತಿಯೊಬ್ಬ ಗ್ರಾಹಕರಿಗೂ ಅನುಕೂಲವಾಗುವಂತಹ ಕೆಲವು ಕೈಗೆಟಕುವ ಪ್ರಿಪೇಯ್ಡ್ ಪ್ಲಾನ್ಸ್ ಪರಿಚಯಿಸಿದೆ. ನೀವು ಕಡಿಮೆ ಬಜೆಟ್‌ನಲ್ಲಿ ಪ್ರಿಪೇಯ್ಡ್ ಯೋಜನೆಯನ್ನು ಬಯಸಿದರೆ, ಈ ಮೂರು ಬಿಎಸ್ಎನ್ಎಲ್ ಯೋಜನೆಗಳು ನಿಮಗೆ ಅತ್ಯುತ್ತಮ ಆಯ್ಕೆ ಎಂದು ಸಾಬೀತುಪಡಿಸಬಹುದು.


COMMERCIAL BREAK
SCROLL TO CONTINUE READING

ಟೆಲಿಕಾಂ ಜಗತ್ತಿನಲ್ಲಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಟಕ್ಕರ್ ನೀಡಿರುವ ಸರ್ಕಾರಿ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ 100 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ 49, 87 ಮತ್ತು 99 ರೂ. ಗಳ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ...


ಇದನ್ನೂ ಓದಿ- Airtel ಕಂಪನಿಯ ಹೊಚ್ಚ ಹೊಸ 109 ರೂ.ಗಳ ಪ್ಲಾನ್ ಠುಸ್ಸೇನ್ನಿಸಿದ ವೊಡಾಫೋನ್-ಐಡಿಯಾ, 107 ರೂ.ಗಳ ಹೊಸ ಪ್ಲಾನ್ ಬಿಡುಗಡೆ


ಬಿಎಸ್ಎನ್ಎಲ್ 49 ರೂ. ಪ್ರಿಪೇಯ್ಡ್ ಯೋಜನೆ: 
ನೀವು ಕಡಿಮೆ ವೆಚ್ಚದಲ್ಲಿ ಉತ್ತಮ ಮಾನ್ಯತೆ ಮತ್ತು ಧ್ವನಿ ಕರೆ ಸೇವೆಯೊಂದಿಗೆ ಯೋಜನೆಯನ್ನು ತೆಗೆದುಕೊಳ್ಳಲು ಬಯಸಿದರೆ, ಬಿಎಸ್ಎನ್ಎಲ್ನ 49 ರೂ.ಗಳ ಪ್ರಿಪೇಯ್ಡ್ ಯೋಜನೆ ಉತ್ತಮ ಆಯ್ಕೆಯಾಗಿದೆ. ಒಟ್ಟು 20 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯಲ್ಲಿ ಬಳಕೆದಾರಿಗೆ 100 ನಿಮಿಷಗಳ ಧ್ವನಿ ಕರೆ ಮತ್ತು 1ಜಿಬಿ ಡೇಟಾ ಪ್ರಯೋಜನ ಲಭ್ಯವಿದೆ.


ಬಿಎಸ್ಎನ್ಎಲ್ 87ರೂ. ಪ್ರಿಪೇಯ್ಡ್ ಪ್ಲಾನ್:
ಬಿಎಸ್ಎನ್ಎಲ್ನ ಇನ್ನೊಂದು ಅಗ್ಗದ ಪ್ಲಾನ್  87ರೂ.ಗಳ ಪ್ರಿಪೇಯ್ಡ್ ಪ್ಲಾನ್ ಆಗಿದೆ. ಈ ಪ್ರಿಪೇಯ್ಡ್ ಯೋಜನೆಯೊಂದಿಗೆ, ಬಳಕೆದಾರರು 14 ದಿನಗಳವರೆಗೆ ದೇಶದ ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ, 1 ಜಿಬಿ   ದೈನಂದಿನ ಡೇಟಾ ಮತ್ತು ನಿತ್ಯ 100 ಉಚಿತ ಎಸ್ಎಂಎಸ್ ಪ್ರಯೋಜನವನ್ನು ಪಡೆಯುತ್ತಾರೆ. ಬಿಎಸ್ಎನ್ಎಲ್ ಈ ಯೋಜನೆಯೊಂದಿಗೆ ಹಾರ್ಡಿ ಮೊಬೈಲ್ ಗೇಮಿಂಗ್ ಸೇವೆಯನ್ನು ಸಹ ಒದಗಿಸುತ್ತದೆ.


ಇದನ್ನೂ ಓದಿ- ಟೈಪ್ ಮಾಡದೆಯೇ ಯಾರಿಗಾದರೂ Whatsapp ಸಂದೇಶ ಕಳುಹಿಸಲು ಈ ಟಿಪ್ಸ್ ಅನುಸರಿಸಿ


ಬಿಎಸ್ಎನ್ಎಲ್ 99 ರೂ. ಪ್ರಿಪೇಯ್ಡ್ ಪ್ಲಾನ್:
ಮೇಲಿನ ಎರಡು ಯೋಜನೆಗಳಲ್ಲದೆ ಬಿಎಸ್ಎನ್ಎಲ್ 99 ರೂ.ಗಳ ಪ್ರಿಪೇಯ್ಡ್ ಯೋಜನೆಯನ್ನೂ ಸಹ ಪರಿಚಯಿಸಿದೆ. 18 ದಿನಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯಲ್ಲಿ ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆ + PRBT ನೀಡುತ್ತದೆ. ಆದರೆ, ಈ ಯೋಜನೆಯಲ್ಲಿ ಬಳಕೆದಾರರಿಗೆ ಯಾವುದೇ ಉಚಿತ ಎಸ್ಎಂಎಸ್ ಅಥವಾ ಡೇಟಾ ಪ್ರಯೋಜನಗಳು ಲಭ್ಯವಿಲ್ಲ. 


ನೀವು ದೀರ್ಘಾವಧಿಯ ವ್ಯಾಲಿಡಿಟಿ ಹೊಂದಿರುವ ಯೋಜನೆಯನ್ನು ಬಯಸಿದರೆ, ನೀವು ರೂ 105 ರ ಯೋಜನೆಯನ್ನು ತೆಗೆದುಕೊಳ್ಳಬಹುದು. ಈ ಯೋಜನೆಯೊಂದಿಗೆ, ಬಳಕೆದಾರರು ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ ಒಂದು ರಾಷ್ಟ್ರೀಯ ರಿಯಾಯಿತಿ ಡೀಲ್/ಕೂಪನ್ ಉತ್ಪನ್ನದೊಂದಿಗೆ 22 ದಿನಗಳ ಸೇವಾ ಮಾನ್ಯತೆಯನ್ನು ಪಡೆಯುತ್ತಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.