ನವದೆಹಲಿ: ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಹೊಸ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಈ ಬಾರಿ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ವಿಶಿಷ್ಟವಾದ ಯೋಜನೆಯನ್ನು ತಂದಿದೆ.  ಗ್ರಾಹಕರು ಮೊಬೈಲ್ ರೀಚಾರ್ಜ್ ಮಾಡಿದ ನಂತರ ಬ್ಯಾಲೆನ್ಸ್ ಹಣಕ್ಕಾಗಿ ಅಂಗಡಿಯವರಿಂದ ಬಲವಂತವಾಗಿ ಟಾಫಿ ಅಥವಾ  ಚಾಕೊಲೇಟ್ ಅನ್ನು ಬಲವಂತವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಉಳಿದ ಚಿಲ್ಲರ್‌ನಲ್ಲಿ ಕಂಪನಿಯು ಗ್ರಾಹಕರಿಗೆ ಸಂಪೂರ್ಣ ಟಾಕ್ ಟೈಮ್ ಅನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಚಿಲ್ಲರ್ ಬ್ಯಾಲೆನ್ಸ್ ವರ್ಗಾವಣೆ ಪ್ಲಾನ್ ಆರಂಭ:
ಕೆರಾಲೆಟೆಲೆಕಾಮ್ (Keralatelecom) ವರದಿಯ ಪ್ರಕಾರ, ಬಿಎಸ್ಎನ್ಎಲ್ (BSNL) ಹೊಸ ಚಿಲ್ಲರ್ ಬ್ಯಾಲೆನ್ಸ್ ವರ್ಗಾವಣೆ (Chillar Balance Transfer) ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ವಿಶೇಷತೆಯೆಂದರೆ, ಗ್ರಾಹಕರು ತಮ್ಮ ಪ್ಲಾನ್ ರೀಚಾರ್ಜ್ ಮಾಡಿದ ನಂತರ ಉಳಿದಿರುವ ಹಣಕ್ಕಾಗಿ ಅಂಗಡಿಯವರಿಂದ ಬಲವಂತವಾಗಿ ಚಾಕೊಲೇಟ್ ಅಥವಾ ಕ್ಯಾಂಡಿಯನ್ನು ಪಡೆಯಬೇಕಾಗಿಲ್ಲ. ಬದಲಿಗೆ ಉಳಿದಿರುವ ಬಾಕಿ ಹಣದಿಂದ ಟಾಕ್‌ಟೈಮ್ ಅನ್ನು ಸಹ ಖರೀದಿಸಬಹುದು.


ಇದನ್ನೂ ಓದಿ - BSNL ಗ್ರಾಹಕರಿಗೆ 200 ರೂ.ಗಿಂತ ಕಡಿಮೆ ರೀಚಾರ್ಜ್‌ನಲ್ಲಿ ಸಿಗಲಿದೆ ನಿತ್ಯ 2GB Data


ಈ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ?
ಉದಾಹರಣೆಗೆ ಗ್ರಾಹಕನು 56 ರೂಪಾಯಿಗಳನ್ನು ರೀಚಾರ್ಜ್ (Recharge) ಮಾಡುವಾಗ ಅಂಗಡಿಯವರಿಗೆ 60 ರೂಪಾಯಿಗಳನ್ನು ನೀಡುತ್ತಾನೆ ಎಂದು ಭಾವಿಸೋಣ. 56 ರೂಪಾಯಿ ರೀಚಾರ್ಜ್ ಮಾಡಿದ ನಂತರ, ಅಂಗಡಿಯವರು ಗ್ರಾಹಕರಿಗೆ ಚಿಲ್ಲರೆ ಇಲ್ಲ ಎಂದು ಹೇಳುವ ಮೂಲಕ ಉಳಿದ 4 ರೂ.ಗೆ ಬಲವಂತವಾಗಿ ಚಾಕೊಲೇಟ್ ಅಥವಾ ಕ್ಯಾಂಡಿಯನ್ನು ನೀಡುತ್ತಾರೆ. ಆದರೆ ಇದೀಗ ಗ್ರಾಹಕರು ಉಳಿದ ಹಣಕ್ಕೆ ಬಲವಂತವಾಗಿ ಚಾಕೊಲೇಟ್ ಪಡೆಯುವ ಬದಲಿಗೆ ಟಾಕ್‌ಟೈಮ್ ಪಡೆಯಬಹುದಾಗಿದೆ.  ಈ ಯೋಜನೆಯನ್ನು ಕೇರಳ ಟೆಲಿಕಾಂ ಸರ್ಕಲ್‌ನಲ್ಲಿ ಪ್ರಾರಂಭಿಸಲಾಗಿದೆ.


ಇದನ್ನೂ ಓದಿ - BSNL Masterstroke Offer: ಕೇವಲ ರೂ.47 ನೀಡಿ 28 ದಿನಗಳ ಅವಧಿಗೆ ನಿತ್ಯ 1 ಜಿಬಿ ಡೇಟಾ


ಕೇವಲ 1-9 ರೂ.ವರೆಗೆ ಮಾತ್ರ ಸಿಗಲಿದೆ ಟಾಕ್‌ಟೈಮ್ :
ವರದಿಗಳ ಪ್ರಕಾರ ಹೊಸ ಯೋಜನೆಯಲ್ಲಿ ಕೇವಲ 1-9 ರೂಪಾಯಿಗಳವರೆಗೆ ಮಾತ್ರ  ಟಾಕ್‌ಟೈಮ್ ಲಭ್ಯವಾಗಲಿದೆ. ಅಂದರೆ, ಹೊಸ ಯೋಜನೆಯಡಿ ಗ್ರಾಹಕರು ಉಳಿದ ಚಿಲ್ಲರೆ ಹಣಕ್ಕೆ ಮಾತ್ರ ರೀಚಾರ್ಜ್ ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.