ಕೇವಲ 7 ರೂಪಾಯಿಗಳ ದೈನಂದಿನ ವೆಚ್ಚದಲ್ಲಿ ದೀರ್ಘ ವ್ಯಾಲಿಡಿಟಿ ಯೋಜನೆ ನೀಡಿದ ಬಿಎಸ್ಎಲ್ಎನ್
ದೇಶದ ಸರ್ಕಾರಿ ಟೆಲಿಕಾಂ ಸಂಸ್ಥೆ ಮತ್ತೊಮ್ಮೆ ಕಡಿಮೆ ಬೆಲೆಯಲ್ಲಿ ದೀರ್ಘಾವಧಿ ಪ್ಲಾನ್ ಬಿಡುಗಡೆ ಮಾಡುವ ಮೂಲಕ ಖಾಸಗಿ ಟೆಲಿಕಾಂ ಕಂಪನಿಗಳ ನಿದ್ದೆಗೆಡಿಸಿದೆ.
BSNL Cheapest Recharge Plan: ಏರ್‌ಟೆಲ್, ಜಿಯೋ, ವಿಐಗೆ ಟಕ್ಕರ್ ನೀಡಿರುವ ಬಿಎಸ್‌ಎನ್‌ಎಲ್ ಅಗ್ಗ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದ್ದು ದೈನಂದಿನ ಕೇವಲ 7 ರೂಪಾಯಿ ವೆಚ್ಚದಲ್ಲಿ ಬರೋಬ್ಬರಿ 252GB ಡೇಟಾ ಸೌಲಭ್ಯವನ್ನು ಒದಗಿಸುತಿದೆ.
ಕಳೆದೆರಡು ತಿಂಗಳುಗಳಿಂದ ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಳವಾಗಿದೆ. TRAI ನ ಇತ್ತೀಚಿನ ವರದಿಯ ಪ್ರಕಾರ, ಬಿಎಸ್‌ಎನ್‌ಎಲ್ ಗೆ ಆಗಸ್ಟ್‌ನಲ್ಲಿ 3.5 ಲಕ್ಷ ಹೊಸ ಬಳಕೆದಾರರು ಸೇರ್ಪಡೆಗೊಂಡಿದ್ದಾರೆ. ಇನ್ನಷ್ಟು ಬಳಕೆದಾರರನ್ನು ತನ್ನತ್ತ ಆಕರ್ಷಿಸಲು ಯೋಜನೆ ರೂಪಿಸಿರುವ ಬಿಎಸ್‌ಎನ್‌ಎಲ್ ಕಡಿಮೆ ವೆಚ್ಚದಲ್ಲಿ ದೀರ್ಘ ವ್ಯಾಲಿಡಿಟಿ ಯೋಜನೆ ಪರಿಚಯಿಸಿದೆ.
ಇದನ್ನೂ ಓದಿ- ಈ ಆಫರ್ ಮತ್ತೆ ಸಿಗಲ್ಲ: ತಿಂಗಳಿಗೆ ಕೇವಲ 400 ರೂ. ಪಾವತಿಸಿ 5ಜಿ ಫೋನ್ ಖರೀದಿಸಿ
ಬಿಎಸ್‌ಎನ್‌ಎಲ್ 84 ದಿನಗಳ ಅಗ್ಗದ ರಿಚಾರ್ಜ್ ಪ್ಲಾನ್ (BSNL 84 Days Cheap Recharge Plan):
ಬಿಎಸ್‌ಎನ್‌ಎಲ್ ನ 84 ದಿನಗಳ ಅಗ್ಗದ ರಿಚಾರ್ಜ್ ಪ್ಲಾನ್ ನಲ್ಲಿ ದೈನಂದಿನ್ ಕೇವಲ 7 ರೂಪಾಯಿ ಖರ್ಚು ಮಾಡಿದ್ರೆ ಒಟ್ಟು 252 GB ಡೇಟಾ ಸೌಲಭ್ಯ ಸಿಗಲಿದೆ. ಅಷ್ಟೇ ಅಲ್ಲ, ಇದರಲ್ಲಿ ಇನ್ನೂ ಕೆಲವು ಪ್ರಯೋಜನಗಳು ಕೂಡ ಲಭ್ಯವಾಗಲಿವೆ.
ಇದನ್ನೂ ಓದಿ- ಅನಿಯಮಿತ ಕರೆ, ಡೇಟಾ, ಜಿಯೋ ಸಿನಿಮಾ ಸೇರಿದಂತೆ ಇನ್ನೂ ಹೆಚ್ಚಿನ ಲಾಭ ಬೆಲೆ 200 ರೂ.ಗಿಂತಲೂ ಕಡಿಮೆ!
ಬಿಎಸ್‌ಎನ್‌ಎಲ್ 84 ದಿನಗಳ ರಿಚಾರ್ಜ್ ಪ್ಲಾನ್ ಬೆಲೆ (BSNL 84 Days Recharge Plan Price):
ಈ ಬಿಎಸ್‌ಎನ್‌ಎಲ್ 84 ದಿನಗಳ ರಿಚಾರ್ಜ್ ಪ್ಲಾನ್ ಬೆಲೆ 599 ರೂ.ಗಳು ಮಾತ್ರ. ಎಂದರೆ ದಿನಕ್ಕೆ ಕೇವಲ 7 ರೂಪಾಯಿಗಳಷ್ಟೇ. ಈ ಯೋಜನೆಯಲ್ಲಿ ಬಳಕೆದಾರರಿಗೆ ಅನಿಯಮಿತ ಕರೆ, ಉಚಿತ ಡೇಟಾ ಮತ್ತು ಎಸ್‌ಎಮ್‌ಎಸ್ ನಂತಹ ಪ್ರಯೋಜನಗಳು ಲಭ್ಯವಿವೆ. ಈ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 3GB ಅಂದರೆ ಒಟ್ಟು 252GB ಹೈ ಸ್ಪೀಡ್ ಡೇಟಾ ಆನಂದಿಸಬಹುದು. ದೈನಂದಿನ ಡೇಟಾ ಮಿತಿ ಖಾಲಿಯಾದ ಬಳಿಕ 40Kbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಸೇವೆಯೂ ಲಭ್ಯವಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.