BSNL Rs 299 Recharge Plan: ಮುಖೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಜಿಯೋ (Mukesh Ambanis Reliance Jio) ಸೇರಿದಂತೆ, ಭಾರತದ ಪ್ರಸಿದ್ದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಏರ್​ಟೆಲ್ (Airtel)​​, ವೋಡಾಫೋನ್-ಐಡಿಯಾ (Vodafone-Idea) ಕಂಪನಿಗಳು ಕಳೆದ ತಿಂಗಳು ಮೊದಲ ವಾರದಲ್ಲಿ ರಿಚಾರ್ಜ್ ಪ್ಲಾನ್​ಗಳ ಬೆಲೆಗಳನ್ನು ಹೆಚ್ಚಿಸಿವೆ. ಇದರಿಂದ ಮೊದಲೇ ಹಣದುಬ್ಬರದಿಂದಾಗಿ ತತ್ತರಿಸಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 


COMMERCIAL BREAK
SCROLL TO CONTINUE READING

ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ ಬಿಸಿಯಿಂದ ಬೇಸತ್ತಿರುವ ಜನರು ಇದೀಗ ಸರ್ಕಾರಿ ಸ್ವಾಮ್ಯದ ಬಿ‌ಎಸ್‌ಎನ್‌ಎಲ್​ನತ್ತ (BSNL) ಮುಖಮಾಡುತ್ತಿದ್ದು, ಜಿಯೋ, ಏರ್​ಟೆಲ್​​, ವೊಡಾಫೊನ್-ಐಡಿಯಾ ಬಿಟ್ಟು ಬಿ‌ಎಸ್‌ಎನ್‌ಎಲ್​ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹಲವು ವರದಿಗಳು ಬಂದಿವೆ. ಇದರೊಂದಿಗೆ ಬಿ‌ಎಸ್‌ಎನ್‌ಎಲ್​ನ ಒಂದು ರಿಚಾರ್ಜ್ ಪ್ಲಾನ್​ಗೆ ಭಾರೀ ಡಿಮ್ಯಾಂಡ್ ಇದೆ. 


ಇದನ್ನೂ ಓದಿ- ಬಿಎಸ್‌ಎನ್ಎಲ್ ಗ್ರಾಹಕರಿಗೆ ಬಂಪರ್ ಕೊಡುಗೆ: 160 ದಿನಕ್ಕೆ 320GB ಡೇಟಾ ಜೊತೆ ಸಿಗುತ್ತೆ ಇಷ್ಟೆಲ್ಲಾ ಲಾಭ! 


ಹೌದು, ಇತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಬಿ‌ಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ರಿಚಾರ್ಜ್ ಪ್ಲಾನ್​ಗಳನ್ನು (Recharge Plan) ಕೂಡ ಒದಗಿಸುತ್ತಿದೆ.  ಇವುಗಳಲ್ಲಿ ಬಿ‌ಎಸ್​ಎನ್​ಎಲ್​ನ  229 ರೂಪಾಯಿಯ ಪ್ರಿಪೇಯ್ಡ್​ ರೀಚಾರ್ಜ್​ ಪ್ಲಾನ್ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿದೆ. 


ಇದನ್ನೂ ಓದಿ- ನಿಮ್ಮ ಏರಿಯಾದಲ್ಲಿ ಯಾವ ದಿನದಿಂದ ಆರಂಭವಾಗಲಿದೆ BSNL 4G? ಇಲ್ಲಿದೆ ಕಂಪನಿ ನೀಡಿದ ಮಾಹಿತಿ


ಬಿ‌ಎಸ್‌ಎನ್‌ಎಲ್ 229ರೂ. ರಿಚಾರ್ಜ್ ಪ್ಲಾನ್​ನಲ್ಲಿ ಸಿಗುವ ಪ್ರಯೋಜನಗಳು (BSNL Rs.229 Recharge Plan Benefits): 
ಬಿ‌ಎಸ್‌ಎನ್‌ಎಲ್ ನೀಡುತ್ತಿರುವ ಜನಪ್ರಿಯ 229 ರೂಪಾಯಿಯ ಪ್ರಿಪೇಯ್ಡ್​ ರೀಚಾರ್ಜ್ ಪ್ಲಾನ್​ (BSNL Rs.229 Recharge Plan) 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ಬಳಕೆದಾರರು ಪೂರ್ಣ ಒಂದು ತಿಂಗಳವರೆಗೆ ಯಾವುದೇ ನೆಟ್​ವರ್ಕ್​ಗೆ ಉಚಿತ ಕರೆಯನ್ನು ಆನಂದಿಸಬಹುದಾಗಿದೆ. ಇದರೊಂದಿಗೆ ನಿತ್ಯ 2GB ಡೇಟಾ ಎಂದರೆ ತಿಂಗಳವರೆಗೆ ಒಟ್ಟು 60ಜಿಬಿ ಡೇಟಾ ಪ್ರಯೋಜನವೂ ಇದರಲ್ಲಿ ಲಭ್ಯವಿದ್ದು, ಕಾಂಪ್ಲಿಮೆಂಟರಿಯಾಗಿ ನಿತ್ಯ 100 ಉಚಿತ ಎಸ್​ಎಮ್​ಎಸ್​  ಅನ್ನು ಕೂಡ ಆನಂದಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.