ನವದೆಹಲಿ: BSNL Prepaid Plans - ಸರ್ಕಾರಿ ಟೆಲಿಕಾಂ ಕಂಪನಿ BSNL, ತನ್ನ ಪ್ರಿಪೇಯ್ಡ್ ಯೋಜನೆಗಳು ಮತ್ತು ಕೊಡುಗೆಗಳ ಮೂಲಕ ಖಾಸಗಿ ಕಂಪನಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. BSNL ತನ್ನ ವಾರ್ಷಿಕ ರೂ. 2399 ಯೋಜನೆಯಲ್ಲಿ  90 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತಿದೆ. ಕಂಪನಿಯು ಕಳೆದ ತಿಂಗಳು ಈ ಕೊಡುಗೆಯನ್ನು ಘೋಷಿಸಿತ್ತು ಮತ್ತು ಇದು ಜನವರಿ 15 ರಂದು ಕೊನೆಗೊಳ್ಳಬೇಕಿತ್ತು. ಆದರೆ ಈ ಬಳಕೆದಾರರ ಬೇಡಿಕೆ ಹಿನ್ನೆಲೆ ಈ ಯೋಜನೆ ಇನ್ನು ಕೊನೆಗೊಂಡಿಲ್ಲ. ರೂ 2399 ರ ಯೋಜನೆಯಲ್ಲಿ, ಕಂಪನಿಯು 365 ದಿನಗಳ ಮಾನ್ಯತೆಯನ್ನು ನೀಡುತ್ತದೆ, ಆದರೆ ಈ ಕೊಡುಗೆಯೊಂದಿಗೆ, ಯೋಜನೆಯ ಮಾನ್ಯತೆಯು 455 ದಿನಗಳವರೆಗೆ ಹೆಚ್ಚಾಗುತ್ತದೆ.


COMMERCIAL BREAK
SCROLL TO CONTINUE READING

ಇದೇ ರೀತಿ,  BSNL ತನ್ನ ಮೂರು ತಿಂಗಳ ವ್ಯಾಲಿಡಿಟಿ ಯೋಜನೆಯಲ್ಲಿ ಇತರ ಕಂಪನಿಗಳಿಗೆ ಹೋಲಿಸಿದರೆ ಉತ್ತಮ ಪ್ರಯೋಜನಗಳನ್ನು ನೀಡುತ್ತಿದೆ. ಜಿಯೋಗೆ ಹೋಲಿಸಿದರೆ, ಜಿಯೋ ತನ್ನ ಬಳಕೆದಾರರಿಗೆ 666 ಬೆಲೆಗೆ 84 ದಿನಗಳ ಮಾನ್ಯತೆಯೊಂದಿಗೆ ಯೋಜನೆಯನ್ನು ನೀಡುತ್ತದೆ, ಇದರಲ್ಲಿ ಪ್ರತಿದಿನ 1.5 GB ಡೇಟಾ ಲಭ್ಯವಿದೆ. ಇನ್ನೊಂದೆಡೆ BSNL ನ ತ್ರೈಮಾಸಿಕ ಯೋಜನೆಯಲ್ಲಿ  485 ರೂ.ಗಳಲ್ಲಿ ನೀವು 90 ದಿನಗಳ ಮಾನ್ಯತೆ ಮತ್ತು ದೈನಂದಿನ 1.5 GB ಡೇಟಾವನ್ನು ಪಡೆಯಬಹುದು. 


ಜಿಯೋದ ರೂ 2999 ಯೋಜನೆಯಲ್ಲಿ 365 ದಿನಗಳ ಮಾನ್ಯತೆ
ಜಿಯೋದ ಈ ಯೋಜನೆಯಲ್ಲಿ, ನೀವು ಒಂದು ವರ್ಷದ ಮಾನ್ಯತೆಯನ್ನು ಪಡೆಯುತ್ತೀರಿ. ಇಂಟರ್ನೆಟ್ ಬಳಸಲು, ಕಂಪನಿಯು ಈ ಯೋಜನೆಯಲ್ಲಿ ಪ್ರತಿದಿನ 2.5 GB ಡೇಟಾವನ್ನು ನೀಡುತ್ತದೆ. ಅನಿಯಮಿತ ಧ್ವನಿ ಕರೆಯೊಂದಿಗೆ ಬರುವ ಈ ಯೋಜನೆಯಲ್ಲಿ, ನೀವು ಪ್ರತಿದಿನ 100 ಉಚಿತ SMS ನ ಪ್ರಯೋಜನವನ್ನು ಸಹ ಪಡೆಯುತ್ತೀರಿ. ಇದೇ ವೇಳೆ BSNL ನ ರೂ 2399 ಯೋಜನೆಯಲ್ಲಿ, ನೀವು ಪ್ರತಿದಿನ 3 GB ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳಂತಹ ಪ್ರಯೋಜನಗಳನ್ನು ಪಡೆಯುತ್ತೀರಿ.


ಇದನ್ನೂ ಓದಿ-Flipkart Sale: ಫ್ಲಿಪ್‌ಕಾರ್ಟ್‌ನಲ್ಲಿ OPPO 5G ಸ್ಮಾರ್ಟ್‌ಫೋನ್ ಅನ್ನು ಕೇವಲ 300 ರೂ.ಗೆ ಖರೀದಿಸಲು ಸುವರ್ಣಾವಕಾಶ


ಏರ್‌ಟೆಲ್ ರೂ 2999 ಯೋಜನೆ (Airtel Prepaid Plans)
365 ದಿನಗಳವರೆಗೆ ನಡೆಯುವ ಈ ಯೋಜನೆಯಲ್ಲಿ, ನೀವು ಪ್ರತಿದಿನ 2 GB ಡೇಟಾವನ್ನು ಪಡೆಯುತ್ತೀರಿ. ಯೋಜನೆಯಲ್ಲಿ, ಕಂಪನಿಯು ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 ಉಚಿತ SMS ಅನ್ನು ನೀಡುತ್ತಿದೆ. ಏರ್‌ಟೆಲ್‌ನ ಈ ಪ್ಲಾನ್‌ನ ವಿಶೇಷವೆಂದರೆ ಇದರಲ್ಲಿ ನೀವು 30 ದಿನಗಳವರೆಗೆ ಅಮೆಜಾನ್ ಪ್ರೈಮ್ ವೀಡಿಯೊದ ಮೊಬೈಲ್ ಆವೃತ್ತಿಯ ಉಚಿತ ಕೊಡುಗೆಯನ್ನು ಸಹ ಪಡೆಯುತ್ತೀರಿ.


ಇದನ್ನೂ ಓದಿ-Child Security:ಈ Smart School Bag ನಿಂದ ಪೋಷಕರು ತಮ್ಮ ಮನೆಯಿಂದಲೇ ಮಕ್ಕಳ ಮೇಲೆ ನಿಗಾವಹಿಸಬಹುದು


ವೊಡಾಫೋನ್-ಐಡಿಯಾ ರೂ 2899 ಯೋಜನೆ (Vodafone-Idea Prepaid Plans)
ಈ ಯೋಜನೆಯಲ್ಲಿ, ನೀವು 365 ದಿನಗಳವರೆಗೆ ಪ್ರತಿದಿನ 1.5 GB ಡೇಟಾವನ್ನು ಪಡೆಯುತ್ತೀರಿ. ಯೋಜನೆಯಲ್ಲಿ, ಕಂಪನಿಯು ದೇಶಾದ್ಯಂತ ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆಗಳನ್ನು ಸಹ ನೀಡುತ್ತಿದೆ. ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳನ್ನು ನೀಡುವ ಈ ಯೋಜನೆಯು ಬಿಂಜ್ ಆಲ್ ನೈಟ್, ವೀಕೆಂಡ್ ಡೇಟಾ ರೋಲ್‌ಓವರ್ ಮತ್ತು ಡೇಟಾ ಡಿಲೈಟ್‌ನಂತಹ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಬಹುದು.


ಇದನ್ನೂ ಓದಿ-Offer! iPhone 12 Mini ಮೇಲೆ ಭಾರೀ ರಿಯಾಯಿತಿ, ಅರ್ಧಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ ದುಬಾರಿ ಮೊಬೈಲ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.