BSNL Recharge Plan: ಕಳೆದ ತಿಂಗಳಷ್ಟೇ ತನ್ನ ಬಳಕೆದಾರರಿಗೆ ಧಮಾಕ ಕೊಡುಗೆಗಳನ್ನು ಪರಿಚಯಿಸಿದ್ದ ಬಿ‌ಎಸ್‌ಎನ್‌ಎಲ್ ಇದೀಗ ಹೊಸ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಬಿ‌ಎಸ್‌ಎನ್‌ಎಲ್ ತನ್ನ ಕೋಟ್ಯಾಂತರ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದ್ದು ಮೂರು ತಿಂಗಳ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ನಲ್ಲಿ ಹೆಚ್ಚುವರಿ ಡೇಟಾ ಕೊಡುಗೆ ನೀಡಲು ನಿರ್ಧರಿಸಿದೆ. 


COMMERCIAL BREAK
SCROLL TO CONTINUE READING

ಪ್ರಸ್ತುತ, ಕೈಗೆಟುಕುವ ರೀಚಾರ್ಜ್ ಯೋಜನೆಗಳೊಂದಿಗೆ ಹಲವು ಉತ್ತಮ ಕೊಡುಗೆಗಳನ್ನು ಒದಗಿಸುವತ್ತ ಗಮನ ಹರಿಸಿರುವ ಸರ್ಕಾರೀ ಟೆಲಿಕಾಂ ಕಂಪನಿಯಾದ ಬಿ‌ಎಸ್‌ಎನ್‌ಎಲ್ ತನ್ನತ್ತ ಇನ್ನೂ ಹೆಚ್ಚು ಹೆಚ್ಚು ಬಳಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ಡೇಟಾ ಕೊಡುಗೆಯೂ ಒಂದಾಗಿದೆ. 


ಇದನ್ನೂ ಓದಿ- Jio ಕೇವಲ 11 ರೂ.ಗೆ ಪ್ರಿಪೇಯ್ಡ್ ಪ್ಯಾಕ್ ಆರಂಭಿಸಿದ ಮುಖೇಶ್ ಅಂಬಾನಿ! ಬಳಕೆದಾರರಿಗೆ ಬಂಪರ್..!


ಹೆಚ್ಚುವರಿ ಡೇಟಾ ಕೊಡುಗೆ ಬಗ್ಗೆ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಘೋಷಿಸಿರುವ ಬಿ‌ಎಸ್‌ಎನ್‌ಎಲ್ ಕಂಪನಿ ತನ್ನ ಬಳಕೆದಾರರಿಗೆ 84 ದಿನಗಳ ರೀಚಾರ್ಜ್ ಯೋಜನೆಯಲ್ಲಿ ಈ ಕೊಡುಗೆ ನೀಡುತ್ತಿರುವುದಾಗಿ ಘೋಷಿಸಿದೆ. ಈ ಕೊಡುಗೆ 599 ರೂ. ಬಿ‌ಎಸ್‌ಎನ್‌ಎಲ್ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ. 


ಬೆಳಗ್ಗೆ ಎದ್ದ ತಕ್ಷಣ ಮೊಬೈಲ್‌ ನೋಡುವ ಅಭ್ಯಾಸ ನಿಮಗಿದ್ಯಾ?


ಬಿ‌ಎಸ್‌ಎನ್‌ಎಲ್ 599 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಪ್ರಯೋಜನಗಳು: 
ಬಿ‌ಎಸ್‌ಎನ್‌ಎಲ್ 599 ರೂ. ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು 84 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ಕರೆ, ಉಚಿತ ರಾಷ್ಟ್ರೀಯ ರೋಮಿಂಗ್, ದೈನಂದಿನ 100 ಉಚಿತ ಎಸ್‌ಎಮ್‌ಎಸ್ ಪ್ರಯೋಜನವನ್ನು ಪಡೆಯುತ್ತಾರೆ. ಇದೀಗ ಬಿ‌ಎಸ್‌ಎನ್‌ಎಲ್ ಈ ಯೋಜನೆಯಲ್ಲಿ 3ಜಿ‌ಬಿ ಹೆಚ್ಚುವರಿ ಡೇಟಾ ಪ್ರಯೋಜನವನ್ನು ಕೂಡ ನೀಡುತ್ತಿದೆ. 


ಸೆಲ್ಫ್ ಕೇರ್ ಆಪ್ ಮೂಲಕ ಮಾತ್ರ ಲಭ್ಯ ಈ ಸೌಲಭ್ಯ: 
ಬಿ‌ಎಸ್‌ಎನ್‌ಎಲ್ ಪ್ರಿಪೇಯ್ಡ್ ಯೋಜನೆಯಲ್ಲಿ ಲಭ್ಯವಿರುವ ಈ ಕೊಡುಗೆಯನ್ನು ಬಿ‌ಎಸ್‌ಎನ್‌ಎಲ್ ನ ಸೆಲ್ಫ್ ಕೇರ್ ಆಪ್ ಮೂಲಕ ಮಾತ್ರ ಪಡೆಯಬಹುದು. ಈ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ Zing, PRBT,  Astrotell ಮತ್ತು GameOnService ನಂತರ ಮೊಲ್ಯವರ್ಧಿತ ಸೇವೆಗಳ ಪ್ರಯೋಜನವನ್ನು ಕೂಡ ಪಡೆಯಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.