ನವದೆಹಲಿ: BSNL - ಸರ್ಕಾರಿ ಟೆಲಿಕಾಂ ಕಂಪನಿ (Government Telecom Company) ಬಿಎಸ್‌ಎನ್‌ಎಲ್ (BSNL) ಕಳೆದ ಕೆಲವು ದಿನಗಳಲ್ಲಿ ಬಳಕೆದಾರರಿಗಾಗಿ ಅನೇಕ ಉತ್ತಮ ಅನಿಯಮಿತ ಇಂಟರ್ನೆಟ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು (BSNL Broadband Internet) ಬಿಡುಗಡೆ ಮಾಡಿದೆ. ಈ ಯೋಜನೆಗಳಲ್ಲಿ, ಕಂಪನಿಯು ಅನಿಯಮಿತ ಡೇಟಾ ಮತ್ತು ಉಚಿತ ಕರೆ ಸೌಲಭ್ಯಗಳ ಜೊತೆಗೆ ಅನೇಕ ಹೆಚ್ಚುವರಿ ಪ್ರಯೋಜನಗಳನ್ನು ಸಹ ನೀಡುತ್ತಿದೆ. ಬಿಎಸ್‌ಎನ್‌ಎಲ್‌ನ ಈ ಯೋಜನೆಗಳು 299 ರೂಗಳಿಂದ ಪ್ರಾರಂಭವಾಗುತ್ತವೆ. ವಿಶೇಷವೆಂದರೆ ಈ ಯೋಜನೆಗಳಲ್ಲಿ ಕಂಪನಿಯು ಯಾವುದೇ ದೈನಂದಿನ ಮಿತಿಯಿಲ್ಲದೆ 1600 ಜಿಬಿವರೆಗೆ ಡೇಟಾವನ್ನು ನೀಡುತ್ತಿದೆ. ಇದಲ್ಲದೆ, ಕೆಲ ಲೇಟೆಸ್ಟ್ ಪ್ಲಾನ್ ಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್‌ನ ಪ್ರೀಮಿಯಂ (Disney+Hotstar Premium) ಚಂದಾದಾರಿಕೆಯನ್ನು ಕೂಡ ಉಚಿತವಾಗಿ ನೀಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

BSNLನ ರೂ.299ರ ಪ್ಲಾನ್
ಕಂಪನಿಯ ಈ ಯೋಜನೆಯ ಹೆಸರು 100 ಜಿಬಿ CLU (100 GB CLU). ಕಂಪನಿಯು ಈ ಯೋಜನೆಯನ್ನು ಹೊಸ ಬಳಕೆದಾರರಿಗೆ ಸ್ವಾಗತ ಪ್ರಸ್ತಾಪದಡಿಯಲ್ಲಿ ನೀಡುತ್ತದೆ ಮತ್ತು ಇದು ಕೇವಲ 6 ತಿಂಗಳುಗಳವರೆಗೆ ಲೈವ್ ಇರಲಿದೆ. 6 ತಿಂಗಳ ನಂತರ ಯೋಜನೆ ಸ್ವಯಂಚಾಲಿತವಾಗಿ 200GB CULಗೆ ಪರಿವರ್ತನೆಯಾಗಲಿದೆ. 299 ರೂ.ಗಳ ಯೋಜನೆಯಲ್ಲಿ, 100 ಜಿಬಿ ಡೇಟಾವನ್ನು ಯಾವುದೇ ದೈನಂದಿನ ಡೇಟಾ ಮಿತಿಯಿಲ್ಲದೆ 10Mbps ವೇಗದಲ್ಲಿ ನೀಡಲಾಗುತ್ತಿದೆ. 100 ಜಿಬಿಯ ಮಾಸಿಕ ಮಿತಿ ಮುಗಿದ ನಂತರ, ಯೋಜನೆಯಲ್ಲಿ ಲಭ್ಯವಿರುವ ಡೇಟಾ ವೇಗವು 2 ಎಮ್‌ಬಿಪಿಎಸ್‌ಗೆ ತಲುಪುತ್ತದೆ. ಕಂಪನಿಯು ಯೋಜನೆಯ ಚಂದಾದಾರರಿಗೆ ದೇಶಾದ್ಯಂತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮಾಡುವ ಸೌಕರ್ಯ ನೀಡುತ್ತಿದೆ.


BSNLನ ರೂ.399ರ ಪ್ಲಾನ್
399 ರೂ ಮಾಸಿಕ ಬಾಡಿಗೆ ಹೊಂದಿರುವ ಈ ಯೋಜನೆಯಲ್ಲಿ ಕಂಪನಿಯು ಪ್ರತಿ ತಿಂಗಳು 10Mbps ವೇಗದಲ್ಲಿ 200 ಜಿಬಿ ಡೇಟಾ ನೀಡುತ್ತಿದೆ. ಇದೊಂದು ನಿಯಮಿತ ಯೋಜನೆಯಾಗಿದ್ದು, ಬಳಕೆದಾರರು ಖುದ್ದಾಗಿ ಪ್ಲಾನ್ ಚೇಂಜ್ ಮಾಡದ ಹೊರತು ಇದು ಬದಲಾಗುವುದಿಲ್ಲ.. 299 ರೂ ಯೋಜನೆಯಂತೆ ಈ ಯೋಜನೆಯಲ್ಲಿಯೂ ಕೂಡ ಕಂಪನಿಯು ದೇಶಾದ್ಯಂತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆಗಳನ್ನು ಸಹ ನೀಡುತ್ತಿದೆ.


BSNLನ ರೂ.555ರ ಪ್ಲಾನ್
555 ರೂ ಮಾಸಿಕ ಬಾಡಿಗೆ ಹೊಂದಿರುವ ಈ ರೆಗ್ಯುಲರ್ ಪ್ಲಾನ್ ನಲ್ಲಿ, ಒಂದು ತಿಂಗಳವರೆಗೆ 500 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿಯೂ ಕೂಡ ಕಂಪನಿ  ಚಂದಾದಾರರಿಗೆ ದೇಶಾದ್ಯಂತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮಾಡುವ ಸೌಲಭ್ಯ ನೀಡುತ್ತಿದೆ.


BSNLನ ರೂ.779ರ ಪ್ಲಾನ್
ಬಿಎಸ್‌ಎನ್‌ಎಲ್‌ (BSNL)ನ ಈ ಯೋಜನೆಯಲ್ಲಿ, ನಿಮಗೆ ಒಂದು ತಿಂಗಳವರೆಗೆ ಒಟ್ಟು 779 ಜಿಬಿ ಡೇಟಾ ಡಲಾಗುತ್ತಿದೆ. ಬಳಕೆದಾರರು ಈ ಡೇಟಾವನ್ನು ನೀವು ಬೇಕಾದರೆ ಒಂದೇ ದಿನದಲ್ಲಿ ಖಾಲಿ ಮಾಡಬಹುದು. ಯೋಜನೆಯಲ್ಲಿ ಲಭ್ಯವಿರುವ ಡೇಟಾ ವೇಗ 10Mbps ಆಗಿದೆ. ಈ ಯೋಜನೆಯ ವಿಶೇಷತೆಯೆಂದರೆ ಕಂಪನಿಯು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಡಿಸ್ನಿ + ಹಾಟ್‌ಸ್ಟಾರ್‌ಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಇತರ ಯೋಜನೆಗಳಂತೆ, ಇದರಲ್ಲಿಯೂ ಕೂಡ ಕಂಪನಿಯು ಇದರಲ್ಲಿ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ನೀಡುತ್ತಿದೆ.


ಇದನ್ನೂ ಓದಿ-Free WiFi: ಆಗಸ್ಟ್ 15 ರಿಂದ ಈ ರಾಜ್ಯದ ನಗರಗಳಲ್ಲಿನ ನಾಗರಿಕರಿಗೆ ಸಿಗಲಿದೆ ಉಚಿತ ವೈ-ಫೈ ಸೌಲಭ್ಯ


BSNLನ ರೂ.949ರ ಪ್ಲಾನ್
ಈ ಯೋಜನೆಯಲ್ಲಿ, ನೀವು ಒಂದು ತಿಂಗಳಿಗೆ 1100 ಜಿಬಿ ಡೇಟಾವನ್ನು ಪಡೆಯಬಹುದು ಮತ್ತು ಈ ಡೇಟಾವನ್ನು ನೀವು ಒಂದೇ ದಿನದಲ್ಲಿ ಖಾಲಿ ಕೂಡ ಮಾಡಬಹುದು, ಅನಿಯಮಿತ ಕರೆಗಳೊಂದಿಗೆ ಇದರಲ್ಲಿ ನೀವು ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಸೇವೆಯನ್ನು ಕೂಡ ಉಚಿತವಾಗಿ ಆನಂದಿಸಬಹುದು.


ಇದನ್ನೂ ಓದಿ-WhatsApp Latest Feature: ವಾಟ್ಸ್ ಆಪ್ ನಲ್ಲಿ ಬಂತು Group Video/Voice Callಗೆ ಸಂಬಂಧಿಸಿದ ಈ ಅದ್ಭುತ ವೈಶಿಷ್ಟ್ಯ


BSNLನ ರೂ.1299ರ ಪ್ಲಾನ್
ಸ್ಟಾಟಿಕ್ IP ಅಡ್ರೆಸ್ ಅವಶ್ಯಕತೆ ಇರುವ BSNL DSL ಬ್ರಾಡ್ ಬ್ಯಾಂಡ್ ಬಳಕೆದಾರರು ಈ ಪ್ಲಾನ್ ನ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದು. ಈ ಪ್ಲಾನ್ ಅಡಿಯಲ್ಲಿ ನಿಮಗೆ 10Mbps ಸ್ಪೀಡ್ ನೊಂದಿಗೆ 1600GB ಡೇಟಾ ಸಿಗುತ್ತದೆ. ಸ್ಟಾಟಿಕ್ IP ಗಾಗಿ ಬಳಕೆದಾರರು ತಿಂಗಳಿಗೆ ರೂ.2000 ಶುಲ್ಕ ಪಾವತಿಸಬೇಕು. ಉಳಿದ ಪ್ಲಾನ್ ಗಳಂತೆಯೇ ಇದರಲ್ಲಿಯೂ ಕೂಡ ಕಂಪನಿ ಅನಿಯಮಿತ ಕಾಲಿಂಗ್ ಸೌಲಭಯದ ಕೊಡುಗೆ ನೀಡುತ್ತಿದೆ.


ಇದನ್ನೂ ಓದಿ- Made in India Smartphones: ಚೀನಾದ ಬ್ರಾಂಡ್‌ಗಳಿಗೆ ಟಕ್ಕರ್ ನೀಡುವ ಟಾಪ್ 5 ಭಾರತೀಯ ಫೋನ್ ತಯಾರಕರಿವರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ