ನವದೆಹಲಿ: ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಲ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಗ್ರಾಹಕರನ್ನು ಸೆಳೆಯಲು ಇತ್ತೀಚಿಗೆ ಹಲವು ಯೋಜನೆಗಳನ್ನು ಪರಿಚಯಿಸುತ್ತಿದೆ. ಮೊಬೈಲ್ ರೀಚಾರ್ಜ್ ಯೋಜನೆಗಳು ಮತ್ತು ಇಂಟರ್ನೆಟ್ ಡೇಟಾದ ಸ್ಪರ್ಧೆಯ ನಡುವೆ, ಬಿಎಸ್ಎನ್ಎಲ್ ಮತ್ತೊಂದು ಪ್ರಚಂಡ ರೀಚಾರ್ಜ್ ಯೋಜನೆಯನ್ನು ತಂದಿದೆ. ಬಿಎಸ್‌ಎನ್‌ಎಲ್‌ನ ಇತ್ತೀಚೆಗೆ ಪರಿಚಯಿಸಿರುವ 249 ರೂ. ಯೋಜನೆಯು ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್, ಜಿಯೋ ಮತ್ತು ವಿ (Vi) ಕಂಪನಿಗಳು ಭಾರೀ ಸ್ಪರ್ಧೆ ನೀಡುತ್ತಿದೆ.


COMMERCIAL BREAK
SCROLL TO CONTINUE READING

249 ರೂಪಾಯಿಗಳ ಯೋಜನೆಯಲ್ಲಿನ ವಿಶೇಷತೆ ಏನು?
ನಮ್ಮ ಸಹಾಯಕ ವೆಬ್‌ಸೈಟ್ ಜೀಬಿಜ್.ಕಾಮ್ ಪ್ರಕಾರ, ಬಿಎಸ್ಎನ್ಎಲ್ (BSNL) ಇತ್ತೀಚೆಗೆ 249 ರೂ.ಗಳ ರೀಚಾರ್ಜ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ, ಪ್ರಿಪೇಯ್ಡ್ ಗ್ರಾಹಕರಿಗೆ ಪ್ರತಿದಿನ 2 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಇದಲ್ಲದೆ, ಬಳಕೆದಾರರು ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಸೌಲಭ್ಯವನ್ನು ಸಹ ಪಡೆಯುತ್ತಿದ್ದಾರೆ. ಈ ಅಷ್ಟೇ ಅಲ್ಲದೆ ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರು ಪ್ರತಿದಿನ 100 ಉಚಿತ  ಎಸ್‌ಎಂಎಸ್ ಸೌಲಭ್ಯವನ್ನೂ ಪಡೆಯುತ್ತಾರೆ. ಬಿಎಸ್‌ಎನ್‌ಎಲ್‌ನ ಈ ರೀಚಾರ್ಜ್ ಯೋಜನೆಯ ಸಿಂಧುತ್ವವು 60 ದಿನಗಳು. ಇದು ಪ್ರಿಪೇಯ್ಡ್ ರೀಚಾರ್ಜ್ ಯೋಜನೆ (Prepaid Recharge Plan). ಈ ಮೊದಲ ರೀಚಾರ್ಜ್ ಕೂಪನ್ (ಎಫ್‌ಆರ್‌ಸಿ) ಅನ್ನು ಪ್ರಚಾರದ ಕೊಡುಗೆಯಾಗಿ ಕಳೆದ ತಿಂಗಳು ಮಾತ್ರ ಪ್ರಾರಂಭಿಸಲಾಗಿದೆ. ಈ ಯೋಜನೆ ಮೊದಲ ಬಾರಿಗೆ ತಮ್ಮ ಸಂಖ್ಯೆಯನ್ನು ರೀಚಾರ್ಜ್ ಮಾಡುವ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ.


ಇದನ್ನೂ ಓದಿ - BSNL ಗ್ರಾಹಕರಿಗೆ 200 ರೂ.ಗಿಂತ ಕಡಿಮೆ ರೀಚಾರ್ಜ್‌ನಲ್ಲಿ ಸಿಗಲಿದೆ ನಿತ್ಯ 2GB Data


ಎರಡು ತಿಂಗಳವರೆಗೆ ಮಾನ್ಯ:
ಬಿಎಸ್‌ಎನ್‌ಎಲ್‌ನ (BSNL) ಈ 249 ರೂ. ರೀಚಾರ್ಜ್ ಯೋಜನೆಯ ಮಾನ್ಯತೆ 60 ದಿನಗಳು. ಅಂದರೆ, ಒಮ್ಮೆ ಗ್ರಾಹಕರು ರೀಚಾರ್ಜ್ ಮಾಡಿದ ನಂತರ ಎರಡು ತಿಂಗಳವರೆಗೆ ಮತ್ತೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ.


ಇದನ್ನೂ ಓದಿ - ತನ್ನ ಗ್ರಾಹಕರಿಗಾಗಿ ವಿಶಿಷ್ಟ ಪ್ಲಾನ್ ಪರಿಚಯಿಸಿದ BSNL, ಈಗ ಚಿಲ್ಲರ್‌ನಲ್ಲಿ ಲಭ್ಯ ಫುಲ್ ಟಾಕ್‌ಟೈಮ್


ಶೀಘ್ರದಲ್ಲೇ 4 ಜಿ ಸೇವೆಯನ್ನು ಇಡೀ ದೇಶದಲ್ಲಿ ಪ್ರಾರಂಭಿಸಲಾಗುವುದು:
ದೇಶಾದ್ಯಂತ 4 ಜಿ ಸೇವೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್‌ಗೆ ಅನುಮತಿ ನೀಡಿದೆ. ಬಿಎಸ್ಎನ್ಎಲ್ ಶೀಘ್ರದಲ್ಲೇ ದೇಶಾದ್ಯಂತ 4 ಜಿ ಸೇವೆಗಳನ್ನು ಒದಗಿಸಲಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಸರ್ಕಾರಿ ಟೆಲಿಕಾಂ ಕಂಪನಿ ಇದಕ್ಕಾಗಿ ಸಿದ್ಧತೆಗಳನ್ನು ಪ್ರಾರಂಭಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.