ಕೇವಲ 10 ನಿಮಿಷದಲ್ಲಿ ಬಟ್ಟೆ ಒಗೆದು ಬಿಡುತ್ತದೆ ಈ ಮಿನಿ ವಾಷಿಂಗ್ ಮೆಶಿನ್ ! ಬೆಲೆ ಕೂಡಾ ಭಾರೀ ಅಗ್ಗ
Bucket Size Washing Machine :ಪೋರ್ಟಬಲ್ ವಾಷಿಂಗ್ ಮೆಷಿನ್ ಅನ್ನು ಬಳಸುವುದು ಕೂಡಾ ಬಹಳ ಸುಲಭ. ಮೆಷಿನ್ ಒಳಗೆ ಬಟ್ಟೆ ಮತ್ತು ನೀರನ್ನು ಸೇರಿಸಿ, ಮೆಷಿನ್ ಆನ್ ಮಾಡಿದರೆ ಸಾಕು ಬಟ್ಟೆಗಳು ನಿಮಿಷಗಳಲ್ಲಿ ಸ್ವಚ್ಛವಾಗುತ್ತವೆ.
Bucket Size Washing Machine : ವಾಷಿಂಗ್ ಮೆಷಿನ್ ಪ್ರತಿ ಮನೆಯಲ್ಲೂ ಅಗತ್ಯವಾಗಿರುವ ಸಾಧನವಾಗಿದೆ. ಬಟ್ಟೆಗಳನ್ನು ಕೈಯಿಂದ ತೊಳೆಯಬೇಕು ಎಂದರೆ ಅದು ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ನಾನಾ ಬ್ರಾಂಡ್ ಗಳ ವಾಷಿಂಗ್ ಮೆಷಿನ್ ಲಭ್ಯವಿದೆ. ಇದೀಗ ಪೋರ್ಟಬಲ್ ವಾಷಿಂಗ್ ಮೆಷಿನ್ ಕೂಡಾ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಸಣ್ಣ, ಪೋರ್ಟಬಲ್ ವಾಷಿಂಗ್ ಮೆಷಿನ್ ಗಳು ಬಕೆಟ್ ಗಾತ್ರದಷ್ಟೇ ಪುಟ್ಟದಾಗಿದ್ದು, ಇದನ್ನು ಮನೆಯ ಯಾವುದೇ ಸ್ಥಳದಲ್ಲಿ ಇರಿಸಬಹುದು. ಪೋರ್ಟಬಲ್ ವಾಷಿಂಗ್ ಮೆಷಿನ್ ಅನ್ನು ಬಳಸುವುದು ಕೂಡಾ ಬಹಳ ಸುಲಭ. ಮೆಷಿನ್ ಒಳಗೆ ಬಟ್ಟೆ ಮತ್ತು ನೀರನ್ನು ಸೇರಿಸಿ, ಮೆಷಿನ್ ಆನ್ ಮಾಡಿದರೆ ಸಾಕು ಬಟ್ಟೆಗಳು ನಿಮಿಷಗಳಲ್ಲಿ ಸ್ವಚ್ಛವಾಗುತ್ತವೆ.
ಪೋರ್ಟಬಲ್ ವಾಷಿಂಗ್ ಮೆಷಿನ್ :
3 kg Semi-Automatic Top Loading Washing Machine ಸಣ್ಣ ಮನೆಗಳು ಅಥವಾ ಅಪಾರ್ಟ್ ಮೆಂಟ್ ಗಳಿಗೆ ಸೂಕ್ತವಾದ ಆಯ್ಕೆಯಾಗಿದೆ. ಈ ಮೆಷಿನ್ ಗಾತ್ರದಲ್ಲಿ ಚಿಕ್ಕದಾಗಿದ್ದು, ಪೋರ್ಟಬಲ್ ಆಗಿದೆ. ಆದ್ದರಿಂದ ಅದನ್ನು ಎಲ್ಲಿ ಬೇಕಾದರೂ ಸುಲಭವಾಗಿ ತೆಗೆದುಕೊಂದು ಹೋಗಬಹುದು. ಈ ಮೆಷಿನ್ 3 ಕೆಜಿಯಷ್ಟು ಬಟ್ಟೆ ತೊಳೆಯುವ ಸಾಮರ್ಥ್ಯದೊಂದಿಗೆ ಬರುತ್ತದೆ. ಆದ್ದರಿಂದ ಒಮ್ಮೆಗೆ ಐದರಿಂದ ಆರು ಬಟ್ಟೆಗಳನ್ನು ಇದರಲ್ಲಿ ಹಾಕಬಹುದು.
ಇದನ್ನೂ ಓದಿ : Check IRCTC PNR On WhatsApp: ನಿಮ್ಮ ರೈಲ್ವೆ ಟಿಕೆಟ್ ಕನ್ಫರ್ಮ್ ಆಗಿದೆಯೇ ಇಲ್ಲವೇ? ವಾಟ್ಸಾಪ್ ಮೂಲಕ ಸುಲಭವಾಗಿ ಚೆಕ್ ಮಾಡಿ
ಬೆಲೆ ಸುಮಾರು 5 ಸಾವಿರ ರೂ :
Hilton 3 kg Semi-Automatic Top Loading Washing Machine ಬಟ್ಟೆಗಳನ್ನು ಒಣಗಿಸಲು ಸಹಾಯ ಮಾಡುವ ಸ್ಪಿನ್ನರ್ ಅನ್ನು ಒಳಗೊಂಡಿದೆ. ಇದನ್ನು ಸುಲಭವಾಗಿ ಪ್ಲಗ್ ಇನ್ ಮಾಡಬಹುದು. ಇದರಲ್ಲಿ ಸ್ವಯಂಚಾಲಿತ ಪವರ್ ಆಫ್ ಸೌಲಭ್ಯವೂ ಇದ್ದು, ವಿದ್ಯುತ್ ಉಳಿತಾಯವಾಗುತ್ತದೆ. ಈ ಮೆಷಿನ್ ಬೆಲೆ 5,999 ರೂಪಾಯಿ. ಆದರೆ ರಿಯಾಯಿತಿ ಮತ್ತು ವಿನಿಮಯ ಕೊಡುಗೆಯೊಂದಿಗೆ ಇದನ್ನು 5,139 ರೂ.ಗೆ Amazon ನಿಂದ ಖರೀದಿಸಬಹುದು.
ಇದನ್ನು ಮಡಚಿಯೂ ಇಡಬಹುದಾಗಿದೆ :
ಅಮೆಜಾನ್‌ನಲ್ಲಿ ಲಭ್ಯವಿರುವ ಮತ್ತೊಂದು ಆಸಕ್ತಿದಾಯಕ ಪೋರ್ಟಬಲ್ ವಾಷಿಂಗ್ ಮೆಷಿನ್ ಅನ್ನು ಮಿನಿ ಫೋಲ್ಡಿಂಗ್ ಪೋರ್ಟಬಲ್ ವಾಷಿಂಗ್ ಮೆಷಿನ್ ಎಂದು ಕರೆಯಲಾಗುತ್ತದೆ. ಈ ಮೆಷಿನ್ ತುಂಬಾ ಚಿಕ್ಕದಾಗಿದೆ. ಇದನ್ನು ಬಳಸಿದ ನಂತರ ಅದನ್ನು ಟಿಫಿನ್‌ನಂತೆ ಮಡಚಿ ಕಬೋರ್ಡ್‌ನಲ್ಲಿ ಇಡಬಹುದು. ಇದು ಯುಎಸ್‌ಬಿ-ಚಾಲಿತ ಟಾಪ್-ಲೋಡಿಂಗ್ ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್ ಆಗಿದ್ದು, 10 ನಿಮಿಷಗಳಲ್ಲಿ ಬಟ್ಟೆಗಳನ್ನು ತೊಳೆಯಬಹುದು. ಇದು ವಿದ್ಯುತ್ ಮತ್ತು ನೀರು ಎರಡನ್ನೂ ಉಳಿಸುತ್ತದೆ.
ಇದನ್ನೂ ಓದಿ : ಮೊಬೈಲ್ ಒಳಗಡೆ ಮಳೆ ನೀರು ಹೋದರೆ ತಕ್ಷಣಕ್ಕೆ ಏನು ಮಾಡಬೇಕು?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ