ಬೆಂಗಳೂರು : Force Motors Trax Cruiser : ಈಗ 7 ಸೀಟರ್ ಕಾರ್ ಗಳು ಕ್ರೇಜ್ ದಿನೇ ದಿನೇ ಹೆಚ್ಚುತ್ತಿದೆ. ದೊಡ್ಡ ಕುಟುಂಬ ಎಂದಾದಾಗ 7 ಸೀಟರ್ ಕಾರುಗಳತ್ತ ಜನ ಮುಖ ಮಾಡುತ್ತಾರೆ. 7 ಅಥವಾ 8 ಆಸನಗಳಿರುವ ಕಾರುಗಳಲ್ಲಿ ಕುಟುಂಬದೊಂದಿಗೆ ಆರಾಮವಾಗಿ ಪ್ರಯಾಣಿಸುವುದು ಸಾಧ್ಯವಾಗುತ್ತದೆ. ಆದರೆ, ಇದಕ್ಕಿಂತ ಹೆಚ್ಚು ಆಸನ ಸಾಮರ್ಥ್ಯದ ಕಾರು ಖರೀದಿಸಬೇಕು ಎನ್ನುವ ಯೋಚನೆ ಇದ್ದರೆ  ಅದಕ್ಕೂ ಉತ್ತಮ ಆಯ್ಕೆಗಳಿವೆ. ಹೌದು ಫೋರ್ಸ್ ಮೋಟಾರ್ಸ್ ಟ್ರಾಕ್ಸ್ ಕ್ರೂಸರ್ 10 ಆಸನಗಳು (9+D) ಮತ್ತು 13 ಆಸನಗಳ (12+D) ಆಯ್ಕೆಗಳಲ್ಲಿ ಬರುತ್ತದೆ.


COMMERCIAL BREAK
SCROLL TO CONTINUE READING

ಕಾರಿನ ಎಂಜಿನ್ ಮತ್ತು ಬೆಲೆ :
ಇದು 2596CC, BS-VI, 4 ಸಿಲಿಂಡರ್, ಕಾಮನ್ ರೈಲ್ DI TCIC ಎಂಜಿನ್ (ಡೀಸೆಲ್) ನಿಂದ ಚಾಲಿತವಾಗಿದೆ. ಇದು 67kW@3200rpm ಮತ್ತು 250 Nm@1400-2400rpm ಔಟ್ ಪುಟ್ ನೀಡುತ್ತದೆ. ಇದರಲ್ಲಿ ಐದು ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೀಡಲಾಗಿದೆ. ಫೋರ್ಸ್ ಮೋಟಾರ್ಸ್ ಟ್ರಾಕ್ಸ್ ಕ್ರೂಸರ್ ಬೆಲೆ  16.08 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ.  ಟ್ರಾಕ್ಸ್ ಕ್ರೂಸರ್ 4 ರೂಪಾಂತರಗಳಲ್ಲಿ ಬರುತ್ತದೆ. ಟ್ರಾಕ್ಸ್ ಕ್ರೂಸರ್ ಡೀಸೆಲ್  ಬೇಸ್ ಮಾಡಲ್ 16.08 ಲಕ್ಷ ರೂ.ಗಳಲ್ಲಿ ಲಭ್ಯವಿದೆ.  


ಇದನ್ನೂ ಓದಿ : ಜನವರಿ 1 ರಿಂದ ಬಂದ್ ಆಗಲಿವೆ ಎಲೆಕ್ಟ್ರಿಕ್ ವಾಟರ್ ಹೀಟರ್‌ಗಳು: ಯಾಕ್ ಗೊತ್ತಾ?


13 ಆಸನಗಳ ವಿನ್ಯಾಸ :
ಅದರ 13 ಆಸನಗಳ ಕಾನ್ಫಿಗರೇಶನ್ ಮಾದರಿಯಲ್ಲಿ, ಚಾಲಕನ ಸೀಟಿಗೆ ಸಮಾನವಾಗಿ ಮತ್ತೊಬ್ಬ ವ್ಯಕ್ತಿ ಕುಳಿತುಕೊಳ್ಳುವುದು ಸಾಧ್ಯವಾಗುತ್ತದೆ. ಎರಡನೇ ಸಾಲಿನಲ್ಲಿ ಬೆಂಚ್ ಸೀಟ್ ಇದ್ದು, ಅದರಲ್ಲಿ ಮೂರು ಜನರು ಕುಳಿತುಕೊಳ್ಳಬಹುದು. ನಂತರ, ಎರಡು ಬೆಂಚ್ ಸೀಟ್ ಗಳು ಹಿಂಭಾಗದಲ್ಲಿ ಇದ್ದು, ಇಲ್ಲಿ ಮುಖಾಮುಖಿಯಾಗಿ ಕುಳಿತುಕೊಳ್ಳಬಹುದು. ಪ್ರತಿ ಬೆಂಚ್ ಸೀಟ್ 4 ಜನರ ಆಸನ ಸಾಮರ್ಥ್ಯವನ್ನು ಹೊಂದಿದೆ. ಅಂದರೆ, ಇಲ್ಲಿ 8 ಜನರು ಮುಖಾಮುಖಿಯಾಗಿ ಕುಳಿತುಕೊಳ್ಳಬಹುದು. ಕಾರಿನಲ್ಲಿ ಹಿಂಭಾಗದಲ್ಲಿ 8 ಜನರು, ಮಧ್ಯದ ಸಾಲಿನಲ್ಲಿ 3 ಜನರು ಮತ್ತು ಮುಂಭಾಗದಲ್ಲಿ ಚಾಲಕ ಸೇರಿದಂತೆ 2 ಜನರು ಕುಳಿತುಕೊಳ್ಳಬಹುದಾಗಿದೆ. ಅಂದರೆ ಒಂದು ಕಾರಿನಲ್ಲಿ ಆರಾಮಾಗಿ 13 ಜನ ಪ್ರಯಾಣಿಸಬಹುದು. 


ಇದನ್ನೂ ಓದಿ : ಸೊಳ್ಳೆ ಕಾಟದಿಂದ ಸಂಪೂರ್ಣ ಮುಕ್ತಿ ನೀಡುತ್ತದೆ ಈ ಲ್ಯಾಂಪ್ .! ಅದು ಕೂಡಾ ಅಗ್ಗದ ಬೆಲೆಯಲ್ಲಿ


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.