Flipkart iPhone SE Offer : ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ತನ್ನ ಬಳಕೆದಾರರಿಗೆ ಅನೇಕ ಅದ್ಭುತ ಕೊಡುಗೆಗಳನ್ನು ನೀಡುತ್ತಾ ಬಂದಿದೆ.  ಇದರಲ್ಲಿ ಬಳಕೆದಾರರ ನೆಚ್ಚಿನ ಉತ್ಪನ್ನಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಮಾರ್ಟ್‌ಫೋನ್‌ಗಳು ಮತ್ತು ಸ್ಮಾರ್ಟ್ ಟಿವಿಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಎಲ್ಲವನ್ನೂ ಫ್ಲಿಪ್‌ಕಾರ್ಟ್‌ ಮೂಲಕ  ಅಗ್ಗದ ಬೆಲೆಗೆ ಖರೀದಿಸಬಹುದು. ಈ ಬಾರಿ ಇರುವ ಡೀಲ್‌ನಲ್ಲಿ ಆಪಲ್‌ನ ಐಫೋನ್ ಅನ್ನು 15 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಆಫರ್ ಅನ್ನು iPhone SE ಮೇಲೆ ನೀಡಲಾಗುತ್ತಿದೆ.  


COMMERCIAL BREAK
SCROLL TO CONTINUE READING

iPhone SE ಮೇಲೆ ಭಾರೀ ರಿಯಾಯಿತಿ :
ಇಲ್ಲಿ iPhone SE ಯ 64GB ರೂಪಾಂತರದ ಫೋನ್ ಅನ್ನು  ಫ್ಲಿಪ್‌ಕಾರ್ಟ್‌ನಲ್ಲಿ 39,900 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 23% ರಿಯಾಯಿತಿಯ ನಂತರ  30,499 ರೂಪಾಯಿಗೆ ಖರೀದಿಸಬಹುದು. ಅಷ್ಟೇ ಅಲ್ಲ, ಈ ಡೀಲ್‌ನಲ್ಲಿ ಹೆಚ್ಚುವರಿ ಕೊಡುಗೆಯನ್ನು ಸಹ ನೀಡಲಾಗುತ್ತಿದೆ. ಈ ಮೂಲಕ ಈ ಫೋನ್ ಅನ್ನು 15 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ.


ಇದನ್ನೂ ಓದಿ : ಈ ಒಂದು ಕೆಲಸ ಮಾಡಿದರೆ ಸಾಕು ಪ್ರತಿ ತಿಂಗಳು ಕೈ ಸೇರುತ್ತದೆ 20 ಸಾವಿರ ರೂಪಾಯಿ.! ಜಿಯೋ ನೀಡುತ್ತಿದೆ ಭಾರೀ ಆಫರ್


15,000 ರೂಪಾಯಿಗಿಂತ ಕಡಿಮೆ ಬೆಲೆಗೆ ಐಫೋನ್ ಖರೀದಿಸಿ!
ರಿಯಾಯಿತಿಯ ನಂತರ, 39,900 ರೂಗಳ ಐಫೋನ್ ಅನ್ನು 30,499 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಹಳೆಯ ಸ್ಮಾರ್ಟ್ ಫೋನ್ ಬದಲಿಸಿ ಈ ಫೋನ್ ಖರೀದಿಸುವುದಾದರೆ,  ಫೋನ್ ಮೇಲೆ 17 ಸಾವಿರ ರೂಪಾಯಿ ರಿಯಾಯಿತಿ ಸಿಗುತ್ತದೆ. ಎಕ್ಸ್‌ಚೇಂಜ್ ಆಫರ್‌ನ ಸಂಪೂರ್ಣ ಪ್ರಯೋಜನವನ್ನು ಪಡೆಯುವುದು ಸಾಧ್ಯವಾದರೆ, ಈ ಫೋನ್‌ ಅನ್ನು 13,499 ರೂಪಾಯಿಗೆ ಖರೀದಿಸಬಹು 


iPhone SE ನ ವೈಶಿಷ್ಟ್ಯಗಳು :
ಐಫೋನ್ SE ನ 64GB ರೂಪಾಂತರದಲ್ಲಿ 4.7-ಇಂಚಿನ ರೆಟಿನಾ HD ಡಿಸ್ಪ್ಲೇಯನ್ನು ನೀಡಲಾಗುತ್ತಿದೆ. A13 ಬಯೋನಿಕ್ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಐಫೋನ್ 12MP ರಿಯರ್  ಕ್ಯಾಮೆರಾ ಮತ್ತು 7MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಈ 4G ಫೋನ್ ಡ್ಯುಯಲ್ ಸಿಮ್ ಸೌಲಭ್ಯವನ್ನು ಹೊಂದಿದೆ. ಅದರ  ಸ್ಟೋರೇಜ್ ಹೆಚ್ಚಿಸುವುದು ಸಾಧ್ಯವಾಗುವುದಿಲ್ಲ. 


ಇದನ್ನೂ ಓದಿ : Jio Offer: ಕೇವಲ ರೂ.399ಕ್ಕೆ ಕೊಡುಗೆಗಳನ್ನು ನೀಡುವ ಮಿತಿಯನ್ನೇ ದಾಟಿದ ಜಿಯೋ, ಇಲ್ಲಿದೆ ವಿವರ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.