ನವದೆಹಲಿ : ಇನ್ನೇನು ಬೇಸಿಗೆ ಕಾಲ ಆರಂಭವಾಗಿದೆ. ಬೇಸಿಗೆಯಲ್ಲಿ ತಂಪಿನ ಅನುಭವ ನೀಡಲು ಮಾರುಕಟ್ಟೆಯಲ್ಲಿ ಹಲವಾರು ರೆಫ್ರಿಜರೇಟರ್‌ಗಳು ಲಭ್ಯವಿವೆ (Refrigerator). ಬೇಸಿಗೆಗೂ ಮುನ್ನ ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಫ್ರಿಡ್ಜ್ ಮೇಲೆ ಭಾರಿ ರಿಯಾಯಿತಿ ನೀಡಲಾಗುತ್ತಿದೆ. ಬೇಸಿಗೆಗೆ ಎಸಿ (AC), ಕೂಲರ್ ಮತ್ತು ಫ್ರಿಡ್ಜ್ ಖರೀದಿಸಲು ಈಗ ಸರಿಯಾದ ಸಮಯ. ಡಬಲ್ ಡೋರ್‌ನಿಂದ ಹಿಡಿದು ಪೋರ್ಟಬಲ್ ಫ್ರಿಜ್‌ಗಳವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ (Portable Fridge).  ಏಕಾಂಗಿಯಾಗಿ ವಾಸಿಸುತ್ತಿದ್ದರೆ, ಪೋರ್ಟಬಲ್ ಫ್ರಿಜ್ ಅತ್ಯುತ್ತಮ ಆಯ್ಕೆಯಾಗಿದೆ. 


COMMERCIAL BREAK
SCROLL TO CONTINUE READING

7.5L ಮಿನಿ ಕಾರ್ ರೆಫ್ರಿಜರೇಟರ್‌ನ ವೈಶಿಷ್ಟ್ಯಗಳು : 
ನೀವು ಈ ಫ್ರಿಡ್ಜ್  ಅನ್ನು ಪ್ರವಾಸಕ್ಕೆ ಹೋಗುವಾಗಲೂ ತೆಗೆದುಕೊಂಡು ಹೋಗಬಹುದು.  ಈ ಚಿಕ್ಕ ಫ್ರಿಡ್ಜ್ (Fridge) ಅನೇಕ ರೀತಿಯಲ್ಲಿ ಉಪಯೋಗವಾಗಬಹುದು (Benefits of Portable Fridge) . ಈ ಸಣ್ಣ ಗಾತ್ರದ ಡಿವೈಸ್ ಕೇವಲ ರೆಫ್ರಿಜರೇಟರ್ ಆಗಿ ಮಾತ್ರ ಕಾರ್ಯನಿರ್ವಹಿಸುವುದಿಲ್ಲ. ಬದಲಿಗೆ ಇದನ್ನೂ ವಾರ್ಮರ್ ರೀತಿಯಲ್ಲಿ ಕೂಡಾ ಬಳಸಬಹುದು.  ಇದರಲ್ಲಿ ಕೋಲ್ಡ್ ಮತ್ತು ಹಾಟ್ ಎರಡರ ಆಯ್ಕೆಯೂ ಸಿಗುತ್ತದೆ. ಅಂದರೆ ಕೋಲ್ಡ್ ಬೇಕೋ ವಾರ್ಮ್ ಬೇಕೋ ಎಂಬ ಅಗತ್ಯಕ್ಕನುಗುಣವಾಗಿ, ಆಯ್ಕೆಯನ್ನು ಬಳಸಬಹುದು. 


ಇದನ್ನೂ ಓದಿ : Redmi Note 11E: ಬಲವಾದ ವೈಶಿಷ್ಟ್ಯಗಳೊಂದಿಗೆ ರೆಡ್ಮಿ ಅಗ್ಗದ ಸ್ಮಾರ್ಟ್‌ಫೋನ್ ಬಿಡುಗಡೆ


7.5L ಮಿನಿ ಕಾರ್ ರೆಫ್ರಿಜರೇಟರ್ ಬೆಲೆ :
ಕಾರ್ ರೆಫ್ರಿಜರೇಟರ್ ಅನ್ನು ಫ್ಲಿಪ್‌ಕಾರ್ಟ್‌ನಿಂದ (Flipkart) ಖರೀದಿಸಬಹುದು. ಇದರ ಪ್ರಾರಂಭಿಕ ಬೆಲೆ 3,999, ರೂ. ಆದರೆ,  ಇದು ಫ್ಲಿಪ್‌ಕಾರ್ಟ್‌ನಲ್ಲಿ  2,999 ರೂ.ಗೆ ಲಭ್ಯವಿದೆ. ಇದು 7.5 ಲೀಟರ್‌ಗಳಲ್ಲಿ ಬರುತ್ತದೆ. (PortableF ridgep rice ). ಅಂದರೆ ನೀರಿನ ಬಾಟಲಿಗಳು, ತಂಪು ಪಾನೀಯಗಳಂತಹ ವಸ್ತುಗಳನ್ನು ಅದರಲ್ಲಿ ಇಡಬಹುದು. ಅದರಲ್ಲಿ ಹಣ್ಣುಗಳನ್ನೂ ಸುಲಭವಾಗಿ ಇಡಬಹುದು.


ಇದು ಉತ್ತಮ ಗುಣಮಟ್ಟದ ಎಬಿಎಸ್ ಮಟೀರಿಯಲ್ ಗಳಿಂದ ಮಾಡಲ್ಪಟ್ಟಿದೆ. ತಂಪಾಗಿಸುವಿಕೆಯು ಸುಮಾರು 50.0 ಡಿಗ್ರಿ ಫ್ಯಾರನ್ಹೀಟ್ಗೆ ಇಳಿಯಬಹುದು ಮತ್ತು ತಾಪಮಾನವು ಸುಮಾರು 149.0 ಡಿಗ್ರಿ ಫ್ಯಾರನ್ಹೀಟ್ಗೆ ತಲುಪಬಹುದು. ಇದರ ಉದ್ದ 57.1 ಇಂಚುಗಳು ಮತ್ತು ಆಯಾಮಗಳು: 12.6 x 7.1 x 11.8 ಇಂಚುಗಳು. 


ಇದನ್ನೂ ಓದಿ : ಅತ್ಯಂತ ಕಡಿಮೆ ದರದ 5G iPhone ಬೆಲೆ ಬಹಿರಂಗ , ನಂಬಲಾಸಾಧ್ಯವಾದ ಬೆಲೆಗೆ ಸಿಗಲಿದೆ ಈ smartphone


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.