ನವದೆಹಲಿ: Tecno Pova 2- ಇತ್ತೀಚಿನ ದಿನಗಳಲ್ಲಿ, ಬಳಕೆದಾರರಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆ ಬಹಳಷ್ಟು ಹೆಚ್ಚಾಗಿದೆ. ಮಾತ್ರವಲ್ಲ, ಬಹುತೇಕ ಜನರು ತಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್‌ಫೋನ್‌ನಲ್ಲಿಯೇ ಕಳೆಯುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಹೆಚ್ಚು ಬ್ಯಾಟರಿ ಸಾಮರ್ಥ್ಯವಿರುವ ಸ್ಮಾರ್ಟ್ ಫೋನ್ ನಿಮಗೆ ಉತ್ತಮ ಆಯ್ಕೆಯಾಗಿರುತ್ತದೆ. ಏಕೆಂದರೆ ಇದರಲ್ಲಿ ನೀವು ಮತ್ತೆ ಮತ್ತೆ ಚಾರ್ಜ್ ಮಾಡುವ ಅಗತ್ಯವಿಲ್ಲ. ಹೆಚ್ಚಿನ ಬ್ಯಾಟರಿ ಸಾಮರ್ಥ್ಯವಿರುವ ಸ್ಮಾರ್ಟ್ ಫೋನ್ ಅನ್ನು ಒಮ್ಮೆ ಚಾರ್ಜ್ ಮಾಡಿದ ನಂತರ, ನೀವು ಅದನ್ನು ದೀರ್ಘಕಾಲ ಬಳಸಬಹುದು. ಇಂತಹ ಪರಿಸ್ಥಿತಿಯಲ್ಲಿ, ಟೆಕ್ನೋ ಪೊವಾ 2 (Tecno Pova 2) ಇದಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. ಅತ್ಯಂತ ಕಡಿಮೆ ದರದಲ್ಲಿ ಲಭ್ಯವಾಗುವ ಈ ಸ್ಮಾರ್ಟ್‌ಫೋನ್‌ನಲ್ಲಿ, ನೀವು 7,000mAh ಬ್ಯಾಟರಿಯೊಂದಿಗೆ ಹಲವು ಉತ್ತಮ ಆಯ್ಕೆಗಳನ್ನು ಪಡೆಯುತ್ತೀರಿ.


COMMERCIAL BREAK
SCROLL TO CONTINUE READING

ಆಕರ್ಷಕ ಕೊಡುಗೆಯಲ್ಲಿ ಟೆಕ್ನೋ ಪೋವಾ 2:
ಟೆಕ್ನೋ ಪೊವಾ 2 ನಲ್ಲಿ ಲಭ್ಯವಿರುವ ಕೊಡುಗೆಗಳ ಬಗ್ಗೆ ಹೇಳುವುದಾದರೆ, ನೋ ಕಾಸ್ಟ್ ಇಎಂಐ ಆಯ್ಕೆಯೊಂದಿಗೆ ಅದನ್ನು ಖರೀದಿಸಲು ಅವಕಾಶವಿದೆ. ಇದಲ್ಲದೇ, ಸ್ಮಾರ್ಟ್ ಫೋನ್ ಖರೀದಿಯಲ್ಲಿ 10,200 ರೂ. ವರೆಗಿನ ಎಕ್ಸ್ಚೇಂಜ್ ಆಫರ್ ಗಳನ್ನು ಪಡೆಯಬಹುದು. HDFC ಕ್ರೆಡಿಟ್ ಕಾರ್ಡ್ ಬಳಸಿ 2,000 ರೂ.ಗಳ ಕ್ಯಾಶ್ ಬ್ಯಾಕ್ ಪಡೆಯಬಹುದು. ಇಂಡೂಸಿಂದ್ ಬ್ಯಾಂಕ್ (Indusind bank) ಕಾರ್ಡ್ ಮೇಲೆ 750 ರೂ.ಗಳ ತ್ವರಿತ ರಿಯಾಯಿತಿ ನೀಡಲಾಗುತ್ತಿದೆ. ಟೆಕ್ನೋ ಪೋವಾ 2 ಬೆಲೆಯನ್ನು (Tecno Pova 2 Price) ನೋಡಿದರೆ, ಅದರ 4GB + 64GB ಸ್ಟೋರೇಜ್ ಮಾದರಿಯ ಬೆಲೆ 10,999  ರೂ. ಆಗಿದೆ.


ಇದನ್ನೂ ಓದಿ- Red Magic 6S Pro: ಬರಲಿದೆ ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ ಸ್ಮಾರ್ಟ್‌ಫೋನ್‌, ಇದರ ವೈಶಿಷ್ಟ್ಯಗಳನ್ನು ತಿಳಿಯಿರಿ


ಟೆಕ್ನೋ ಪೋವಾ 2: ವಿಶೇಷಣಗಳು ಮತ್ತು ವೈಶಿಷ್ಟ್ಯಗಳು
ಟೆಕ್ನೋ ಪೋವಾ 2 (Tecno Pova 2) ರ ಪ್ರಮುಖ ಲಕ್ಷಣವೆಂದರೆ ಅದರ ಬ್ಯಾಟರಿ. ಇದು 7,000mAh ಬ್ಯಾಟರಿಯೊಂದಿಗೆ 18W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಈ ಬ್ಯಾಟರಿಯು ಒಂದೇ ಚಾರ್ಜ್ ನಲ್ಲಿ ಇಡೀ ದಿನ ಆರಾಮವಾಗಿ ಬಾಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆಂಡ್ರಾಯ್ಡ್ 11 OS ಆಧಾರಿತ ಈ ಸ್ಮಾರ್ಟ್ಫೋನ್ ಅನ್ನು MediaTek Helio G85 ಪ್ರೊಸೆಸರ್ ನಲ್ಲಿ ಪರಿಚಯಿಸಲಾಗಿದೆ. ಇದು 6.52-ಇಂಚಿನ ಫುಲ್ ಎಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಮೈಕ್ರೊ ಎಸ್‌ಡಿ ಕಾರ್ಡ್ ಸಹಾಯದಿಂದ ಇದರಲ್ಲಿ ನೀಡಲಾದ ಸ್ಟೋರೇಜ್ ಅನ್ನು ವಿಸ್ತರಿಸಬಹುದು ಎಂದು ಕಂಪನಿ ತಿಳಿಸಿದೆ.


ಇದನ್ನೂ ಓದಿ- ಪ್ಲೇ ಸ್ಟೋರ್‌ನಿಂದ ನಕಲಿ ಆಪ್‌ಗಳನ್ನು ನಿಷೇಧಿಸಿದ ಗೂಗಲ್


ಫೋಟೋಗ್ರಫಿಗಾಗಿ, ಟೆಕ್ನೋ ಪೋವಾ 2 ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದರ ಪ್ರಾಥಮಿಕ ಸೆನ್ಸಾರ್ 48MP ಆಗಿದ್ದು, 2MP ಮ್ಯಾಕ್ರೋ ಸೆನ್ಸರ್, 2MP ಡೆಪ್ತ್ ಸೆನ್ಸರ್ ಮತ್ತು 2MP AI ಸೆನ್ಸರ್ ಹೊಂದಿದೆ. ಫೋನಿನ ಮುಂಭಾಗದ ಕ್ಯಾಮರಾ 8MP ಆಗಿದ್ದು ಇದು AI ಬೆಂಬಲದೊಂದಿಗೆ ಬರುತ್ತದೆ. ಅತ್ಯುತ್ತಮ ಗೇಮಿಂಗ್ ಅನುಭವವನ್ನು ನೀಡಲು ಗೇಮ್ ಸ್ಪೇಸ್ 2.0 ಅನ್ನು ಈ ಫೋನ್‌ನಲ್ಲಿ ಬಳಸಲಾಗಿದೆ. ಇದು ಫೋನಿನ ಸಿಪಿಯು ಮತ್ತು ಜಿಪಿಯು ಶಕ್ತಿಯನ್ನು ಹೆಚ್ಚಿಸುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.