'ಪೋರ್ಟಬಲ್' ಫ್ಯಾನ್- ಮಿನಿ ಎಸಿ: ದೇಶದಲ್ಲಿ ಮುಂಗಾರು ಆಗಮನವಾಗಿದ್ದರೂ ದೇಶದ ಹಲವು ಭಾಗಗಳಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದೆ. ದಿನೇ ದಿನೇ ದಾಖಲೆ ಮಟ್ಟದಲ್ಲಿ ಹೆಚ್ಚಾಗುತ್ತಿರುವ ತಾಪಮಾನದಿಂದಾಗಿ ಕೇವಲ ಫ್ಯಾನ್ ಅನ್ನು ಬಳಸಿ ತಂಪಾದ ಹವಾ ಪಡೆಯುವುದು ಕಷ್ಟಸಾಧ್ಯ. ಆದರೆ, ಈ ಹಣದುಬ್ಬರದ ಜಗತ್ತಿನಲ್ಲಿ ಎಲ್ಲರಿಗೂ ಎಸಿ, ಕೂಲರ್ ಕೊಳ್ಳುವುದು ಸುಲಭದ ಮಾತಲ್ಲ. ಆದರೆ, 'ಪೋರ್ಟಬಲ್' ಫ್ಯಾನ್- ಮಿನಿ ಎಸಿ ನಿಮಗೆ ಪರಿಹಾರ ನೀಡಬಹುದು. ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿರುವ ಈ ಪೋರ್ಟಬಲ್ ಏರ್ ಕಂಡಿಷನರ್ ಅನ್ನು  ನೀವು ಸುಲಭವಾಗಿ ಎಲ್ಲಿ ಬೇಕಾದರೂ ಕೊಂಡೊಯ್ಯಬಹುದು ಎಂಬುದು ಇದರ ವಿಶೇಷತೆ.


COMMERCIAL BREAK
SCROLL TO CONTINUE READING

'ಪೋರ್ಟಬಲ್' ಫ್ಯಾನ್ -ಮಿನಿ ಎಸಿ ವೈಶಿಷ್ಟ್ಯಗಳು:
ಈಗ ನಾವು ನಿಮಗೆ ಹೇಳಲು ಹೊರಟಿರುವುದು ರೀಚಾರ್ಜ್ ಮಾಡಬಹುದಾದ ಪೋರ್ಟಬಲ್ ಫ್ಯಾನ್ ಆಗಿದೆ. ಈ ಕಡಿಮೆ ಶಕ್ತಿಯ ಫ್ಯಾನ್ ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ.  ಇದು ಏರ್ ಕಂಡಿಷನರ್ ನಂತೆ ಕಾರ್ಯನಿರ್ವಹಿಸುವುದರಿಂದ ಇಂದನ್ನು ಮಿನಿ ಎಸಿ ಎಂತಲೂ ಕರೆಯಲಾಗುತ್ತದೆ.


ಇದು ಹಲವು ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಂಡಿದೆ. 2200mAh ಬ್ಯಾಟರಿಯೊಂದಿಗೆ ಬರುವ 'ಪೋರ್ಟಬಲ್' ಫ್ಯಾನ್ ಅನ್ನು ಒಮ್ಮೆ ಫುಲ್ ಚಾರ್ಜ್ ಮಾಡಿದನ ನಂತರ ಸತತ  ಗಂಟೆಗಳ ಕಾಲ ಬಳಸಬಹುದು. ಮೂರು ಸ್ಪೀಡ್  ಮೋಡ್‌ಗಳನ್ನು ಹೊಂದಿರುವ ಈ ಫ್ಯಾನ್ ತುಂಬಾ ಚಿಕ್ಕದಾಗಿದ್ದು, ಎಲ್ಇಡಿ ದೀಪಗಲೊಂದಿಗೆ ಬರುತ್ತದೆ. ಇದನ್ನು ಯುಎಸ್‌ಬಿ ಪೋರ್ಟ್ ಮೂಲಕ ಚಾರ್ಜ್ ಮಾಡಬಹುದು ಮತ್ತು ನಿಮಗೆ ಅದರಲ್ಲಿ ಒಂದು ವರ್ಷದ ವಾರಂಟಿಯನ್ನು ಸಹ ನೀಡಲಾಗುತ್ತಿದೆ.


ಇದನ್ನೂ ಓದಿ- ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಲಿಕೇಶನ್‌ಗಳು ಲೋಕೇಶನ್ ಟ್ರ್ಯಾಕ್ ಮಾಡುವುದನ್ನು ಈ ರೀತಿ ನಿಲ್ಲಿಸಿ


ಲಭ್ಯತೆ:
ಈ 'ಪೋರ್ಟಬಲ್' ಫ್ಯಾನ್ ಅನ್ನು ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್‌ನಿಂದ ಖರೀದಿಸಬಹುದು. ಮೊದಲೇ ತಿಳಿಸಿದಂತೆ ನೀವು ಈ 'ಪೋರ್ಟಬಲ್' ಫ್ಯಾನ್ ಅನ್ನು ನೀವು ಸುಲಭವಾಗಿ ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಬಹುದು.  ನೀವು ಎಲ್ಲಿ ಬೇಕಾದರೂ ಬಳಸಬಹುದು. 


ಇದನ್ನೂ ಓದಿ- ಬಿಸಿಲಲ್ಲಿ ಚಾರ್ಜ್ ಆಗುವ ಸ್ಮಾರ್ಟ್ ವಾಚ್ ಬಿಡುಗಡೆ, ಇದರಂತಹ ವೈಶಿಷ್ಟ್ಯ ಬೇರೆ ವಾಚ್ ನಲ್ಲಿಲ್ಲ


ಬೆಲೆ:
ನೀವು ಈ ಪೋರ್ಟಬಲ್ ರೀಚಾರ್ಜ್ ಮಾಡಬಹುದಾದ ಎಲ್ಇಡಿ ಫ್ಯಾನ್ ಅನ್ನು ಕೇವಲ 200 ರೂ.ಗಳಿಗೆ ಖರೀದಿಸಬಹುದು. ವಾಸ್ತವವಾಗಿ, ಈ ಪೋರ್ಟಬಲ್ ರೀಚಾರ್ಜ್ ಮಾಡಬಹುದಾದ ಫ್ಯಾನ್‌ನ ಬೆಲೆ 499 ರೂಪಾಯಿಗಳು.  ಆದರೆ ನೀವು ಇದನ್ನು ಅಮೆಜಾನ್‌ನಿಂದ 60% ರಿಯಾಯಿತಿಯ ನಂತರ 199ರೂ.ಗಳಿಗೆ ಮನೆಗೆ ತರಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.