ಬೆಂಗಳೂರು : ವಾಷಿಂಗ್ ಮೆಷಿನ್‌ಗಳ ಖರೀದಿ ಮೇಲೆ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ.  6000 ರೂಪಾಯಿಗಿಂತ ಕಡಿಮೆ ಬೆಲೆಗೆ ಇಲ್ಲಿ ಗ್ರಾಹಕರು ವಾಷಿಂಗ್ ಮೆಷಿನ್ ಖರೀದಿಸಬಹುದಾಗಿದೆ. ಈ ವಾಷಿಂಗ್ ಮೆಷಿನ್ ಯಾವುದು ಮತ್ತು ಅದರ ವಿಶೇಷತೆ ಏನು ಎನ್ನುವುದನ್ನು ನೋಡೋಣ. 


COMMERCIAL BREAK
SCROLL TO CONTINUE READING

ವಾಷಿಂಗ್ ಮೆಷಿನ್ ಮತ್ತು ಅದರ ವಿಶೇಷತೆ : 
ಫ್ಲಿಪ್‌ಕಾರ್ಟ್‌ನಲ್ಲಿ ಆಫರ್ ಜೊತೆಗೆ ಮಾರಾಟಕ್ಕೆ ಲಭ್ಯವಿರುವ ವಾಷಿಂಗ್ ಮೆಷಿನ್ ಥಾಮ್ಸನ್ ಕಂಪನಿಯದ್ದಾಗಿದೆ. ಇದು ಶಕ್ತಿಶಾಲಿ ವಾಷಿಂಗ್ ಮೆಷಿನ್  ಆಗಿದ್ದು, ಇದರ ಮೇಲೆ ಬಂಪರ್ ಆಫರ್ ನೀಡಿರುವುದರಿಂದ ಬೇಡಿಕೆ ಕೂಡಾ ಹೆಚ್ಚಿದೆ. ಇದು ತುಂಬಾ ಶಕ್ತಿಯುತವಾದ ಮೋಟಾರ್ ಅನ್ನು ಹೊಂದಿದ್ದು  ಬಟ್ಟೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ. ಇದು  ಸೆಮಿ ಅಟೋಮ್ಯಾಟಿಕ್  ವಾಷಿಂಗ್ ಮೆಷಿನ್ ಆಗಿದ್ದು, ಗಾತ್ರದಲ್ಲಿ ಬಹಳ ಚಿಕ್ಕದಾಗಿದೆ. ಹಾಗಾಗಿ ಇದನ್ನು ಇಡಲು ಹೆಚ್ಚಿನ ಸ್ಥಳಾವಕಾಶ ಕೂಡಾ ಬೇಕಾಗುವುದಿಲ್ಲ.  


ಇದನ್ನೂ ಓದಿ : ಹೋಂಡಾ ಆಕ್ಟಿವಾವನ್ನು ಮೀರಿಸುತ್ತಿದೆ ಈ ಎಲೆಕ್ಟ್ರಿಕ್ ಸ್ಕೂಟರ್ ಗಳು .! ಬೆಲೆ ಕೂಡಾ ಭಾರೀ ಕಡಿಮೆ


ವಾಷಿಂಗ್ ಮೆಷಿನ್‌ನ ಬೆಲೆ : 
ಈ ವಾಷಿಂಗ್ ಮೆಷಿನ್‌ನ ಬೆಲೆ 7,999 ರೂಪಾಯಿ. ಆದರೆ ಹೊಸ ವರ್ಷದ ಸಂದರ್ಭದಲ್ಲಿ, ಈ  ಮೆಷಿನ್ ಮೇಲೆ ಫ್ಲಿಪ್‌ಕಾರ್ಟ್‌ನಲ್ಲಿ 31% ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಮೂಲಕ ಗ್ರಾಹಕರು ಇದನ್ನು ಕೇವಲ 5490 ರೂಪಾಯಿಗೆ ಖರೀದಿಸಬಹುದು.  


ವಾಷಿಂಗ್ ಮೆಷಿನ್ ವಿಶೇಷತೆಯ ಬಗ್ಗೆ ಹೇಳುವುದಾದರೆ, ಇದರಲ್ಲಿ ಒಂದೇ ಚೇಂಬರ್ ಇರಲಿದೆ. ಅದರಲ್ಲಿ ಸುಲಭವಾಗಿ ಬಟ್ಟೆಗಳನ್ನು ತೊಳೆಯಬಹುದು. ಸಾಮಾನ್ಯವಾಗಿ, ವಾಷಿಂಗ್ ಮೆಷಿನ್‌ ಬಗ್ಗೆ ಜನರಿಗಿರುವ ದೂರು ಎಂದರೆ, ಬಟ್ಟೆಗಳು ಹಾಳಾಗುತ್ತವೆ ಎನ್ನುವುದು.  ಆದರೆ ಈ ವಾಷಿಂಗ್ ಮೆಷಿನ್‌ನಲ್ಲಿ ಅಂತಹ ಯಾವುದೇ ಸಮಸ್ಯೆ ಕಂಡು ಬರುವುದಿಲ್ಲ ಎಂದು ಹೇಳಲಾಗುತ್ತದೆ.  ಅಲ್ಲದೆ ಬಟ್ಟೆ ಒಗೆಯಲು ಇದು ಅತ್ಯಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತದೆ. ಹೊಸ ವರ್ಷದ ಆರಂಭದಲ್ಲಿ ಹೊಸ ವಾಶಿಂಗ್ ಮೆಷಿನ್ ತೆಗೆದುಕೊಳ್ಳಬೇಕು  ಎಂದಿದ್ದರೆ ಇದು ಉತ್ತಮವಾದ ಆಯ್ಕೆಯಾಗಿರಲಿದೆ. 
 
ಇದನ್ನೂ ಓದಿ : Jio, Airtel ಪ್ಲಾನ್‌ಗಳ ಬೆಲೆ ಏರಿಕೆ! ಬಳಕೆದಾರರಿಗೆ ಬಿಗ್‌ ಶಾಕ್‌


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.