Chandrayaan 3: ಚಂದ್ರಯಾನ್ 3 ಉಡಾವಣೆ ದಿನಾಂಕಕ್ಕೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ಪ್ರಕಟ
Chandrayaan 3: ಚಂದ್ರಯಾನ 3 ಭಾರತದ ಮಹತ್ವಾಕಾಂಕ್ಷೆಯ ಮೂನ್ ಮಿಷನ್‌ನ ಮೂರನೇ ಬಾಹ್ಯಾಕಾಶ ನೌಕೆಯಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಂದರೆ ಇಸ್ರೋ ಇದೀಗ ತನ್ನ ಈ ನೌಕೆಯ ಉಡಾವಣೆ ದಿನಾಂಕದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದೆ.
Chandrayaan 3 Launch: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಅನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂತಿಮ ಹಂತದಲ್ಲಿದೆ. ಯುಎನ್ ರಾವ್ ಉಪಗ್ರಹ ಕೇಂದ್ರದಿಂದ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಗುವುದು ಮತ್ತು ಅದು ಯಾವಾಗ ಸಂಭವಿಸಲಿದೆ ಎಂಬುದು ಇದೀಗ ತಿಳಿದುಬಂದಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಅನ್ನು ಇಳಿಸುವ ಯೋಜನೆ ಇದೆ. ಲ್ಯಾಂಡಿಂಗ್ ಸೈಟ್‌ನ ಸುತ್ತಮುತ್ತಲಿನ ಚಂದ್ರನ ಮೇಲ್ಮೈಯನ್ನು ಅಧ್ಯಯನ ಮಾಡಲು ಇದು ವೈಜ್ಞಾನಿಕ ಉಪಕರಣಗಳನ್ನು ತೆಗೆದುಕೊಂಡು ಹೋಗಲಿದೆ.
ಬೆಂಗಳೂರು ಮೂಲದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ಈ ಕುರಿತು ಮಾಹಿತೀಯನ್ನು ನೀಡಿದ್ದು , ಎಲ್ಲವೂ ಅಂದುಕೊಂಡಂತೆ ನಡೆದರೆ, ಜುಲೈ ಎರಡನೇ ವಾರದಲ್ಲಿ ಚಂದ್ರಯಾನ-3 ಅನ್ನು ಉಡಾವಣೆ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಉಡಾವಣೆಗೆ ಅವಶ್ಯಕ ಅಗತ್ಯ ಪರೀಕ್ಷೆಗಳು ಪೂರ್ಣಗೊಂಡಿವೆ
ಈ ವರ್ಷದ ಮಾರ್ಚ್‌ನಲ್ಲಿ ಇಸ್ರೋ ಚಂದ್ರಯಾನ-3 ಉಡಾವಣೆಗೆ ಸಂಬಂಧಿಸಿದ ಅಗತ್ಯ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂದ್ರಯಾನ-3 ಮಿಷನ್‌ನ ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಹಂತಕ್ಕೆ ಶಕ್ತಿ ತುಂಬುವ ಸಿಇ-20 ಕ್ರಯೋಜೆನಿಕ್ ಎಂಜಿನ್‌ನ ಹಾರಾಟ ಸ್ವೀಕಾರ ಶಾಖ ಪರೀಕ್ಷೆಯೂ ಯಶಸ್ವಿಯಾಗಿದೆ. ಇದಕ್ಕೂ ಮೊದಲು, ಲ್ಯಾಂಡರ್‌ನ ಪ್ರಮುಖ ಪರೀಕ್ಷಾ ಇಎಂಐ/ಇಎಂಸಿ ಕೂಡ ಯಶಸ್ವಿಯಾಗಿ ಪೂರ್ಣಗೊಂಡಿತು.
ಚಂದ್ರಯಾನ-3 ನೌಕೆ ಭಾರತದ ಚಂದ್ರಯಾನ ಯೋಜನೆಯ ಪ್ರಮುಖ ಭಾಗವಾಗಿದೆ. ಇದು ಚಂದ್ರಯಾನ 1 ಮತ್ತು ಚಂದ್ರಯಾನ 2 ರ ಮುಂದಿನ ಭಾಗವಾಗಿದ್ದು, ಇದು ಚಂದ್ರನ ಮೇಲ್ಮೈಯಲ್ಲಿ ಇಳಿದು ಅದನ್ನು ಪರೀಕ್ಷಿಸಲಿದೆ. ಇದು ಚಂದ್ರಯಾನ-2 ರಂತೆಯೇ ಇರಲಿದೆ. ಇದು ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್ ಅನ್ನು ಹೊಂದಿರಲಿದೆ. ಮೂನ್ ಮಿಷನ್ ಕಾರ್ಯಕ್ರಮದ ಮೂರನೇ ಬಾಹ್ಯಾಕಾಶ ನೌಕೆಯು ಭಾರತದ ಅತ್ಯಂತ ಭಾರವಾದ ಉಡಾವಣಾ ವಾಹನ GSLV Mk III ನಿಂದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ.
ಇದನ್ನೂ ಓದಿ-Elon Musk ಭಾರತ ಪ್ರೀತಿಗೆ ಮುಬಿಬಿದ್ದ ನೆಟ್ಟಿಗರು, ಸಕತ್ ರೀಟ್ವೀಟ್ ಮಾಡುತ್ತಿದ್ದಾರೆ
ಇಸ್ರೋ ಸಿದ್ಧತೆ ಹೇಗಿದೆ
ಈ ಕುರಿತು ಇತ್ತೀಚೆಗಷ್ಟೇ ಇಸ್ರೋ ಮುಖ್ಯಸ್ಥರು ಮಾಹಿತಿ ನೀಡಿದ್ದು, ಚಂದ್ರಯಾನ-3 ರ ಪ್ರಾಥಮಿಕ ಉದ್ದೇಶವು ಪರಿಪೂರ್ಣ ಲ್ಯಾಂಡಿಂಗ್ ಅನ್ನು ಹೊಂದುವುದಾಗಿದೆ. ಅದಕ್ಕಾಗಿ ಹೊಸ ಪರಿಕರಗಳನ್ನು ನಿರ್ಮಿಸುವುದು, ಉತ್ತಮ ಅಲ್ಗಾರಿದಮ್‌ಗಳನ್ನು ನಿರ್ಮಿಸುವುದು ಮತ್ತು ವೈಫಲ್ಯದ ಮೋಡ್‌ಗಳನ್ನು ನೋಡಿಕೊಳ್ಳುವುದು ಸೇರಿದಂತೆ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ