ನೀವು WhatsApp ಬಳಸುತ್ತೀರಾ? ಆಗಿದ್ರೆ ಈ ಸೆಟ್ಟಿಂಗ್‌ಗಳನ್ನು ಈಗಲೇ ಬದಲಾಯಿಸಿ..!
ವೆಬ್‌ಸೈಟ್‌ಗಳು ನಮಗೆ ಹಲವು ರೀತಿಯಲ್ಲಿ ಸಹಾಯಕವಾಗಿದೆ, ಆದರೂ, ಇಂಟರ್ನೆಟ್ ಮೂಲಕ ವಿವಿಧ ಹಗರಣಗಳು ನಡೆಯುತ್ತವೆ. ವಾಟ್ಸಾಪ್ ಒಂದು ಜನಪ್ರಿಯ ಅಪ್ಲಿಕೇಶನ್ ಆಗಿದ್ದು, ಲಕ್ಷಾಂತರ ಜನರು ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ಅಲ್ಲದೆ, ವಾಟ್ಸಾಪ್‌ನಲ್ಲಿಯೂ ಸಹ ಹ್ಯಾಕರ್ಗಳು ತಮ್ಮ ಕೈಚಳ ತೋರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ.
WhatsApp Hack : ವೆಬ್‌ಸೈಟ್‌ಗಳು ನಮಗೆ ಹಲವು ರೀತಿಯಲ್ಲಿ ಸಹಾಯಕವಾಗಿದೆ, ಆದರೂ, ಇಂಟರ್ನೆಟ್ ಮೂಲಕ ವಿವಿಧ ಹಗರಣಗಳು ನಡೆಯುತ್ತವೆ. ವಾಟ್ಸಾಪ್ ಒಂದು ಜನಪ್ರಿಯ ಅಪ್ಲಿಕೇಶನ್ ಆಗಿದ್ದು, ಲಕ್ಷಾಂತರ ಜನರು ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದಾರೆ. ಅಲ್ಲದೆ, ವಾಟ್ಸಾಪ್‌ನಲ್ಲಿಯೂ ಸಹ ಹ್ಯಾಕರ್ಗಳು ತಮ್ಮ ಕೈಚಳ ತೋರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಹಲವು ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ.
ಇನ್ನು ವಾಟ್ಸಾಪ್‌ನ್ನು ಹ್ಯಾಕರ್ಸ್‌ಗಳಿಂದ ರಕ್ಷಿಸಲು ಸೈಬರ್ ಸೆಕ್ಯುರಿಟಿ ಅಧಿಕಾರಿಗಳು ವಾಟ್ಸಾಪ್ ಬಳಕೆದಾರರಿಗೆ ಕೆಲವೊಂದು ಭದ್ರತಾ ವೈಶಿಷ್ಟ್ಯಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ. ವಾಟ್ಸಾಪ್‌ನಲ್ಲಿನ ಯಾವುದೇ ವಂಚನೆಗಳಿಂದ ಸುರಕ್ಷಿತವಾಗಿರಲು ನೀವು ಮಾಡಬೇಕಾದ ಪ್ರಮುಖ ವೈಶಿಷ್ಟ್ಯಗಳಲ್ಲಿ ಎರಡು-ಹಂತದ ಪರಿಶೀಲನೆಯು ಒಂದು, ಇದನ್ನು ಮಾಡುವುದರಿಂದ ನೀವು ವಂಚನೆಗೊಳಗಾಗುವ ಸಾಧ್ಯತೆಗಳು ತುಂಬಾ ಕಡಿಮೆ.
WhatsApp ನಲ್ಲಿ ಎರಡು ಹಂತದ ಪರಿಶೀಲನೆ ಮಾಡುವುದು ಹೇಗೆ..?
ಮೊದಲು ನೀವು WhatsApp ಸೆಟ್ಟಿಂಗ್‌ಗಳನ್ನು ತೆರೆಯಬೇಕು.
ನಂತರ Account ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Two-step verification ಮೇಲೆ ಕ್ಲಿಕ್ ಮಾಡಿ.
ಅದನ್ನು ಸಕ್ರಿಯಗೊಳಿಸಿದ ನಂತರ, ನಿಮ್ಮ ಆಯ್ಕೆಯ 6 ಅಂಕಿಯ ಪಿನ್ ಸಂಖ್ಯೆಯನ್ನು ನಮೂದಿಸಿ.
ನಿಮ್ಮ ಸಕ್ರಿಯ ಇಮೇಲ್ ವಿಳಾಸವನ್ನು ಸೇರಿಸಿ. ನೀವು ಇಮೇಲ್ ವಿಳಾಸವನ್ನು ಸೇರಿಸಲು ಬಯಸದಿದ್ದರೆ ನಂತರ ಸ್ಕಿಪ್ ಕ್ಲಿಕ್ ಮಾಡಿ.
ಇಮೇಲ್ ವಿಳಾಸವನ್ನು ದೃಢೀಕರಿಸಿ ಮತ್ತು 'ಉಳಿಸು' ಅಥವಾ 'ಮುಗಿದಿದೆ' ಕ್ಲಿಕ್ ಮಾಡಿ.
ಹ್ಯಾಕರ್‌ಗಳು ನಿಮ್ಮ ಖಾತೆಯನ್ನು ಕದಿಯುವುದನ್ನು ತಡೆಯಲು ಇದು ರಕ್ಷಾಕವಚದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಸೈಬರ್ ಸೆಕ್ಯುರಿಟಿ ಅಧಿಕಾರಿಗಳು ಈ ಎರಡು-ಹಂತದ ಪರಿಶೀಲನೆ ಪ್ರಕ್ರಿಯೆಯನ್ನು ಬೈಪಾಸ್ ಮಾಡಲು ಸಲಹೆ ನೀಡುತ್ತಾರೆ. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಆಗಾಗ್ಗೆ Update ಮಾಡುತ್ತಿರಿ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.