AI Tool: ಇತ್ತೀಚಿನ ದಿನಗಳಲ್ಲಿ ನೀವು ಗೂಗಲ್ ಅನ್ನು ಬಳಸದೆ ಇರುವ ಯಾವುದಾದರೊಂದು ದಿನ ಇರುವುದು ನಿಮಗೆ ನೆಮಪಿನಲ್ಲಿದೆಯಾ? ಹೌದು, ನಾವು ಯಾವಾಗಲೂ ದಿನನಿತ್ಯ Google ಹುಡುಕಾಟದಲ್ಲಿ ಯಾವುದಾದರೊಂದು ಸಂಗತಿಯ ಮಾಹಿತಿಯನ್ನು ಹುಡುಕುತ್ತಿರುತ್ತೇವೆ. ನಮಗೆ ಅಗತ್ಯವಿರುವ ಮಾಹಿತಿಯನ್ನು ತಿಳಿಸಲು ಗೂಗಲ್ ಕಾರ್ಯನಿರ್ವಹಿಸುತ್ತದೆ ಮತ್ತು ಅದು ನಮಗೆ ಕೆಲವೇ ಸೆಕೆಂಡುಗಳಲ್ಲಿ ಮಾಹಿತಿಯನ್ನು ನಮ್ಮ ಮುಂದೆ ಇಡುತ್ತದೆ. ಜನರು ಈಗ ಇದನ್ನು ಹಳೆಯ ತಂತ್ರಜ್ಞಾನ ಎಂದು ಕರೆಯಲು ಪ್ರಾರಂಭಿಸಿದ್ದಾರೆ. ಇದರ ಹಿಂದಿರುವ ಕಾರಣವೂ ವಿಶೇಷವಾಗಿದೆ. ವಾಸ್ತವವಾಗಿ, ಚಾಟ್‌ಜಿಪಿಟಿ ಹೆಸರಿನ ಸಾಫ್ಟ್‌ವೇರ್‌ನ ಚರ್ಚೆಯು ಮಾರುಕಟ್ಟೆಯಲ್ಲಿ ತೀವ್ರಗೊಂಡಿದೆ ಮತ್ತು ಜನರು ಅದನ್ನು ಗೂಗಲ್‌ಗಿಂತ ಉತ್ತಮವಾಗಿ ಹೇಳುತ್ತಿದ್ದಾರೆ. ಈ ಹೊಸ ಸಾಫ್ಟ್‌ವೇರ್‌ನಿಂದಾಗಿ, ಗೂಗಲ್‌ನ ಮೇಲೆ ಅಪಾಯದ ಕಾರ್ಮೋಡಗಳು ಸುಳಿದಾಡುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ. ಈ ಸಾಫ್ಟ್‌ವೇರ್ ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿ ಕಾರ್ಯನಿರ್ವಹಿಸುತ್ತದೆ ಮತ್ತು ಮಾನವನ ಪರವಾಗಿ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತದೆ.


COMMERCIAL BREAK
SCROLL TO CONTINUE READING

ChatGPT ಎಂದರೇನು
ChatGPT ಎಂದರೆ ಜನರೇಟಿವ್ ಪ್ರಿ ಟ್ರೈನ್ ಸಾಫ್ಟ್‌ವೇರ್ ಅಂದರೆ AI ಸಾಫ್ಟ್‌ವೇರ್ ಮತ್ತು ಜನರ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಇದರಲ್ಲಿ ಹೊಸದೇನಿದೆ ಎಂದು ನೀವು ಯೋಚಿಸುತ್ತಿರಬಹುದು, ಹಾಗಾದರೆ ಈ ಸಾಫ್ಟ್‌ವೇರ್ ನಿಮ್ಮ ಪ್ರಶ್ನೆಗಳಿಗೆ ಮನುಷ್ಯನಂತೆ ಚಿಂತನಶೀಲವಾಗಿ ಉತ್ತರಿಸುತ್ತದೆ ಮತ್ತು ನೀವು ಯಾಂತ್ರಿಕ ಉತ್ತರವನ್ನು ಪಡೆಯುತ್ತಿರುವಿರಿ ಎಂದು ನಿಮಗೆ ಅನಿಸುವುದಿಲ್ಲ. ಈ ಉತ್ತರವು ಮನುಷ್ಯ ನೀಡುವ ಉತ್ತರದಂತೆಯೇ ಇರುತ್ತದೆ. ಈ ಕಾರಣಕ್ಕಾಗಿಯೇ ಈ ಸಾಫ್ಟ್‌ವೇರ್‌ನ ಚರ್ಚೆಯು ಮಾರುಕಟ್ಟೆಯಲ್ಲಿ ವೇಗವಾಗಿದ್ದು, ಇನ್ನು ಮುಂದೆ ಜನರು ಚಾಟ್ ಜೆಪಿಟಿಯನ್ನು ಗೂಗಲ್‌ಗೆ ಬೆದರಿಕೆ ಎಂದು ಕರೆಯುತ್ತಿದ್ದಾರೆ. ನಿರಂತರವಾಗಿ ಬರುತ್ತಿರುವ ಜನರ ಫೀಡ್ ಬ್ಯಾಕ್ ನೋಡಿದರೆ ಗೂಗಲ್ ಅನ್ನು ಬಿಟ್ಟು ಇದು ಮುಂದಕ್ಕೆ ಸಾಗಲಿದೆ ಎಂಬುದು ಜನರ ಅಭಿಪಾಯವಾಗಿದೆ. ಇಂದು ನಾವು ಈ ಸಾಫ್ಟ್‌ವೇರ್‌ನ ವೈಶಿಷ್ಟ್ಯಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದು, ಇದರಿಂದ ನೀವೂ ಗೂಗಲ್ ಗಿಂತಲೂ ಮುಂದಿನ ಜನರೇಶನ್ ಹುಡುಕಾಟವನ್ನು ನಡೆಸಬಹುದು.

ಅಳೆದು-ತೂಗಿ ಉತ್ತರ ನೀಡುತ್ತದೆ ಈ ಸಾಫ್ಟ್ ವೇರ್
ಚಾಟ್ GPT ಬಳಕೆದಾರರ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಆದರೆ ಇದು ಯಾಂತ್ರಿಕ ಉತ್ತರವಾಗಿರುವುದಿಲ್ಲ. ಅಂದರೆ, ದೋಷಕ್ಕೆ ಯಾವುದೇ ಆಸ್ಪದ ಇಲ್ಲದ ಮಾನವ ತರಹದ ಚಿಂತನೆಯ ಉತ್ತರದಂತೆ ಅದರ ಉತ್ತರ ಇರಲಿದೆ. ಸಾಮಾನ್ಯವಾಗಿ, ನೀವು Google ಅನ್ನು ಹುಡುಕಿದಾಗ, ನೀವು ಅನೇಕ ಉತ್ತರಗಳನ್ನು ಪಡೆಯುತ್ತೀರಿ, ಅವುಗಳಲ್ಲಿ ಕೆಲವು ನಿಮಗೆ ಉಪಯುಕ್ತವಾಗಿರುತ್ತವೆ ಮತ್ತು ಕೆಲವು ಯಾವುದೇ ಪ್ರಯೋಜನವಿರುವುದಿಲ್ಲ. ಆದರೆ ಹೊಸ ಸಾಫ್ಟ್ವೇರ್ ನಿಂದ ಅಂತಹ ಸಮಸ್ಯೆ ಸಂಭವಿಸುವುದಿಲ್ಲ ಎನ್ನಲಾಗುತ್ತಿದೆ.


ಇದನ್ನೂ ಓದಿ-Instant Bucket Water Heater: ಚಳಿಗಾಲದಲ್ಲಿ ನೀವೂ ಮನೆಗೆ ತನ್ನಿ ಅದ್ಭುತ ಬಕೆಟ್, ತಣ್ಣೀರು ಹಾಕುತ್ತಲೇ ಬಿಸಿಯಾಗುತ್ತದೆ

ಈ ಕೆಲಸ ಮಾಡುವುದರಲ್ಲಿ ಮುಂಚೂಣಿಯಲ್ಲಿರಲಿದೆ
ಈ ಸಾಫ್ಟ್‌ವೇರ್ ಕೆಲವು ಉದ್ಯೋಗಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ವಾಸ್ತವದಲ್ಲಿ, ಈ ಸಾಫ್ಟ್‌ವೇರ್ ಮಾನವ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಮನುಷ್ಯನಂತೆ ಉತ್ತರಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಾಲ್ ಸೆಂಟರ್ ಕೆಲಸ ಮಾಡುವವರ ಮತ್ತು ಕಂಟೆಂಟ್ ರೈಟಿಂಗ್ ಮಾಡುವವರ ಉದ್ಯೋಗಗಳಿಗೆ ಇದು ಧಕ್ಕೆ ತರುವ ಸಾಧ್ಯತೆ ಇದೆ.


ಇದನ್ನೂ ಓದಿ-WhatsApp ನ ಈ ಅದ್ಭುತ ವೈಶಿಷ್ಟ್ಯ ಶೀಘ್ರದಲ್ಲಿಯೇ ಬಿಡುಗಡೆ, ಬಳಕೆದಾರರಿಗೇನು ಲಾಭ?


ಪ್ರಶ್ನೆಗಳಿಗೆ ತ್ವರಿತವಾಗಿ ಉತ್ತರಿಸುತ್ತದೆ
ChatGPT ನಿಮ್ಮ ಪ್ರಶ್ನೆಗಳಿಗೆ ಅತ್ಯಂತ ವೇಗವಾಗಿ ಉತ್ತರಿಸುತ್ತದೆ ಮತ್ತು ಭವಿಷ್ಯದಲ್ಲಿ ಇದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೂ ನೀವು ನೋಡಬಹುದು.  ಇದು ಉತ್ತಮ ಸಾಧನ ಎಂದು ಹೇಳಲಾಗುತ್ತಿದೆ ಮತ್ತು ಈ ಕಾರಣಕ್ಕಾಗಿ Google ಅಪಾಯಕ್ಕೆ ಒಳಗಾಗಬಹುದು ಎನ್ನಲಾಗುತ್ತಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.