ಬೆಂಗಳೂರು : ಹೈದರಾಬಾದ್ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿ ಪ್ಯೂರ್ ಇವಿ ಭಾರತದಲ್ಲಿ ತನ್ನ ಹೊಸ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪ್ಯೂರ್ ಇವಿ ಇಕೋಡ್ರೈಫ್ಟ್ ಅನ್ನು ಬಿಡುಗಡೆ ಮಾಡಿದೆ. ವಿಶೇಷವೆಂದರೆ ಇದು ಭಾರತದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಆಗಿದೆ. ಕಂಪನಿಯು ಅದರ ಬೆಲೆಯನ್ನು 99,999 ರೂ. ಎಂದು ಹೇಳಿದೆ. ಈ ಬೈಕ್ ಕೆಂಪು, ಕಪ್ಪು, ಬೂದು ಮತ್ತು ನೀಲಿ ಹೀಗೆ ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. 


COMMERCIAL BREAK
SCROLL TO CONTINUE READING

ಬ್ಯಾಟರಿ ಮತ್ತು ಶ್ರೇಣಿ :
ಕಂಪನಿಯ ಪ್ರಕಾರ, Pure EV eco Dryft ಎಲೆಕ್ಟ್ರಿಕ್ ಬೈಕು ಪೂರ್ಣ ಚಾರ್ಜ್‌ನಲ್ಲಿ 135 ಕಿಮೀ ವರೆಗೆ ಕ್ರಮಿಸಬಹುದು. ಇದು 3 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಹೈದರಾಬಾದ್‌ನಲ್ಲಿರುವ ಕಂಪನಿಯ  ಮ್ಯಾನಿ ಫೆಕ್ಚರಿಂಗ್ ಸೆಂಟರ್ ನಲ್ಲಿ ಈ ಬೈಕ್ ಅನ್ನು ಡೆವೆಲಪ್ ಮಾಡಲಾಗಿದೆ. ಬೈಕ್‌ನಲ್ಲಿ ಮೂರು ಡ್ರೈವಿಂಗ್ ಮೋಡ್‌ಗಳನ್ನು ಕೂಡಾ ನೀಡಲಾಗಿದೆ. ಇದರ ಗರಿಷ್ಠ ವೇಗ ಗಂಟೆಗೆ 75 ಕಿ.ಮೀ. 


ಇದನ್ನೂ ಓದಿ : ಕೇವಲ 9000 ರೂಪಾಯಿಗೆ ಮನೆಗೆ ತನ್ನಿ ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ !


ಹೇಗಿದೆ ಗೊತ್ತಾ ವಿನ್ಯಾಸ : 
ಈ ಬೈಕ್ ನ ವಿನ್ಯಾಸದ ಬಗ್ಗೆ ಹೇಳುವುದಾದರೆ,  EcoDryft  ಬೇಸಿಕ್ ಕಮ್ಯೂಟ್ ಮೋಟಾರ್ ಸೈಕಲ್ ನಂತೆ ಇದೆ. ಇದು  ಅಂಗ್ಯುಲರ್   ಹೆಡ್‌ಲ್ಯಾಂಪ್‌ಗಳು, 5-ಸ್ಪೋಕ್ ಅಲಾಯ್ ವ್ಹೀಲ್, ಸಿಂಗಲ್-ಪೀಸ್ ಸೀಟ್‌ಗಳನ್ನು  ನೀಡಲಾಗಿದೆ. ಇದು ಸ್ಮಾರ್ಟ್ ಲಾಕ್ ಮೂಲಕ   anti theft ವೈಶಿಷ್ಟ್ಯವನ್ನು ಸಹ ಹೊಂದಿದೆ. ಸದ್ಯಕ್ಕೆ, ಕಂಪನಿಯು ಭಾರತದಾದ್ಯಂತ 100 ಕ್ಕೂ ಹೆಚ್ಚು ಡೀಲರ್‌ಶಿಪ್‌ಗಳನ್ನು ಹೊಂದಿದೆ. 


ಕಂಪನಿಯು ಈಗಾಗಲೇ eTryst 350 ಎಂಬ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಮಾರಾಟ ಮಾಡುತ್ತಿದೆ. ಈ ಬೈಕ್‌ನಲ್ಲಿ 3.5 kWh ಬ್ಯಾಟರಿ ಪ್ಯಾಕ್ ಲಭ್ಯವಿದೆ. ಇದು ಸಂಪೂರ್ಣ ಚಾರ್ಜ್‌ನಲ್ಲಿ 140KM ವ್ಯಾಪ್ತಿಯನ್ನು ನೀಡುತ್ತದೆ. ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು 6 ಗಂಟೆ ತೆಗೆದುಕೊಳ್ಳುತ್ತದೆ.


ಇದನ್ನೂ ಓದಿ :  ಇನ್ನೆರಡು ವರ್ಷಗಳಲ್ಲಿ ಗೂಗಲ್ ಸರ್ವನಾಶ...! ಕಾರಣವೇನು ಗೊತ್ತೇ?


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.