Cheapest High Speed Internet Plan - ಭಾರತದ ಹಲವಾರು ರಾಜ್ಯಗಳಲ್ಲಿ ಮುಂಚೂಣಿಯಲ್ಲಿರುವ ACT ಫೈಬರ್ ನೆಟ್, ತನ್ನ ಬಳಕೆದಾರರಿಗೆ ಸೂಪರ್ ಹೈಸ್ಪೀಡ್ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತದೆ. ನೀವು ಆಕ್ಟ್ ನಲ್ಲಿ 1 GBPS ವರೆಗೆ ಇಂಟರ್ನೆಟ್ ವೇಗ ಹೊಂದಿರುವ ಪ್ಲಾನ್ ಅನ್ನು ಖರೀದಿಸಬಹುದು. ಆದರೆ, ಕಂಪನಿ ಪ್ರಸ್ತುತ ದೇಶದ ಎಲ್ಲಾ ಭಾಗಗಳಲ್ಲಿ ಕಾರ್ಯನಿರತವಾಗಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಕೇವಲ ಆಯ್ದ ನಗರಗಳಲ್ಲಿ ಮಾತ್ರ ತನ್ನ ಸೇವೆಯನ್ನು ಒದಗಿಸುತ್ತದೆ. ಈ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಬೆಂಗಳೂರಿನಲ್ಲಿ ಆಕ್ಟ್ ಫೈಬರ್ ನೆಟ್ ಒಂದು ಇನ್ಕ್ರೆಡಿಬಲ್ ಬ್ರಾಡ್ ಬ್ಯಾಂಡ್ ಪ್ಲಾನ್ ಒದಗಿಸುತ್ತದೆ, ಇದರಲ್ಲಿ 400 ಎಂಬಿಪಿಎಸ್ ವರೆಗೆ ವೇಗ ಸಿಗುತ್ತದೆ. ನೀವೂ ಕೂಡ ಒಂದು ಉತ್ತಮ ವೇಗದ ಇಂಟರ್ನೆಟ್ ಪ್ಲಾನ್ ಹುಡುಕಾಟದಲ್ಲಿದ್ದರೆ, ಈ ಯೋಜನೆಯ ಬಗ್ಗೆ ನೀವು ಖಂಡಿತವಾಗಿ ತಿಳಿದುಕೊಳ್ಳಲೇಬೇಕು.


COMMERCIAL BREAK
SCROLL TO CONTINUE READING

ಈ ಪ್ಲಾನ್ ವಿಶೇಷತೆ ಏನು?
ACT ಫೈಬರ್ನೆಟ್ ತನ್ನ 400 Mbps ಯೋಜನೆಯನ್ನು ಬೆಂಗಳೂರಿನಲ್ಲಿ ರೂ 1,999 ಕ್ಕೆ ನೀಡುತ್ತದೆ. ಇಲ್ಲಿ ಉಲ್ಲೇಖಿಸಲಾದ ಬೆಲೆಯು ತೆರಿಗೆಯನ್ನು ಒಳಗೊಂಡಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಕಂಪನಿಯು ಈ ಯೋಜನೆಯೊಂದಿಗೆ ಅನಿಯಮಿತ ಡೇಟಾವನ್ನು ನೀಡುತ್ತದೆ, ಆದರೆ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ವ್ಯವಹಾರವನ್ನು ನಡೆಸುವವವರಿಗೆ ತಿಳಿದಿರುವ ಹಾಗೆ ಭಾರತದಲ್ಲಿ ತಿಂಗಳ ಡೇಟಾದಲ್ಲಿ FUP ಮಿತಿ ಇದ್ದೆ ಇರುತ್ತದೆ. ಬಳಕೆದಾರರು ತಿಂಗಳಿಗೆ 3300GB ಅಥವಾ 3.3TB ವರೆಗೆ ಹೆಚ್ಚಿನ ವೇಗದ ಡೇಟಾವನ್ನು ಪಡೆಯಬಹುದು, ಅದರ ನಂತರ ಇಂಟರ್ನೆಟ್ ವೇಗವು 2 Mbps ಗೆ ಇಳಿಯುತ್ತದೆ.


ಇದನ್ನೂ ಓದಿ-ದೇಶದಲ್ಲಿ 5G ಇಂಟರ್ನೆಟ್‌ ಸೇವೆ ಆರಂಭ: ಯಾವಾಗ? ಇಲ್ಲಿದೆ ಮಾಹಿತಿ


ನೀವು ಒಟ್ಟಿಗೆ ಅನೇಕ ಪ್ರಯೋಜನಗಳನ್ನು ಪಡೆಯುತ್ತೀರಿ
ಆದರೆ, ಯಾವುದೇ ಒಂದು ಮನೆಯ ಕುರಿತು ಹೇಳುವುದಾದರೆ 3300GB ತುಂಬಾ ಜಾಸ್ತಿಯಾಗುತ್ತದೆ. ಯೋಜನೆಯು ACT Stream TV 4K (ತಿಂಗಳಿಗೆ Rs 200), ZEE5 ಪ್ರೀಮಿಯಂ ಚಂದಾದಾರಿಕೆ (ತಿಂಗಳಿಗೆ Rs 449), Hungama (ತಿಂಗಳಿಗೆ Rs 99), SonyLIV (ತಿಂಗಳಿಗೆ Rs 299), ಆಹಾ (ಬೆಲೆ Rs. 349 ವರ್ಷಕ್ಕೆ) ಸೇರಿದಂತೆ ಇನ್ನೂ ಹೆಚ್ಚುವರಿ ಪ್ರಯೋಜನಗಳೊಂದಿಗೆ ಬರುತ್ತದೆ. ಇದರಲ್ಲಿ ACT ಶೀಲ್ಡ್ ಕೂಡ ಶಾಮೀಲಾಗಿದೆ.


ಇದನ್ನೂ ಓದಿ-Jio ಬಳಕೆದಾರರಿಗೆ ಮತ್ತೊಂದು ಬಿಗ್ ಶಾಕ್! ಎಲ್ಲಾ ಪ್ರಿಪೇಯ್ಡ್ ಪ್ಲಾನ್ ಗಳ ದರಗಳಲ್ಲಿ ಶೇ.20 ರಷ್ಟು ಹೆಚ್ಚಳ


ಈ ಪ್ಲಾನ್ ಅನ್ನು ಕೂಡ ನೀವು ಖರೀದಿಸಬಹುದು
ನೀವು ಇದೇ ರೀತಿಯ ನಿಯಮಗಳು ಮತ್ತು ಷರತ್ತುಗಳೊಂದಿಗೆ ಸ್ವಲ್ಪ ಹೆಚ್ಚು ಕೈಗೆಟುಕುವ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಬಯಸುತ್ತಿದ್ದರೆ, ನೀವು ACT ನ ತಿಂಗಳಿಗೆ ರೂ 1425 ಯೋಜನೆಯ ಕುರಿತೂ ಕೂಡ ಆಲೋಚಿಸಬಹುದು, ಇದು ಬಳಕೆದಾರರಿಗೆ 350 Mbps ವೇಗದಲ್ಲಿ ಇಂಟರ್ನೆಟ್ ಒದಗಿಸುತ್ತದೆ. ಈ ಯೋಜನೆಯು ಅನಿಯಮಿತ ಡೇಟಾದೊಂದಿಗೆ ಬರುತ್ತದೆ (ತಿಂಗಳಿಗೆ 3.3TB). ಇದರೊಂದಿಗೆ ನಿಮಗೆ ಮೇಲಿನ ಪ್ಲಾನ್ ನಲ್ಲಿ ನೀಡಲಾಗಿರುವ ಎಲ್ಲಾ ಪ್ರಯೋಜನಗಳು ಸಿಗುತ್ತವೆ.

ಗಮನಿಸಿ- ತಾನು ಸೇವೆಯನ್ನು ಒದಗಿಸುವ ಪ್ರತಿಯೊಂದು ವಲಯದಲ್ಲಿ ACT ಏಕರೂಪದ ಯೋಜನೆಯನ್ನು ಹೊಂದಿರದ ಕಾರಣ ಈ ಯೋಜನೆಗಳ ಲಭ್ಯತೆ ಇತರೆ ನಗರಗಳಲ್ಲಿ ಇಲ್ಲದೆ ಇರಬಹುದು. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.