Cheapest Recharge Plan: BSNL ಕಂಪನಿಯ ಬಂಬಾಟ್ ಪ್ಲಾನ್: ಕೇವಲ ರೂ.197ಕ್ಕೆ 150 ದಿನಗಳವರೆಗೆ ನಿತ್ಯ 2GB ಡೇಟಾ!
BSNL Prepaid Plan: ಭಾರತೀಯ ಟೆಲಿಕಾಂ ಕಂಪನಿಗಳು ಇತ್ತೀಚೆಗಷ್ಟೇ ತಮ್ಮ ಪ್ರೀಪೇಡ್ ಪ್ಲಾನ್ ಗಳಲ್ಲಿ ಭಾರಿ ಏರಿಕೆಯನ್ನು ಮಾಡಿವೆ. ಈ ಬೆಲೆ ಹೆಚ್ಚಳದ ನಡುವೆಯೇ BSNL ಕಳೆದ ಕೆಲ ತಿಂಗಳಿನಿಂದ ಆಕರ್ಷಕ ಪ್ಲಾನ್ ಗಳನ್ನು ಜಾರಿ ಮಾಡಿದೆ.
BSNL Prepaid Plan: ಭಾರತೀಯ ಟೆಲಿಕಾಂ ಕಂಪನಿಗಳು ಇತ್ತೀಚೆಗಷ್ಟೇ ತಮ್ಮ ಪ್ರೀಪೇಡ್ ಪ್ಲಾನ್ ಗಳಲ್ಲಿ ಭಾರಿ ಏರಿಕೆಯನ್ನು ಮಾಡಿವೆ. ಈ ಬೆಲೆ ಹೆಚ್ಚಳದ ನಡುವೆಯೇ BSNL ಕಳೆದ ಕೆಲ ತಿಂಗಳಿನಿಂದ ಆಕರ್ಷಕ ಪ್ಲಾನ್ ಗಳನ್ನು ಜಾರಿ ಮಾಡಿದೆ. ಇಂದು ನಾವು ನಿಮಗೆ BSNL ಕಂಪನಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ ರೂ.197ರ ಪ್ರೀಪೇಡ್ ರಿಚಾರ್ಜ್ ಯೋಜನೆಯ (BSNL Latest Plan Update) ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಪ್ಲಾನ್ ನಿತ್ಯ 2 ಜಿಬಿ ಡೇಟಾ ಜೊತೆಗೆ 150 ದಿನಗಳ ಸಿಂಧುತ್ವ ಹೊಂದಿದೆ. ಬಿಎಸ್ಎನ್ಎಲ್ ಕಂಪನಿಯ ಈ ಪ್ಲಾನ್ ಎಷ್ಟೊಂದು ಅಗ್ಗವಾಗಿದೆ ಎಂದರೆ, Airtel, Jio ಹಾಗೂ Vi ಕಂಪನಿಯ ಎಲ್ಲಾ ಪ್ಲಾನ್ ಗಳು ಇದರ ಮುಂದೆ ಫೈಲ್ ಸಾಬೀತಾಗುತ್ತವೆ. ಈ ಪ್ಲಾನ್ ನ ಎಲ್ಲಾ ವಿಶೇಷತೆಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.
BSNL ರೂ 197 ಪ್ರಿಪೇಯ್ಡ್ ಯೋಜನೆಯ ಲಾಭಗಳು (BSNL Latest News)
BSNL ರೂ 197 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಇಲ್ಲಿಯವರೆಗೆ ಲಭ್ಯವಿರುವ ಅತ್ಯಂತ ಆಕರ್ಷಕ ರೀಚಾರ್ಜ್ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯೊಂದಿಗೆ, ಬಳಕೆದಾರರು ಅನಿಯಮಿತ ಕರೆ, 2GB ದೈನಂದಿನ ಡೇಟಾ ಮತ್ತು ಉಚಿತ SMS ಸೌಲಭ್ಯ ಪಡೆಯುತ್ತಾರೆ. ರೂ 197 ರ ಯೋಜನೆಯಲ್ಲಿ ಗ್ರಾಹಕರು 150 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ.
ಇದನ್ನೂ ಓದಿ-Dark Web ಅಂದರೇನು? ಹೇಗೆ ಅಪರಾಧಿಗಳು ಅದನ್ನು ಬಳಕೆ ಮಾಡುತ್ತಾರೆ?
ಮೊದಲ 18 ದಿನಗಳವರೆಗೆ 2GB ದೈನಂದಿನ ಡೇಟಾ ಲಭ್ಯವಿರುತ್ತದೆ ಮತ್ತು ಅದರ ನಂತರ, ನಂತರ 40kbps ವೇಗದಲ್ಲಿ ಇಂಟರ್ನೆಟ್ ಸೇವೆಗಳನ್ನು ಬಳಸಬಹುದು. ಅಂತೆಯೇ, BSNL ನ 197 ರೂ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯೊಂದಿಗೆ, ಮೊದಲ 18 ದಿನಗಳವರೆಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನವೂ ಲಭ್ಯವಿರುತ್ತದೆ. ಒಳಬರುವ ಕರೆಗಳು ಸಂಪೂರ್ಣ ಯೋಜನೆಯ ಮಾನ್ಯತೆಯ ಅವಧಿಯಲ್ಲಿ (150 ದಿನಗಳು) ಉಚಿತವಾಗಿ ಮುಂದುವರಿಯುತ್ತದೆ, ಆದರೆ ನೀವು ಮೊದಲ 18 ದಿನಗಳ ನಂತರ ಫೋನ್ ಕರೆಗಳನ್ನು ಮಾಡಲು ಬಯಸಿದರೆ, ನಿಮ್ಮ ಯೋಜನೆಯನ್ನು ನೀವು ಟಾಪ್-ಅಪ್ ಮಾಡಬೇಕಾಗುತ್ತದೆ.
ಇದನ್ನೂ ಓದಿ-Flipkart Electronics Sale: 40-ಇಂಚಿನ ಸ್ಮಾರ್ಟ್ ಟಿವಿಯನ್ನು 5 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ
ಇದರಲ್ಲಿ, ನಿಮಗೆ ಪ್ರತಿದಿನ 100 GB ಡೇಟಾ ಮತ್ತು Zing ಅಪ್ಲಿಕೇಶನ್‌ನ ಉಚಿತ ಚಂದಾದಾರಿಕೆಯನ್ನು ಸಹ ನೀಡಲಾಗುತ್ತದೆ. ಆದರೆ, ಈ ಸೌಲಭ್ಯವು ಮೊದಲ 18 ದಿನಗಳವರೆಗೆ ಮಾತ್ರ ಲಭ್ಯವಿದೆ. ಪ್ರಯೋಜನಗಳು ಮುಗಿದ ನಂತರ, ಬಳಕೆದಾರರು ಇಂಟರ್ನೆಟ್ ಮತ್ತು ಕರೆ ಸೌಲಭ್ಯಗಳೊಂದಿಗೆ ಮುಂದುವರಿಯಲು ಟಾಪ್-ಅಪ್ ಯೋಜನೆ ಮತ್ತು ಡೇಟಾ ವೋಚರ್‌ಗಳನ್ನು ಆರಿಸಿಕೊಳ್ಳಬಹುದು. 180 ದಿನಗಳ ಮಾನ್ಯತೆಯೊಂದಿಗೆ, ಬಳಕೆದಾರರು ತಮ್ಮ BSNL ಸಂಖ್ಯೆಯನ್ನು ಟಾಪ್ ಅಪ್ ಮಾಡದೆಯೇ ಬಳಸುವುದನ್ನು ಮುಂದುವರಿಸಬಹುದು. ಹೆಚ್ಚು ಕರೆಗಳನ್ನು ಸ್ವೀಕರಿಸುವ ಆದರೆ ಸ್ವತಃ ಯಾವುದೇ ಕರೆಗಳನ್ನು ಮಾಡದವರಿಗೆ ಇದು ಉತ್ತಮ ಯೋಜನೆಯಾಗಿದೆ.
ಇದನ್ನೂ ಓದಿ-iPhone ಮೇಲೆ ಭಾರೀ ಡಿಸ್ಕೌಂಟ್ , ಕೇವಲ 13 ಸಾವಿರ ರೂಪಾಯಿಗೆ ಸಿಗಲಿದೆ ದುಬಾರಿ ಫೋನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ