Cheapest Recharge Plan: ನಿತ್ಯ 3 ಜಿಬಿ ಡೇಟಾ ಸೇರಿದಂತೆ ರಾತ್ರಿಯಿಡೀ ಪುಕ್ಸಟ್ಟೆ ಇಂಟರ್ನೆಟ್ ನೀಡುತ್ತಿದೆ ಈ ಟೆಲಿಕಾಂ ಕಂಪನಿ
Cheapest Recharge Plan: ನಿತ್ಯ 3GB ಡೇಟಾ ಮತ್ತು ರಾತ್ರಿಯಲ್ಲಿ ಅನಿಯಮಿತ ಉಚಿತ ಇಂಟರ್ನೆಟ್ ಹೊರತುಪಡಿಸಿ, ವಿಐ ಕಂಪನಿಯು ಈ ಯೋಜನೆಯಲ್ಲಿ 2GB ವರೆಗಿನ ಮಾಸಿಕ ಬ್ಯಾಕಪ್ ಡೇಟಾವನ್ನು ಸಹ ನೀಡುತ್ತದೆ, ಅದು ಕೂಡ ಸಂಪೂರ್ಣವಾಗಿ ಉಚಿತವಾಗಿರಲಿದೆ.
Cheapest Recharge Plan: ಸಾಮಾನ್ಯವಾಗಿ ಅಗ್ಗದ ರೀಚಾರ್ಜ್ ಯೋಜನೆಗಳಿಗೆ BSNL ಕಂಪನಿ ಖ್ಯಾತಿ ಪಡೆದಿದೆ, ಆದರೆ ಖಾಸಗಿ ಟೆಲಿಕಾಂ ಕಂಪನಿಗಳೂ ಕೂಡ ತನ್ನ ಬಳಕೆದಾರರನ್ನು ಆಕರ್ಷಿಸಲು ಹಲವು ಉತ್ತಮ ರೀಚಾರ್ಜ್ ಯೋಜನೆಗಳನ್ನು ಜಾರಿಗೆ ತರುತ್ತವೆ. Vi (ವೋಡಾಫೋನ್ ಐಡಿಯಾ) ತನ್ನ ಹಲವು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳಲ್ಲಿ ಬಳಕೆದಾರರಿಗೆ ಸಾಕಷ್ಟು ಡೇಟಾ ಸೌಲಭ್ಯವನ್ನು ನೀಡುತ್ತಿದೆ. ನೀವೂ ಕೂಡ ಒಂದು ವೇಳೆ ಕಡಿಮೆ ಬೆಲೆಯಲ್ಲಿ ಗರಿಷ್ಠ ಡೇಟಾವನ್ನು ಹೊಂದಿರುವ ಯೋಜನೆಯನ್ನು ಹುಡುಕುತ್ತಿದ್ದರೆ, ಈ ಉಪಯುಕ್ತ ಮಾಹಿತಿ ನಿಮಗಾಗಿ.
ನಿಮಗೆ ನಿತ್ಯ 1.5GB ಅಥವಾ 2GB ಡೇಟಾವನ್ನು ಸಾಕಾಗುತ್ತಿಲ್ಲ ಎಂದಾದರೆ, Vi ಕಂಪನಿಯು ನಿಮಗಾಗಿ ಒಂದು ಅಗ್ಗದ ರೀಚಾರ್ಜ್ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಬೆಲೆ 400 ರೂ.ಗಿಂತ ಕಡಿಮೆಯಾಗಿದೆ.
ವಿಐ ಕಂಪನಿಯ ಈ ರೀಚಾರ್ಜ್ ಪ್ಲಾನ್‌ನ ಬೆಲೆ ರೂ 359 ಆಗಿದ್ದು, ಇದರಲ್ಲಿ ನೀವು ನಿತ್ಯ 3GB ಡೇಟಾಗೆ ಪಡೆಯಬಹುದು. ಇದಲ್ಲದೆ, ಈ ಯೋಜನೆಯು ಅನಿಯಮಿತ ಧ್ವನಿ ಕರೆ ಸೌಲಭ್ಯವನ್ನು ಒದಗಿಸುತ್ತದೆ, ಇದರಲ್ಲಿ ನೀವು ಸ್ಥಳೀಯ ಮತ್ತು STD ಕರೆಗಳನ್ನು ಆನಂದಿಸಬಹುದು. ಅಷ್ಟೇ ಅಲ್ಲ, ಈ ಯೋಜನೆಯಲ್ಲಿ ನೀವು ಪ್ರತಿದಿನ 100 ಉಚಿತ SMS ಕಳುಹಿಸಬಹುದು. ಈ ಯೋಜನೆಯು ಕೇವಲ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ ಎಂಬುದು ಇಲ್ಲಿ ಗಮನಾರ್ಹ.
ಈ ಯೋಜನೆಯ ಮಾನ್ಯತೆಯ ಅವಧಿ ಕಡಿಮೆಯಾಗಿದ್ದರೂ ಕೂಡ ಈ ಯೋಜನೆಯ ಅಡಿಯಲ್ಲಿನ ಪ್ರಯೋಜನಗಳು ಮಾತ್ರ ಪೈಸಾ ವಸೂಲ್ ಪ್ರಯೋಜನಗಳಾಗಿವೆ. ಮೇಲೆ ಉಲ್ಲೇಖಿಸಲಾಗಿರುವ ಟೆಲಿಕಾಂ ಪ್ರಯೋಜನಗಳ ಹೊರತಾಗಿ, ಈ ಯೋಜನೆಯು ನಿಮಗೆ ಅನೇಕ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯಂತೆ, ಕಂಪನಿಯು 2GB ವರೆಗಿನ ಮಾಸಿಕ ಬ್ಯಾಕಪ್ ಡೇಟಾವನ್ನು ನೀಡುತ್ತದೆ, ಅದು ಕೂಡ ಸಂಪೂರ್ಣವಾಗಿ ಉಚಿತವಾಗಿದೆ.
ಇದನ್ನೂ ಓದಿ-Airtel ಉಚಿತವಾಗಿ ನೀಡುತ್ತಿದೆ 1ಜಿಬಿ ಡೇಟಾ, ಈ ಕೊಡುಗೆ ಕೇವಲ ಮೂರು ದಿನಗಳವರೆಗೆ ಇರಲಿದೆ
ಈ ಯೋಜನೆಯಲ್ಲಿ ಹಲವು ಹೆಚ್ಚುವರಿ ಪ್ರಯೋಜನಗಳು ಲಭ್ಯವಿದೆ
ಇದರ ಹೊರತಾಗಿ, ಯೋಜನೆಯು ಡೇಟಾ ರೋಲ್‌ಓವರ್ ಮತ್ತು ರಾತ್ರಿ ಡೇಟಾ ಪ್ರಯೋಜನಗಳನ್ನು ಸಹ ಒಳಗೊಂಡಿದೆ. ಡೇಟಾ ರೋಲ್‌ಓವರ್ ಕುರಿತು ಹೇಳುವುದಾದರೆ, ಇದರ ಅಡಿಯಲ್ಲಿ ಬಳಕೆದಾರರು ವಾರಾಂತ್ಯದಲ್ಲಿ (ಶನಿವಾರ ಮತ್ತು ಭಾನುವಾರ) ಸೋಮವಾರದಿಂದ ಶುಕ್ರವಾರದವರೆಗೆ ಉಳಿದ ಡೇಟಾವನ್ನು ಬಳಸುವ ಸೌಲಭ್ಯವನ್ನು ಪಡೆಯುತ್ತಾರೆ. ರಾತ್ರಿ ಡೇಟಾ ಪ್ರಯೋಜನಗಳಲ್ಲಿ, ಬಳಕೆದಾರರು ಮಧ್ಯ ರಾತ್ರಿ 12 ರಿಂದ ಬೆಳಗ್ಗೆ 6 ರವರೆಗೆ ಅನಿಯಮಿತ ಉಚಿತ ಇಂಟರ್ನೆಟ್ ಬಳಸಬಹುದಾಗಿದೆ. ಇದರರ್ಥ ನೀವು ರಾತ್ರಿಯಲ್ಲಿ ಅನಿಯಮಿತ ಇಂಟರ್ನೆಟ್ ಅನ್ನು ಬಳಸಬಹುದು ಮತ್ತು ನಿಮ್ಮ ದೈನಂದಿನ ಡೇಟಾ ಕೋಟಾದಿಂದ ಡೇಟಾವನ್ನು ಇದರಲ್ಲಿ ಕಡಿತಗೊಳಿಸಲಾಗುವುದಿಲ್ಲ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.