Cheapest Recharge Plans - ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಬಳಕೆದಾರರಿಗೆ ಎರಡು ಹೊಸ ಮಾಸಿಕ ರೀಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಇಂದಿನಿಂದ ಬಳಕೆದಾರರು ಈ ಪ್ಲಾನ್ ಅನ್ನು ಸಕ್ರೀಯಗೊಳಿಸಬಹುದಾಗಿದೆ. ಈ ಪ್ಲಾನ್ ಗಳ ವಿಶೇಷತೆ ಎಂದರೆ, ಈ ಎರಡೂ ಪ್ಲಾನ್ ಗಳ ಬೆಲೆ ರೂ.250ಕ್ಕಿಂತಲೂ ಕೂಡ ಕಡಿಮೆಯಾಗಿದೆ. ಒಂದು ವೇಳೆ ನೀವೂ ಕೂಡ ಬಿಎಸ್ಎನ್ಎಲ್ ಗ್ರಾಹಕರಾಗಿದ್ದು, ಅಗ್ಗದ ರಿಚಾರ್ಜ್ ಯೋಜನೆಯ ಹುಡುಕಾಟದಲ್ಲಿದ್ದರೆ, ಈ ಪ್ಲಾನ್ ಗಳು ನಿಮ್ಮ ಪಾಲಿಗೆ ಪರ್ಫೆಕ್ಟ್ ಸಾಬೀತಾಗಲಿವೆ.

COMMERCIAL BREAK
SCROLL TO CONTINUE READING

ಬಿಎಸ್ಎನ್ಎಲ್ ನ ಈ ಎರಡೂ ರೀಚಾರ್ಜ್ ಯೋಜನೆಗಳ ಬೆಲೆ ರೂ.228 ಹಾಗೂ ರೂ.239 ಆಗಿದೆ. ಈ ಯೋಜನೆಗಳಲ್ಲಿ ಒಟ್ಟು ತಿಂಗಳ ಒಟ್ಟು ಅವಧಿ 28 ದಿನಗಳ ಬದಲಿಗೆ 30 ದಿನಗಳು ಆಗಿರಲಿದೆ. ಟೆಲಿಕಾಂ ಟಾಕ್ ಈ ಯೋಜನೆಗಳ ಲಾಂಚ್ ಮಾಹಿತಿಯನ್ನು ಮೊಟ್ಟಮೊದಲು ನೀಡಿದೆ. 

ಬಿಎಸ್ಎನ್ಎಲ್ ರೂ.228 ಪ್ರಿಪೇಯ್ಡ್ ಯೋಜನೆ
BSNL ನ ರೂ 228 ರೀಚಾರ್ಜ್ ಪ್ಲಾನ್ ಕುರಿತು ಹೇಳುವುದಾದರೆ, ಈ ಯೋಜನೆಯನ್ನು ಸಕ್ರೀಯಗೊಳಿಸಿ ನೀವು ಅನಿಯಮಿತ ಧ್ವನಿ ಕರೆಯನ್ನು ಪಡೆಯುತ್ತೀರಿ. ಇದರರ್ಥ ನೀವು ಈ ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್‌ಗೆ ಉಚಿತ ಕರೆ ಮಾಡುವ ಪ್ರಯೋಜನವನ್ನು 30 ದಿನಗಳವರೆಗೆ ಯಾವುದೇ ಅಡಚಣೆಯಿಲ್ಲದೆ ಪಡೆಯಬಹುದು. ಇದಲ್ಲದೆ, ಈ ಯೋಜನೆಯು ಪ್ರತಿದಿನ 2GB ಡೇಟಾವನ್ನು ನೀಡುತ್ತದೆ. ದೈನಂದಿನ ಡೇಟಾ ಕೋಟಾ ಮುಗಿದ ನಂತರ ಇಂಟರ್ನೆಟ್ ವೇಗವು 80 Kbps ಗೆ ಇಳಿಯುತ್ತದೆ. ಇದರೊಂದಿಗೆ, ಯೋಜನೆಯಲ್ಲಿ ಪ್ರತಿದಿನ 100 ಉಚಿತ ಎಸ್‌ಎಂಎಸ್ ಸೌಲಭ್ಯವೂ ಲಭ್ಯವಿದೆ.


ಇದನ್ನೂ ಓದಿ-Flipkart Big Bachat Dhamaal sale: ಇಂದಿನಿಂದ ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಕಾ ಸೇಲ್ ಆರಂಭ


BSNL ರೂ 239 ಪ್ರಿಪೇಯ್ಡ್ ಯೋಜನೆ
BSNL ನ ರೂ 239 ರೀಚಾರ್ಜ್ ಯೋಜನೆಯಲ್ಲಿ, ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆಯೊಂದಿಗೆ ರೂ 10 ಹೆಚ್ಚುವರಿ ಟಾಕ್ ಟೈಮ್ ನೀಡಲಾಗುತ್ತದೆ. ಇದಲ್ಲದೆ, ಈ ಯೋಜನೆಯು ದೈನಂದಿನ 2GB ಡೇಟಾವನ್ನು ಸಹ ನೀಡುತ್ತದೆ, ಇದರಲ್ಲಿ ದೈನಂದಿನ ಡೇಟಾ ಕೋಟಾ ಮುಗಿದ ನಂತರ ಇಂಟರ್ನೆಟ್ ವೇಗವು 80Kbps ಗೆ ಇಳಿಯುತ್ತದೆ. ಇದರೊಂದಿಗೆ, ಯೋಜನೆಯಲ್ಲಿ ಪ್ರತಿದಿನ 100 ಉಚಿತ ಎಸ್‌ಎಂಎಸ್ ಸೌಲಭ್ಯವೂ ಲಭ್ಯವಿದೆ.


ಇದನ್ನೂ ಓದಿ-ಹೀಗೆ ಮಾಡಿದರೆ block ಆದ WhatsApp ಅಕೌಂಟ್ ಅನ್ಲಾಕ್ ಮಾಡಬಹುದು


BSNL ನ ಈ ಯೋಜನೆಯು ಖಾಸಗಿ ಟೆಲಿಕಾಂ ಕಂಪನಿಗಳಿಗೆ ಈ ರೀತಿ ಪೈಪೋಟಿ ನೀಡಲಿದೆ
ಜಿಯೋ ತನ್ನ ರೂ 259 ಯೋಜನೆಯಲ್ಲಿ ಮಾಸಿಕ ಮಾನ್ಯತೆಯನ್ನು ನೀಡುತ್ತದೆ. ಪ್ರಯೋಜನಗಳ ರೂಪದಲ್ಲಿ, ಈ ಪ್ಲಾನ್ ಬಳಕೆದಾರರು ಪ್ರತಿದಿನ 1.5 GB ಡೇಟಾ, ಅನಿಯಮಿತ ಕರೆ ಮತ್ತು 100 ಉಚಿತ SMS ಅನ್ನು ಪಡೆಯುತ್ತಾರೆ. ಏರ್‌ಟೆಲ್‌ನ ಮಾಸಿಕ ಪ್ಲಾನ್ 296 ರೂ ಆಗಿದೆ, ಇದರಲ್ಲಿ ಒಟ್ಟು 25GB ಡೇಟಾ ನೀಡಲಾಗುತ್ತದೆ. ಜೊತೆಗೆ ಅನಿಯಮಿತ ಕರೆ ಮತ್ತು 100 ದೈನಂದಿನ SMS ಸೌಲಭ್ಯ ಕೂಡ ಇದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.