6 ಲಕ್ಷಕ್ಕಿಂತ ಕಡಿಮೆ ಬೆಲೆಯ SUV ಇವು ! ವೈಶಿಷ್ಟ್ಯ ಕೂಡಾ ಸೂಪರ್
ಪಂಚ್ SUV ಅಲ್ಲದೆ ಕೈಗೆಟಕುವ ದರದಲ್ಲಿ 3 SUVಗಳು ಮಾರುಕಟ್ಟೆಯಲ್ಲಿವೆ. ವೈಶಿಷ್ಟ್ಯಗಳ ವಿಚಾರಕ್ಕೆ ಬಂದರೆ ಈ ಕಾರುಗಳು ಪಂಚ್‌ಗಿಂತ ಕಡಿಮೆಯೇನಿಲ್ಲ.
ಬೆಂಗಳೂರು : ಕೈಗೆಟುಕುವ ಬೆಲೆಯ SUV ಕಾರುಗಳ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದೆ. ಹಲವಾರು ಕಂಪನಿಗಳು ಈ ವಿಭಾಗದಲ್ಲಿ ಕಾರು ಬಿಡುಗಡೆ ಮಾಡುತ್ತಿದ್ದರೂ, ಟಾಟಾ ಪಂಚ್ ಎಸ್‌ಯುವಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಟಾಟಾ ಪಂಚ್‌ನ ಬೆಲೆ 6 ಲಕ್ಷದಿಂದ ಪ್ರಾರಂಭವಾಗಿ 10 ಲಕ್ಷ ರೂವರೆಗೆ ಏರುತ್ತದೆ. ಆದರೆ ಪಂಚ್ SUV ಅಲ್ಲದೆ ಕೈಗೆಟಕುವ ದರದಲ್ಲಿ 3 SUVಗಳು ಮಾರುಕಟ್ಟೆಯಲ್ಲಿವೆ. ವೈಶಿಷ್ಟ್ಯಗಳ ವಿಚಾರಕ್ಕೆ ಬಂದರೆ ಈ ಕಾರುಗಳು ಪಂಚ್‌ಗಿಂತ ಕಡಿಮೆಯೇನಿಲ್ಲ.
ನಿಸ್ಸಾನ್ ಮ್ಯಾಗ್ನೈಟ್ :
ನಿಸ್ಸಾನ್ ಮ್ಯಾಗ್ನೈಟ್ ಬೆಲೆ 5.97 ಲಕ್ಷದಿಂದ 10.79 ಲಕ್ಷದವರೆಗೆ ಇರುತ್ತದೆ. ಇದು 1-ಲೀಟರ್ (ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ (100PS ಮತ್ತು 160Nm) ಹೀಗೆ ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 5-ಸ್ಪೀಡ್ ಮ್ಯಾನುವಲ್ ಮತ್ತು CVT ಆಯ್ಕೆಯನ್ನು ಗೇರ್ ಬಾಕ್ಸ್ ಆಗಿ ನೀಡಲಾಗಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 16-ಇಂಚಿನ ಡ್ಯುಯಲ್-ಟೋನ್ ಎಲಾಯ್, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಎಲ್‌ಇಡಿ ಹೆಡ್‌ಲೈಟ್ ಮತ್ತು ರಿಯರ್ ವೆಂಟ್‌ಗಳೊಂದಿಗೆ ಆಟೋ ಏರ್ ಕಂಡೀಶನರ್ ಅನ್ನು ಒಳಗೊಂಡಿದೆ.
ಇದನ್ನೂ ಓದಿ : ಕನಸಿನ ಕಾರು ಖರೀದಿ ಇನ್ನು ಸುಲಭವಲ್ಲ! ಬಜೆಟ್ ಬಳಿಕ ಬಲು ದುಬಾರಿಯಾಗಿವೆ ಈ ಕಾರುಗಳು
ರೆನಾಲ್ಟ್ ಕಿಗರ್ :
ರೆನಾಲ್ಟ್ ಕಿಗರ್ ನಿಸ್ಸಾನ್ ಮ್ಯಾಗ್ನೈಟ್ ಅನ್ನು ಬಹುತೇಕ ಹೋಲುತ್ತದೆ. ಇದರ ಬೆಲೆ 6 ಲಕ್ಷದಿಂದ 10.77 ಲಕ್ಷದವರೆಗೆ ಇರುತ್ತದೆ. ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 1-ಲೀಟರ್ (72PS ಮತ್ತು 96Nm) ಪೆಟ್ರೋಲ್ ಮತ್ತು 1-ಲೀಟರ್ ಟರ್ಬೊ-ಪೆಟ್ರೋಲ್ (100PS ಮತ್ತು 160Nm). 5-ಸ್ಪೀಡ್ ಮ್ಯಾನುವಲ್ ಮತ್ತು CVT ಆಯ್ಕೆಯನ್ನು ಗೇರ್ ಬಾಕ್ಸ್ ಆಗಿ ನೀಡಲಾಗಿದೆ. ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಹೊಂದಿರುವ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 7-ಇಂಚಿನ ಡಿಜಿಟಲ್ ಡ್ರೈವರ್‌ಸ್ ಡಿಸ್ಪ್ಲೇ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್ ಮತ್ತು ಏರ್ ಫಿಲ್ಟರ್ ಅನ್ನು ಒಳಗೊಂಡಿದೆ.
ಮಹೀಂದ್ರಾ KUV100 NXT :
ಮಹೀಂದ್ರಾ KUV100 NXT ಬೆಲೆ 6.18 ಲಕ್ಷದಿಂದ 7.92 ಲಕ್ಷ . ಮಹೀಂದ್ರಾ KUV100 NXT ಅನ್ನು 1.2-ಲೀಟರ್ ಪೆಟ್ರೋಲ್ ಎಂಜಿನ್ (82PS/115Nm) ಜೊತೆಗೆ 5-ಸ್ಪೀಡ್ ಮ್ಯಾನುವಲ್‌ಗೆ ಜೋಡಿಸಲಾಗಿದೆ. ಇದು ಬ್ಲೂಟೂತ್ ಮತ್ತು AUX ಕನೆಕ್ಷನ್ ನೊಂದಿಗೆ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಮತ್ತು ಕಾಲಿಂಗ್ ಕಂಟ್ರೋಲ್ ಮತ್ತು ಹೈಟ್ ಅಡ್ಜಸ್ಟೇಬಲ್ ಸೀಟ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
ಇದನ್ನೂ ಓದಿ : ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಹೊಸ ಪವರ್‌ಬ್ಯಾಂಕ್
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.